ಜಿಲ್ಲೆಯ ಹಿತದೃಷ್ಟಿಯಿಂದ ಹಾಲಿ ಪೆನಲ್‌ ಬೆಂಬಲಿಸಿ

KannadaprabhaNewsNetwork |  
Published : Oct 12, 2025, 01:02 AM IST
11ಬಿಎಸ್ವಿ01- ಬಸವನಬಾಗೇವಾಡಿಯ ಬಸವ ಭವನದಲ್ಲಿ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯ ಚುನಾವಣೆಯ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಹಕಾರ ಸಮಾಲೋಚನಾ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಶತಮಾನದ ಇತಿಹಾಸ ಹೊಂದಿರುವ ಶ್ರೀಸಿದ್ದೇಶ್ವರ ಸಹಕಾರಿ ಬ್ಯಾಂಕ್ ಶೇರುದಾರರು, ಮತದಾರರು ಬ್ಯಾಂಕ್ ಹಾಗೂ ಜಿಲ್ಲೆಯ ಹಿತದೃಷ್ಟಿಯಿಂದ ಹಾಲಿ ಪೆನಲ್ ಆಯ್ಕೆ ಮಾಡುವಂತೆ ಕೃಷಿ ಮಾರುಕಟ್ಟೆ ಸಚಿವ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಮನವಿ ಮಾಡಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಶತಮಾನದ ಇತಿಹಾಸ ಹೊಂದಿರುವ ಶ್ರೀಸಿದ್ದೇಶ್ವರ ಸಹಕಾರಿ ಬ್ಯಾಂಕ್ ಶೇರುದಾರರು, ಮತದಾರರು ಬ್ಯಾಂಕ್ ಹಾಗೂ ಜಿಲ್ಲೆಯ ಹಿತದೃಷ್ಟಿಯಿಂದ ಹಾಲಿ ಪೆನಲ್ ಆಯ್ಕೆ ಮಾಡುವಂತೆ ಕೃಷಿ ಮಾರುಕಟ್ಟೆ ಸಚಿವ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಮನವಿ ಮಾಡಿದರು.ಪಟ್ಟಣದ ಬಸವ ಭವನದಲ್ಲಿ ಶ್ರೀಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲೂಕಿನ ಮತದಾರ ಶೇರುದಾರರು, ಸದಸ್ಯರ ಸಹಕಾರ ಸಮಾಲೋಚನಾ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಶತಮಾನದ ಇತಿಹಾಸ ಹೊಂದಿರುವ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಷಡ್ಯೂಲ್ ಬ್ಯಾಂಕ್ ಸ್ಥಾನಕ್ಕೆ ಪರಿವರ್ತನೆ ಆಗಲು ಅವಕಾಶವಿದೆ. ಹೀಗಾಗಿ ಸಾಲದ ಸಂಕಷ್ಟದಿಂದ ಲಾಭದತ್ತ ಕೊಂಡೊಯ್ದಿರುವ ಹಾಲಿ ಆಡಳಿತ ಮಂಡಳಿಯನ್ನೇ ಆಯ್ಕೆ ಮಾಡಬೇಕಿದೆ. ಲಾಭದಲ್ಲಿರುವ ಬ್ಯಾಂಕ್‌ಗೆ ಚುನಾವಣೆ ವೆಚ್ಚ ತಪ್ಪಿಸಲು ಆಡಳಿತ ಮಂಡಳಿಯ ಅವಿರೋಧ ಆಯ್ಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದರೂ ದುರ್ದೈವದಿಂದ ಚುನಾವಣೆ ಎದುರಾಗಿದೆ. ಹೀಗಾಗಿ ಹಾಲಿ ಪೆನಲ್ ಗೆಲ್ಲಿಸುವ ಮೂಲಕ ಸಹಕಾರಿ ರಂಗದ ಸಿದ್ದೇಶ್ವರ ಬ್ಯಾಂಕ್ ಹಿರಿಮೆ ಹೆಚ್ಚಿಸಿ ಎಂದು ಮನವಿ ಮಾಡಿದರು.ಡಾ.ಫ.ಗು.ಹಳಕಟ್ಟಿಯಂತಹ ಮಹನೀಯರ ದೂರದೃಷ್ಟಿಯಿಂದ ಸ್ಥಾಪನೆಯಾಗಿರುವ ಈ ಬ್ಯಾಂಕ್ ಒಂದು ಕಾಲದಲ್ಲಿ ಉತ್ತುಂಗದಲ್ಲಿತ್ತು. ಆದರೆ ಮಧ್ಯದಲ್ಲಿ ಆಡಳಿತ ವೈಫಲ್ಯದಿಂದಾಗಿ ನಷ್ಟಕ್ಕೊಳಗಾಗಿತ್ತು. ಆದರೆ, ಹಾಲಿ ಆಡಳಿತ ಮಂಡಳಿ ಕಳೆದ ಮೂರು ಅವಧಿಗೆ ಸಮರ್ಥ ಆಡಳಿತದಿಂದ ನಷ್ಟದಿಂದ ಲಾಭದಲ್ಲಿ ಸಾಗುತ್ತಿದೆ ಎಂದರು.ಸಹಕಾರಿ ರಂಗದ ಪ್ರಮುಖರಾದ ಲೋಕನಾಥ ಅಗರವಾಲ, ಶಿವನಗೌಡ ಬಿರಾದಾರ, ಬಿ.ಎಸ್‌.ಪಾಟೀಲ ಯಾಳಗಿ, ಐ.ಸಿ.ಪಟ್ಟಣಶೆಟ್ಟಿ, ಚಂದ್ರಶೇಖರಗೌಡ ಪಾಟೀಲ ಮನಗೂಳಿ, ಶೇಖರ ದಳವಾಯಿ, ಅನಿಲ ದುಂಬಾಳೆ, ಸತೀಶ ಓಸ್ತವಾಲ, ಸುರೇಶ ಹಾರಿವಾಳ, ತಾನಾಜಿ ನಾಗರಾಳ, ಪ್ರೇಮು ಮ್ಯಾಗೇರಿ, ಬಾಲಚಂದ್ರ ಮುಂಜಾನೆ, ಅಣ್ಣುಗೌಡ ಬಿರಾದಾರ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಚುನಾವಣೆ ಕಣದಲ್ಲಿರುವ ವಿಜಯಕುಮಾರ ಇಜೇರಿ, ಐ.ಎಂ.ಪಟ್ಟಣಶೆಟ್ಟಿ, ವೈಜನಾಥ ಕರ್ಪೂರಮಠ, ಹರ್ಷಗೌಡ ಪಾಟೀಲ, ಡಾ.ಸಂಜೀವ ಪಾಟೀಲ ಮುಳವಾಡ, ಗುರು ಗಚ್ಚಿನಮಠ, ಬೋರಮ್ಮ ಗೊಬ್ಬೂರ, ಸೌಭಾಗ್ಯ ಭೋಗಶೆಟ್ಟಿ, ಕರುಣಾ ಅವರಂಗಾಬಾದ್, ಸುರೇಶ ಗಚ್ಚಿನಕಟ್ಟಿ, ರಮೇಶ ಬಿದನೂರು, ಪ್ರಕಾಶ ಬಗಲಿ, ಗುರುರಾಜ ಗಂಗನಹಳ್ಳಿ, ರಾಜು ಕತ್ತಿ, ರಾಜೇಂದ್ರ ಪಾಟೀಲ, ವಿಶ್ವನಾಥ ಪಾಟೀಲ, ಸಾಯಬಣ್ಣ ಭೋವಿ, ಅಮೋಘಸಿದ್ಧ ನಾಯ್ಕೋಡಿ ಸೇರಿ ಇತರರು ಇದ್ದರು. ರವಿ ರಾಠೋಡ ಸ್ವಾಗತಿಸಿದರು. ಸಂಗಮೇಶ ಓಲೇಕಾರ ನಿರೂಪಿಸಿದರು. ಶಂಕರಗೌಡ ಬಿರಾದಾರ ವಂದಿಸಿದರು.

PREV

Recommended Stories

ಋತು ರಜೆ ಕೊಡದಿದ್ದರೆ ಕ್ರಮ : ಲಾಡ್‌
ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ