- ಶಿಕ್ಷಕರ ಸಮಸ್ಯೆ ಪರಿಹಾರಕ್ಕಾಗಿ ಪ್ರಥಮ ಪ್ರಾಶಸ್ತ್ಯದ ಮತ ನೀಡಿ: ಕಿಶನ್
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರು ಮತ್ತು ಶಿಕ್ಷಕರ ಕ್ಷೇತ್ರ ನಿರಂತರವಾಗಿ ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಅವುಗಳನ್ನು ಪರಿಹರಿಸಲು, ದಕ್ಷ ಹಾಗೂ ಪ್ರಾಮಾಣಿಕ ಆಡಳಿತದಿಂದ ಮಾತ್ರ ಸಾಧ್ಯ. ಅದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಮಾರ್ಗವಿಲ್ಲ. ಈ ನಿಟ್ಟಿನಲ್ಲಿ ತಮ್ಮ ಪಕ್ಷ ಶಿಕ್ಷಕರ ಪರವಾಗಿ ಕೆಲಸ ಮಾಡಲಿದೆ ಎಂದರು.
ಅತಿಥಿ ಶಿಕ್ಷಕರ ಸಮಸ್ಯೆ ದೊಡ್ಡದಾಗಿ ಕಾಡುತ್ತಿದೆ. ಕಳೆದ 4 ದಶಕದಿಂದ ಸಮಸ್ಯೆ ಉಲ್ಭಣಿಸುತ್ತಲೇ ಇದೆ ಹೊರತು, ಸಮಸ್ಯೆ ಪರಿಹರಿಸುವ ಯಾವುದೇ ಕೆಲಸವನ್ನು ಸರ್ಕಾರಗಳು ಮಾಡಿಲ್ಲ. ಮುಂದೆಯೂ ಸಮಸ್ಯೆ ಪರಿಹರಿಸಲು ಇಂತಹ ಸರ್ಕಾರಗಳಿಂದ ಸಾಧ್ಯವಾಗುವುದಿಲ್ಲ. ಇನ್ನು ರಾಜ್ಯದಲ್ಲಿ ಸರ್ಕಾರಿ ಶಾಲಾ-ಕಾಲೇಜು ಶಿಕ್ಷಕರ ವರ್ಗಾವಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಕಾಲಕಾಲಕ್ಕೆ ಶಿಕ್ಷಕರ ನೇಮಕಾತಿಯೂ ಆಗುತ್ತಿಲ್ಲ ಎಂದು ದೂರಿದರು.ಸರ್ಕಾರದ ನಿರ್ಲಕ್ಷ್ಯದಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿರುವ ಶಿಕ್ಷಕರು, ಅತಿಥಿ ಬೋಧಕರು ಸಾಮಾಜಿಕ, ಆರ್ಥಿಕ ಸಮಸ್ಯೆಗೆ ತುತ್ತಾಗಿದ್ದಾರೆ. ಇವೆಲ್ಲಾ ಸಮಸ್ಯೆಗಳು ಒಂದಕ್ಕೊಂದು ಬೆಳೆದಿದ್ದು, ಅಂತಿಮವಾಗಿ ದಕ್ಷ ಮತ್ತು ಪ್ರಾಮಾಣಿಕ ಆಡಳಿತ ಬೇಕಾಗಿದೆ. ಪ್ರಸ್ತುತ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಿಂದ ಮತ್ತು ಆ ಪಕ್ಷಗಳ ಅಭ್ಯರ್ಥಿಗಳಿಂದ ಇದನ್ನೆಲ್ಲಾ ನಾವು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಈ ಕಾರಣಕ್ಕೆ ಶಿಕ್ಷಣ ಮತ್ತು ಶಿಕ್ಷಕರ ಕ್ಷೇತ್ರದ ಸಮಸ್ಯೆ ಉಲ್ಬಣಿಸುತ್ತಿವೆ ಎಂದು ಹೇಳಿದರು.
ಪಕ್ಷದ ಕೆ.ಎಸ್. ವೀರಭದ್ರಪ್ಪ, ವೆಂಕಟೇಶಪ್ಪ ಇತರರು ಇದ್ದರು.
- - - -31ಕೆಡಿವಿಜಿ4:ದಾವಣಗೆರೆಯಲ್ಲಿ ಶುಕ್ರವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಕೆಆರ್‌ಎಸ್ ಅಭ್ಯರ್ಥಿ ಎಂ.ಜಿ. ಕಿಶನ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.