ಮುರುಡೇಶ್ವರದಲ್ಲಿ ಬೆಳಕೆ ಗ್ರಾಮೀಣ ವ್ಯವಸಾಯ ಸಂಘದ 4ನೇ ಶಾಖೆ ಉದ್ಘಾಟನೆ
ಮುರುಡೇಶ್ವರದ ಬಸ್ ನಿಲ್ದಾಣದ ಎದುರಿನ ಕಟ್ಟಡದಲ್ಲಿ ಬೆಳಕೆ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ 4ನೇ ಶಾಖೆಯನ್ನು ಸಂಘದ ಅಧ್ಯಕ್ಷ ಮಾದೇವ ಜಿ. ನಾಯ್ಕ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ನಮ್ಮ ಸಹಕಾರಿ ಸಂಘ ಈಗಾಗಲೇ ಬೆಳಕೆಯ ಪ್ರಧಾನ ಕಚೇರಿಯಲ್ಲಿ ಮುಖ್ಯಶಾಖೆ, ಶಿರೂರು ಮತ್ತು ಸರ್ಪನಕಟ್ಟೆಯಲ್ಲಿ ಶಾಖೆ ಹೊಂದಿದೆ. ಇದೀಗ ನಾವು ಮುರುಡೇಶ್ವರದಲ್ಲಿ ಜನರಿಗೆ ಅನುಕೂಲವಾಗಲು ನಮ್ಮ ಸಂಘದ 4ನೇ ಶಾಖೆಯನ್ನು ವಿಸ್ತರಿಸುತ್ತಿದ್ದೇವೆ. ನಮ್ಮ ಸಂಘ ಎಲ್ಲರ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಹೊಸದಾಗಿ ಮುರುಡೇಶ್ವರದಲ್ಲಿ ಶಾಖೆ ಮಾಡಬೇಕೆಂಬ ಬಗ್ಗೆ ನಿಧಾರ ಮಾಡಲಾಗಿತ್ತು. ಶಾಖೆ ಸುಸಜ್ಜಿತವಾಗಿದ್ದು, ಇಲ್ಲಿ ನಮ್ಮ ಸಂಘದ ವ್ಯವಹಾರ ಉತ್ತಮವಾಗಿ ನಡೆಯಬಹುದೆಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಮುರುಡೇಶ್ವರ ಭಾಗದ ಜನರು ಶಾಖೆಯಲ್ಲಿ ವ್ಯವಹಾರ ಮಾಡಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದರು.ಉದ್ಘಾಟನೆಯ ಪೂರ್ವದಲ್ಲಿ ಶಾಖೆಯಲ್ಲಿ ಗಣಹೋಮ ಮತ್ತು ಲಕ್ಷ್ಮೀ ಪೂಜೆ ನಡೆಸಲಾಯಿತು. ಈ ಸಂದರ್ಭ ಉಪಾಧ್ಯಕ್ಷ ಪಾಂಡು ಜಿ ನಾಯ್ಕ, ನಿರ್ದೇಶಕರಾದ ಲಕ್ಷ್ಮೀನಾರಾಯಣ ನಾಯ್ಕ, ನಾಗೇಶ ನಾಯ್ಕ, ಲೋಕೇಶ ಎಂ. ನಾಯ್ಕ, ದಾಮೋದರ ನಾಯ್ಕ, ರವಿರಾಜ ಜೈನ್, ಮಂಜು ಮೊಗೇರ, ಭಾಸ್ಕರ ಗೊಂಡ, ಲಲಿತಾ ಕೊರ್ಗ ನಾಯ್ಕ, ಶಾರದಾ ಚಂದ್ರ ನಾಯ್ಕ, ಭಾರತೀ ರವಿ ನಾಯ್ಕ, ಪ್ರಧಾನ ವ್ಯವಸ್ಥಾಪಕ ಅಣ್ಣಪ್ಪ ಎನ್. ನಾಯ್ಕ, ಕೆಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಗಣೇಶ ಗೌಡ, ಭಟ್ಕಳ ಪಿಎಲ್ಡಿ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ವಾಸುದೇವ ನಾಯ್ಕ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸಂತೋಷ ನಾಯ್ಕ ಸೇರಿದಂತೆ ಮುರುಡೇಶ್ವರದ ಭಾಗದ ಮುಖಂಡರು, ಗ್ರಾಹಕರು ಉಪಸ್ಥಿತರಿದ್ದರು.
6ಬಿಕೆಲ್1: ಮುರುಡೇಶ್ವರದಲ್ಲಿ ಬೆಳಕೆ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ 4ನೇ ಶಾಖೆಯನ್ನು ಉದ್ಘಾಟಿಸಲಾಯಿತು.