ಸುಪ್ರೀಂಕೋರ್ಟ್‌ ಸಿಜೆಐ ಮೇಲೆ ಪಾದರಕ್ಷೆ ಎಸೆದು ದುಷ್ಕೃತ್ಯಕ್ಕೆ ಖಂಡನೆ

KannadaprabhaNewsNetwork |  
Published : Oct 10, 2025, 01:00 AM IST
09ಎಸ್‌ವಿಆರ್‌02 | Kannada Prabha

ಸಾರಾಂಶ

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆಗಳನ್ನು ಎಸೆಯುವ ದುಷ್ಕೃತ್ಯ ಇತ್ತೀಚೆಗೆ ಜರುಗಿರುವುದು ಸಂಪೂರ್ಣ ನ್ಯಾಯಾಂಗ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಮಾಡಿದ ನೇರ ಅಪಚಾರವಾಗಿದೆ ಎಂದು ಪುರಸಭೆ ನಾಮನಿರ್ದೇಶಿತ ಸದಸ್ಯ ಲಕ್ಷ್ಮಣ ಕನವಳ್ಳಿ ಹಾಗೂ ದಲಿತ ಮುಖಂಡರು ಗ್ರೇಡ-2 ತಹಸೀಲ್ದಾರ್‌ ಗಣೇಶ ಸವಣೂರ ಅವರ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿಯನ್ನು ಸಲ್ಲಿಸಿದರು.

ಸವಣೂರು: ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆಗಳನ್ನು ಎಸೆಯುವ ದುಷ್ಕೃತ್ಯ ಇತ್ತೀಚೆಗೆ ಜರುಗಿರುವುದು ಸಂಪೂರ್ಣ ನ್ಯಾಯಾಂಗ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಮಾಡಿದ ನೇರ ಅಪಚಾರವಾಗಿದೆ ಎಂದು ಪುರಸಭೆ ನಾಮನಿರ್ದೇಶಿತ ಸದಸ್ಯ ಲಕ್ಷ್ಮಣ ಕನವಳ್ಳಿ ಹಾಗೂ ದಲಿತ ಮುಖಂಡರು ಗ್ರೇಡ-2 ತಹಸೀಲ್ದಾರ್‌ ಗಣೇಶ ಸವಣೂರ ಅವರ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿಯನ್ನು ಸಲ್ಲಿಸಿದರು.ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದ ಮುಂಭಾಗ ಸಾಂಕೇತಿಕವಗಿ ಪ್ರತಿಭಟಿಸಿ ನಂತರ ಗ್ರೇಡ್‌-2 ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆಗಳನ್ನು ಎಸೆಯುವ ದುಷ್ಕೃತ ಇತ್ತೀಚೆಗೆ ಜರುಗಿದ್ದು, ಇದು ಸಂಪೂರ್ಣ ನ್ಯಾಯಾಂಗ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ. ನ್ಯಾಯಾಂಗ ವ್ಯವಸ್ಥೆಯ ಒಂದು ಭಾಗವೇ ಆಗಿರುವ ನ್ಯಾಯವಾದಿಗಳೊಬ್ಬರು ಮಾಡಿರುವ ಈ ಅಪಚಾರ ಅತ್ಯಂತ ಅಕ್ಷಮ್ಯ, ಸಂಪೂರ್ಣ ನ್ಯಾಯಾಂಗ ವ್ಯವಸ್ಥೆಯ ಮೇಲೆ ಆಗಿರುವ ಈ ದಬ್ಬಾಳಿಕೆ, ಆಡಳಿತ ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ಬಹಿರಂಗಗೊಳಿಸಿದ ಸಾಮಾನ್ಯ ಜನರ ದೃಷ್ಟಿಯಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲಿದ್ದ ನಂಬಿಕೆ ಶ್ರದ್ಧೆಯನ್ನು ಹಾಳು ಮಾಡಲಾಗಿದೆ. ಈ ದುಷ್ಕೃತ ಕೇವಲ ಒಬ್ಬ ವ್ಯಕ್ತಿಯ ಅಲ್ಲ. ಇದು ಒಂದು ವ್ಯವಸ್ಥಿತ ಪೂರ್ವ ನಿಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇಂತಹ ದುಷ್ಕೃತ್ಯದ ಹಿಂದೆ ಇರುವ ಪ್ರಭಾವಿ ವ್ಯಕ್ತಿಗಳ, ಪ್ರೇರಣೆ ಶಕ್ತಿ, ಸಂಘಟನೆಗಳ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕು, ಆರೋಪಿತ ವ್ಯಕ್ತಿಯ ಬೆಂಬಲಕ್ಕೆ ನಿಂತ ಜನರು ಸಹ ಇಂತಹ ದುಷ್ಕೃತ್ಯಕ್ಕೆ ಪರೋಕ್ಷ ಹೊಣೆಗಾರರು. ಈ ಹಿನ್ನೆಲೆಯಲ್ಲಿ ಆರೋಪಿತ ನ್ಯಾಯವಾದಿಯ ಹಿನ್ನೆಲೆ ಹಾಗೂ ನಡುವಳಿಕೆಯನ್ನು ತನಿಖೆಗೆ ಒಳಪಡಿಸಬೇಕು. ಉದ್ದೇಶ ಪೂರ್ವಕವಾಗಿ ಇಂತಹ ಸಂವಿಧಾನ ಬಾಹಿರ ಅಪರಾಧ ಕೈಗೊಂಡ ವ್ಯಕ್ತಿ ಹಾಗೂ ಅವರ ಹಿಂದಿರುವ ಶಕ್ತಿಗಳನ್ನು ದಮನ ಮಾಡಬೇಕು. ಇಂತಹ ಘಟನೆಗಳು ಭವಿಷ್ಯದಲ್ಲಿ ಎಂದಿಗೂ ನಡೆಯದಂತೆ ಜಾಗೃತೆ ವಹಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಪರಮೇಶ ಮಲ್ಲಮ್ಮನವರ, ಗಂಗಪ್ಪ ಹರಿಜನ, ವಿನಾಯಕ ಬೋವಿ, ಪ್ರವೀಣ ಬಾಲೇಹೊಸೂರ, ನಗರಾಜ ಹರಿಜನ, ರಮೇಶ ದುಗ್ಗತ್ತಿ, ಮಂಜು ಬೋವಿ, ಮಲ್ಲೇಶ ಹರಿಜನ, ತಿಮ್ಮಣ್ಣ ಹಿರೇಮನಿ, ಬಾಬಾನಸಾಬ ರಾಯಚೂರ, ಎಂ,ಎಚ್. ದಳವಾಯಿ, ನಾಗಪ್ಪ ತಿಮ್ಮಾಪೂರ ಹಾಗೂ ಇತರರು ಇದ್ದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ