ಹಾವೇರಿ: ಚುನಾವಣಾ ಅಕ್ರಮಗಳ ಬಗ್ಗೆ ಜಿಲ್ಲೆಯಾದ್ಯಂತ ತೀವ್ರ ನಿಗಾವಹಿಸಿದ್ದು, ನೀತಿ ಸಂಹಿತೆ ಜಾರಿಗೆ ಬಂದ ಶನಿವಾರದಿಂದಲೇ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ನಿಯೋಜಿತ ಸಿಬ್ಬಂದಿಗಳು ಕಾರ್ಯನಿರತವಾಗಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಅವರು ನಗರದ ಆರ್‌ಟಿಓ ಬಳಿ, ಹಾನಗಲ್ ತಾಲೂಕು ಗೊಂದಿ, ಹೈಳ್ಳಿಬೈಲ್ ಸೇರಿದಂತೆ ವಿವಿಧ ಚೆಕ್ ಪೋಸ್ಟ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದರು.
ರೋಣ ಕ್ಷೇತ್ರದಲ್ಲಿ ಮುಂಡರಲಗಿ ತಾಲೂಕು ಹಳ್ಳಿಕೇರಿ ಗ್ರಾಮದಲ್ಲಿ,ಹಿರೇಹಾಳ ಬಾದಾಮಿ ರಸ್ತೆ, ಗಜೇಂದ್ರಗಡ ಇಳಕಲ್ಲ ಕ್ರಾಸ್, ಗಜೇಂದ್ರಗಡ ರೋಣ ರಸ್ತೆಯಲ್ಲಿ ಚೆಕ್ ಪೋಸ್ಟ್ ಆರಂಭಿಸಲಾಗಿದೆ.
ಹಾನಗಲ್ ಕ್ಷೇತ್ರದ ಕೊಪ್ಪರಸಿಕೊಪ್ಪ, ಗೊಂದಿ, ಹಳ್ಳಿಬೈಲ್, ಸಮ್ಮಸಗಿ, ಹಾವೇರಿ ಕ್ಷೇತ್ರದ ಯಲವಿಗಿ, ಹಾವೇರಿ ಆರ್‌ಟಿಒ ಕಚೇರಿ, ತೆರೆದಹಳ್ಳಿ, ಕಂಚಾರಗಟ್ಟಿ, ಬ್ಯಾಡಗಿ ಕ್ಷೇತ್ರದ ಕುಮ್ಮುರ ಕ್ರಾಸ್ ಹಾಗೂ ಮೋಟೆಬೆನ್ನೂರಿನಲ್ಲಿ ಚೆಕ್ ಪೋಸ್ಟ್ ಆರಂಭಿಸಲಾಗಿದೆ.ಹಿರೇಕೆರೂರು ಕ್ಷೇತ್ರದಲ್ಲಿ ಕೋಡಮಗ್ಗಿ, ಹಳ್ಳೂರು, ಹುಲಬಿಕೊಂಡ, ಜಾವಳ್ಳಿ ಹಾಗೂ ರಾಣಿಬೆನ್ನೂರು ಕ್ಷೇತ್ರದಲ್ಲಿ ಮಾಕನೂರ ಕ್ರಾಸ್, ತುಮ್ಮಿಕಟ್ಟಿ, ಹರನಗಿರಿ ಬ್ರಿಜ್ ಹಾಗೂ ಮಾಗೋಡ ಕ್ರಾಸ್‌ನಲ್ಲಿ ಚೆಕ್ ಪೋಸ್ಟ್ ಆರಂಭಿಸಲಾಗಿದೆ.