ಗದಗ:ಕಳೆದ ೧೦ ವರ್ಷ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಪ್ರಧಾನಿ ಮೋದಿಯವರಿಗೆ ಮತ್ತೊಂದು ಅವಕಾಶ ನೀಡಬೇಕೆಂದು ಶಾಸಕ ಸಿ.ಸಿ.ಪಾಟೀಲ ಮನವಿ ಮಾಡಿದರು.
ಗದಗ ಗ್ರಾಮೀಣ ಭಾಗದ ಹಂಗನಕಟ್ಟಿ, ಸೊರಟೂರ, ಯಲಿಶಿರೂರ, ಶಿರೋಳ, ಶಿರುಂಜ,ಹೊಸೂರ, ಕಣವಿ, ಹರ್ತಿ, ಚಿಂಚಲಿ, ಕಲ್ಲೂರ ನೀಲಗುಂದ, ಹೊಸಳ್ಳಿ, ಕುರ್ತಕೋಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಕೈಗೊಂಡು ಮಾತನಾಡಿದರು.ಕಳೆದ ೧೦ ವರ್ಷಗಳಲ್ಲಿ ಇಡಿ ಜಗತ್ತೆ ಬೆರಗಾಗುವಂತೆ ಅಭಿವೃದ್ಧಿ ಮಾಡಿ ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಯು ಕೂಡಾ ಕೇಂದ್ರ ಸರ್ಕಾರದ ಯೋಜನೆಗಳು ಮನೆ ಮನೆಗೆ ತಲುಪುವ ಹಾಗೇ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು, ಗ್ರಾಮೀಣ ಭಾಗದ ಶುದ್ಧ ಕುಡಿವ ನೀರಿಗಾಗಿ ಜಲಜೀವನ್ ಮಿಷನ್, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ರೈತರಿಗಾಗಿ ಕಿಸಾನ್ ರೈಲು, ಪ್ರಧಾನ ಮಂತ್ರಿ ಬೆಳೆವಿಮೆ ಯೋಜನೆ, ರೈತರಿಗಾಗಿ ಬೇವು ಲೇಪಿತ ಯುರಿಯಾ, ಪ್ರತಿ ರೈತರಿಗೆ ವರ್ಷಕ್ಕೆ ₹೬ ಸಾವಿರ ಹೀಗೆ ರೈತರಿಗಾಗಿ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದು ಈ ಎಲ್ಲ ಯೋಜನೆಗಳೊಂದಿಗೆ ಹೊಸ, ಹೊಸ ಯೋಜನೆ ತರಲು ಹಾಗು ದೇಶದ ಭವ್ಯ ಭವಿಷ್ಯಕ್ಕಾಗಿ ಮತ್ತೊಮ್ಮೆ ಬಿಜೆಪಿಗೆ ಬೆಂಬಲಿಸಬೇಕೆಂದು ವಿನಂತಿಸಿದರು.
ಈ ವೇಳೆ ವಿಪ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ದ್ಯಾಮಣ್ಣ ನೀಲಗುಂದ, ಭದ್ರೇಶ ಕುಸ್ಲಾಪೂರ, ಬೂದಪ್ಪ ಹಳ್ಳಿ, ಎಚ್.ಸಿ. ಮಂಜುನಾಥಸ್ವಾಮಿ, ಅಶೋಕ ಸಂಕಣ್ಣವರ, ಸಿದ್ದಪ್ಪ ಪಲ್ಲೇದ, ನಿಂಗಪ್ಪ ಹುಗ್ಗಿ, ಅಶೋಕ ಕರೂರ, ಬಿ.ಸಿ.ಪಾಟೀಲ, ಕೆ.ಎನ್. ಹುಗ್ಗಿ, ಹೇಮರೆಡ್ಡಿ ಮಾಸರೆಡ್ಡಿ, ಬಸವರಾಜ ಗದಗಿನ, ಮಂಜುನಾಥ ಕುರಹಟ್ಟಿ, ಶಿವಾನಂದ ಅಕ್ಕಿ ಹಾಗು ಕಾರ್ಯಕರ್ತರು, ಅಭಿಮಾನಿಗಳು ಇದ್ದರು.