ದೇಶ, ರಾಜ್ಯ ಸುಭದ್ರತೆಗೆ ಕುಮಾರಣ್ಣನನ್ನು ಬೆಂಬಲಿಸಿ: ಬಿ.ಎಂ.ಕಿರಣ್

KannadaprabhaNewsNetwork | Published : Apr 25, 2024 1:00 AM

ಸಾರಾಂಶ

ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಇಲ್ಲಸಲ್ಲದ ಟೀಕೆ, ಮೂದಲಿಕೆ ಮಾಡುವುದು ಕಾಂಗ್ರೆಸ್‌ ಪಕ್ಷದ ಜಯಾಮಾನವಾಗಿದೆ. ಮೋದಿಜೀ ದೇಶದ ಆರ್ಥಿಕ ಭದ್ರತೆ ಜನರಿಗಾಗಿ ಗ್ಯಾರಂಟಿ ನೀಡಲಿದ್ದಾರೆ. ಮತಕ್ಕಾಗಿ ಎಂದು ಗ್ಯಾರಂಟಿಯ ತಾತ್ಕಾಲಿಕ ಆಸೆ ತೋರಿಸಲಾರರು ಎಂಬುದನ್ನು ಮತದಾರರು ಅರಿಯಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ದೇಶ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಸುಭದ್ರತೆಗೆ ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್ ಮನವಿ ಮಾಡಿದರು.

ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಜೆಡಿಎಸ್‌ ಬಿಜೆಪಿ ಮೈತ್ರಿ ಅಭ್ಯರ್ಥಿಎಚ್.ಡಿ. ಕುಮಾರಸ್ವಾಮಿ ಪರ ಮತಯಾಚನೆ ಮಾಡಿ ಮಾತನಾಡಿ, ರಾಜ್ಯ ಕಂಡ ಅಪರೂಪದ ರಾಜಕಾರಣಿ ಕುಮಾರಣ್ಣ. ಜನರು, ರೈತರ ಸಮಸ್ಯೆಗೆ ಧ್ವನಿ ಕೆಲಸ ಮಾಡುತ್ತಾರೆ. ಕಾವೇರಿಗಾಗಿ ತಮ್ಮ ಹೋರಾಟವನ್ನು ಉಸಿರಾಗಿಸಿಕೊಂಡಿದ್ದಾರೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಇಲ್ಲಸಲ್ಲದ ಟೀಕೆ, ಮೂದಲಿಕೆ ಮಾಡುವುದು ಕಾಂಗ್ರೆಸ್‌ ಪಕ್ಷದ ಜಯಾಮಾನವಾಗಿದೆ. ಮೋದಿಜೀ ದೇಶದ ಆರ್ಥಿಕ ಭದ್ರತೆ ಜನರಿಗಾಗಿ ಗ್ಯಾರಂಟಿ ನೀಡಲಿದ್ದಾರೆ. ಮತಕ್ಕಾಗಿ ಎಂದು ಗ್ಯಾರಂಟಿಯ ತಾತ್ಕಾಲಿಕ ಆಸೆ ತೋರಿಸಲಾರರು ಎಂಬುದನ್ನು ಮತದಾರರು ಅರಿಯಬೇಕು ಎಂದರು.

ಪ್ರಸ್ತುತ ಚುನಾವಣೆ ಹಣವಂತ ಮತ್ತು ಹೃದಯವಂತರ ಚುನಾವಣೆಯಲಾಗಿದೆ. ಮತದಾರರು ಜಾಣರಾಗಿದ್ದು, ಹಣದಿಂದ ಗೆಲುವು ಸಾಧ್ಯವಾಗಲಾರದು ಎಂಬುದನ್ನು ತೋರಿಸಿಕೊಡಬೇಕು ಎಂದು ವಿನಂತಿಸಿದರು.

ಈ ವೇಳೆ ಮುಖಂಡರಾದ ಕಾಯಿ ಮಂಜೇಗೌಡ, ರಂಗಪ್ಪ, ರಾಜೇಗೌಡ, ವಿಶ್ವನಾಥ್, ರೇವಣ್ಣ, ಶ್ರೀನಾಥ್, ಸೋಮಣ್ಣ, ಮಂಜು, ಶೇಖರ್, ದೇವರಾಜು ಉಪಸ್ಥಿತರಿದ್ದರು.ವಕೀಲರ ಸಂಘದಲ್ಲಿ ಎಚ್‌ಡಿಕೆ ಪ್ರಚಾರ

ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ಲೋಕಸಭಾ ಚುನಾವಣೆಯ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ನಗರದ ವಕೀಲರ ಸಂಘದಲ್ಲಿ ವಕೀಲರೊಂದಿಗೆ ಸಭೆ ನೆಡೆಸಿದರು.ಏಪ್ರಿಲ್ 26ರಂದು ನಡೆಯುವ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವಂತೆ ವಕೀಲರಲ್ಲಿ ಮನವಿ ಮಾಡಿ ಮಾತನಾಡಿದ ಅವರು, ನನ್ನ ಮೇಲೆ ನಂಬಿಕೆ, ವಿಶ್ವಾಸವಿಡಿ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನನ್ನದೇ ಆದ ಯೋಜನೆಗಳನ್ನು ರೂಪಿಸಿದ್ದೇನೆ ಎಂದರು.

ಜನಪ್ರತಿನಿಧಿಯಾಗಿ ಆಯ್ಕೆಯಾದರೆ ಪ್ರಾಮಾಣಿಕವಾಗಿ ಯಾವುದೇ ರಾಜಕೀಯ ಮಾಡದೆ ಜನಸಾಮಾನ್ಯರ ಕೆಲಸಗಳನ್ನು ಮಾಡಿಕೊಡುತ್ತೇನೆ. ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಇರಬೇಕು ಎಂದರು.ವಿಶೇಷವಾಗಿ ರಾಜ್ಯದ ನೀರಾವರಿ ಯೋಜನೆ ಸಮಸ್ಯೆಗಳನ್ನು ಸರಿಪಡಿಸುವ ಅವಕಾಶಗಳಿದ್ದು, ದೇವೇಗೌಡರೊಂದಿಗೆ ಪ್ರಧಾನಿ ಮೋದಿಯವರು ಗೌರವಯುತವಾಗಿದ್ದಾರೆ. ನನ್ನ ಮೇಲೂ ಪ್ರಧಾನಿ ಮೋದಿ ಅವರು ನಂಬಿಕೆ ವಿಶ್ವಾಸ ಇಟ್ಟಿದ್ದಾರೆ. ಆ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.

ಜೆಡಿಎಸ್ ಕಾನೂನು ಘಟಕದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಬಸವರಾಜು, ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ, ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಮಹೇಶ್ ಇತರರಿದ್ದರು.

Share this article