ನನ್ನನ್ನು ಬೆಂಬಲಿಸಿ, ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ: ಭಗವಂತ ಖೂಬಾ

KannadaprabhaNewsNetwork |  
Published : Mar 22, 2024, 01:00 AM IST
ಚಿತ್ರ 21ಬಿಡಿಆರ್56 | Kannada Prabha

ಸಾರಾಂಶ

ಬೀದರ್‌ನ ವಿವಿಧ ಗಣ್ಯರ ಮನೆಗೆ ಭೇಟಿಯಾಗಿ ಬೀದರ್‌ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನನ್ನನ್ನು ಮತ್ತೊಮ್ಮೆ ಆಶೀರ್ವದಿಸಬೇಕೆಂದು ಮನವಿ ಮಾಡಿಕೊಂಡರು. ಬಳಿಕ ನಗರದ ರಾಘವೇಂದ್ರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆದರು.

ಕನ್ನಡಪ್ರಭ ವಾರ್ತೆ ಬೀದರ್

ಕಳೆದ 10 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿಯಿಂದ ಬೀದರ್‌ ಚಿತ್ರಣ ದೇಶದಲ್ಲೆ ಬದಲಾಯಿಸಿರುವೆ. ಹಾಗಾಗಿ ಮತ್ತೊಮ್ಮೆ ನನಗೆ ಆಶೀರ್ವದಿಸಿ, ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ವಿನಂತಿಸಿಕೊಂಡರು.

ನಗರದ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ದರ್ಶನಾಶೀರ್ವಾದ ಪಡೆದುಕೊಂಡ ನಂತರ ನಗರದಲ್ಲಿರುವ ವಿವಿಧ ಗಣ್ಯರಾದ ಚೆಂಬರ್ ಆಫ್ ಕಾಮರ್ಸ್‌ ಅಧ್ಯಕ್ಷ ಬಿ.ಜಿ.ಶೆಟಕಾರ್, ಉದ್ಯಮಿಗಳಾದ ರಮೇಶ ಗೋಯಲ್, ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಡಾ. ಬಲಬೀರ್ ಸಿಂಗ್, ಶಾಮರಾವ, ಭೀಮರಾವ ಹಾಗೂ ಇತರೆ ಗಣ್ಯರ ಮನೆಗಳಿಗೆ ಭೇಟಿಕೊಟ್ಟು, ಬೀದರ್‌ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನನ್ನನ್ನು ಮತ್ತೊಮ್ಮೆ ಆಶೀರ್ವದಿಸಬೇಕೆಂದು ಮನವಿ ಮಾಡಿಕೊಂಡರು.

ಮೋದಿಯವರಿಗೆ ನನ್ನ ಕೆಲಸದ ಬಗ್ಗೆ ಗೊತ್ತಿದೆ, ಆದ್ದರಿಂದ ನನಗೆ ಮೂರನೆ ಬಾರಿಗೆ ಅವಕಾಶ ನೀಡಿದ್ದಾರೆ. ತಾವು ಸಹ ತಮ್ಮ ಸಮಾಜದ ಮುಖಂಡರಿಗೆ, ತಮ್ಮ ಹಿಂಬಾಲಕರಿಗೆ ತಿಳಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಮತ ಹಾಕಿಸಿ ನನಗೆ ಆಶೀರ್ವದಿಸುವುದರ ಜೊತೆಗೆ ಮೋದಿಯವರ ಶಕ್ತಿಯೂ ಹೆಚ್ಚಿಸಬೇಕೆಂದು ಮನವಿ ಮಾಡಿದರು.

ನಂತರ ಪಕ್ಷದ ಕಚೇರಿಯಲ್ಲಿ ಬೀದರ್‌ ಉತ್ತರದ ಕಾರ್ಯಕರ್ತರ ಸಭೆ ನಡೆಸಿ ಕಾಂಗ್ರೆಸ್ಸಿಗರು ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರ ವಿರುದ್ಧ ನಮ್ಮ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ದೇಶದ ಅಧಿಕಾರ ನಮ್ಮ ಪಕ್ಷಕ್ಕೆ ಮತ್ತೊಮ್ಮೆ ಸಿಗುವಲ್ಲಿ, ಮೋದಿಯವರಿಗೆ ಪ್ರಧಾನಿ ಮಾಡಬೇಕೆಂದು ಕೋರಿದರು.

ಮೋದಿ ಆಯ್ಕೆಯೆ ನಮ್ಮೆಲ್ಲರ ಆಯ್ಕೆ:

ಬೀದರ್‌ ದಕ್ಷಿಣ ಕ್ಷೇತ್ರದ ಕಮಠಾಣದಲ್ಲಿರುವ ಗವಿಮಠಕ್ಕೆ ತೆರಳಿ ದರ್ಶನಾಶೀರ್ವಾದ ಪಡೆದುಕೊಂಡು, ಪಕ್ಷದ ಕಾರ್ಯಕರ್ತರಾದ ವಿಜಯಕುಮಾರ ರಾಯಕೋಡೆ, ಉದಯ ಮಹಾರಾಜ, ಉಮೇಶ ಕೊಳೆ ಅವರ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳಿಯ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಭಗವಂತ ಖೂಬಾ ಮತ್ತೊಮ್ಮೆ ಸಂಸದರನ್ನಾಗಿ ಮಾಡಬೇಕೆಂದು ಆಯ್ಕೆ ಮಾಡಿದ್ದಾರೆ. ಆದ್ದರಿಂದ ಮೋದಿ ಆಯ್ಕೆಯೆ ನಮ್ಮೆಲ್ಲರ ಆಯ್ಕೆಯಾಗಬೇಕು. ಇದು ಪ್ರತಿಯೊಬ್ಬ ಕಾರ್ಯಕರ್ತರ ಕರ್ತವ್ಯ ಹಾಗೂ ಧರ್ಮವಾಗಿದೆ ಎಂದು ತಿಳಿಸಿದರು.

ದೇಶದ ಅಭಿವೃದ್ಧಿಗೆ ಮೋದಿ, ಬೀದರ್‌ ಕ್ಷೇತ್ರದ ಅಭಿವೃದ್ಧಿಗೆ ಭಗವಂತ ಖೂಬಾ ಬೇಕು. ಆದ್ದರಿಂದ ಈ 2 ತಿಂಗಳು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಿ ಎಂದು ಕಾರ್ಯಕರ್ತರಲ್ಲಿ ಡಾ. ಬೆಲ್ದಾಳೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸೊಮನಾಥ ಪಾಟೀಲ್, ಲೋಕಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ ಅಮರನಾಥ ಪಾಟೀಲ್, ವಿಭಾಗ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಮಾಜಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಮಂಡಲ ಅಧ್ಯಕ್ಷರಾದ ಶಶಿಧರ ಹೊಸಳ್ಳಿ, ರಾಜೆಂದ್ರ ಪೂಜಾರಿ, ರಾಜರೆಡ್ಡಿ ಶಾಬಾದ, ಜಿಲ್ಲಾ ವಕ್ತಾರರಾದ ಸದಾನಂದ ಜೋಷಿ, ಮುಖಂಡರಾದ ಪೀರಪ್ಪ ಯರನಳ್ಳಿ, ಮಲ್ಲಿಕಾರ್ಜುನ ಕುಂಬಾರ, ರಾಜಕುಮಾರ ಚಿದ್ರಿ, ಉಪೇಂದ್ರ ದೇಶಪಾಂಡೆ, ಸಂಗಮೇಶ ನಾಸಿಗಾರ, ಕುಶಾಲ ಯಾಬಾ, ನಾಗಭೂಷಣ ಕಮಠಾಣೆ, ಸುರೇಶ ಮಾಶೇಟ್ಟಿ, ಪ್ರಶಾಂತ ಸಿಂದೋಲ್ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ