)
ಕನ್ನಡಪ್ರಭ ವಾರ್ತೆ ವಿಜಯಪುರ
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಎಲೆಕ್ಷನ್ ಪಿಟಿಶನ್ ಹಾಕಿದ್ದ ಪ್ರತಿಸ್ಪರ್ಧಿ ಅಬ್ದುಲಹಮೀದ್ ಖಾಜಾಸಾಬ್ ಮುಶ್ರೀಫ್ ಅರ್ಜಿಯನ್ನು (CIVIL APPEAL No. 12194 OF 2024) 2025 ಜುಲೈ 18 ರಂದು ಕಲಬುರಗಿ ಹೈಕೋರ್ಟ್ ವಜಾ ಮಾಡಿ ದಂಡ ವಿಧಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಅಬ್ದುಲಹಮೀದ್ ಖಾಜಾಸಾಬ್ ಮುಶ್ರೀಫ್ ಸುಪ್ರೀಂ ಮೊರೆ ಹೋಗಿದ್ದರು. ಇದೀಗ ಸುಪ್ರೀಂ ಕೋರ್ಟ್‌ನಲ್ಲೂ 2026 ಫೆಬ್ರುವರಿ 5 ರಂದು ಅಬ್ದುಲಹಮೀದ್ ಖಾಜಾಸಾಬ್ ಮುಶ್ರೀಫ್ ಅರ್ಜಿ ವಜಾಗೊಂಡಿದ್ದು, ಹೈಕೋರ್ಟ್ ಆದೇಶವನ್ನೇ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಹೀಗಾಗಿ ಸುಪ್ರೀಂ ಅಂಗಳದಲ್ಲೂ ಅಬ್ದುಲಹಮೀದ್ ಖಾಜಾಸಾಬ್ ಮುಶ್ರೀಫ್ ಮುಖಭಂಗವಾಗಿದ್ದರ ಕುರಿತು ಶಾಸಕ ಯತ್ನಾಳ ಟ್ವಿಟ್ ಮಾಡಿದ್ದಾರೆ. ನಾನು ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ, ಸತ್ಯಮೇವ ಜಯತೆ ಎಂದು ಪೋಸ್ಟ್ ಹಾಕಿದ್ದಾರೆ. ರಾಜಕೀಯ ಪ್ರೇರಿತವಾಗಿ ಸುಳ್ಳು ಆರೋಪ ಮಾಡಿದವರ ಮೇಲೆ ಕಾನೂನು ರಿತ್ಯ ಕ್ರಮ ತೆಗೆದುಕೊಳ್ಳುವೆ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವೆ ಎಂದು ಯತ್ನಾಳ ಟ್ವಿಟ್ಟ್ ಮಾಡಿದ್ದಾರೆ.
ಉಚ್ಚ ನ್ಯಾಯಾಲಯದ ತೀರ್ಪನ್ನು ಖಾಜಾ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು. ಈಗ, ಸರ್ವೋಚ್ಛ ನ್ಯಾಯಾಲಯವು ಇವರ ಅರ್ಜಿಯನ್ನು ವಜಾ ಮಾಡಿದೆ ಹಾಗೂ ದಂಡವನ್ನೂ ವಿಧಿಸಿದೆ. ಈ ರೀತಿಯಾದ ಗೊಡ್ಡು ಬೆದರಿಕೆಗಳಿಗೆ ನಾನು ಹೆದರುವವನಲ್ಲ. ನನ್ನ ಮೇಲೆ ರಾಜಕೀಯ ಪ್ರೇರಿತ, ಆಧಾರ ರಹಿತ ಆರೋಪಗಳನ್ನು ಮಾಡುವವರ ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಂಡು, ತಾರ್ಕಿಕ ಅಂತ್ಯದವರೆಗೂ ಕೊಂಡೊಯುತ್ತೇನೆ. ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ವಿಜಯಪುರದ ಜನತೆ ನನ್ನೊಂದಿಗೆ ಸದಾ ಇರುತ್ತಾರೆ ಹಾಗೂ ಅವರ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತದೆ ಎಂಬ ಅಚಲ ವಿಶ್ವಾಸ ನನ್ನಲ್ಲಿದೆ. ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡುವ ಈ ರಾಜಕೀಯ ನಿರುದ್ಯೋಗಿಗಳಿಗೆ ನ್ಯಾಯಾಲಯ ದಂಡ ವಿಧಿಸುವ ಮೂಲಕ ಕ್ರಮ ಜರುಗಿಸಿದೆ. ಸತ್ಯ ಮೇವ ಜಯತೆ
-ಬಸನಗೌಡ ಪಾಟೀಲ ಯತ್ನಾಳ, ನಗರ ಶಾಸಕರು.