ಪ್ರತಿಕಾರಕ್ಕೆ ಸೈನ್ಯಕ್ಕೆ ಪರಮಾಧಿಕಾರ: ಸೋಮಣ್ಣ

KannadaprabhaNewsNetwork |  
Published : May 02, 2025, 12:10 AM IST
ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಯಡವನಹಳ್ಳಿ ಮಜರೆ ಕಡೆಕೋಡಿಪಾಳ್ಯ ಗ್ರಾಮದಲ್ಲಿ ಶ್ರೀ ತಿರುಮಲೇಶ್ವರಸ್ವಾಮಿ ಹಾಗೂ ಶ್ರೀ ಹನುಮಂತ ದೇವರ ನೂತನ ದೇವಾಲಯದ ಲೋಕಾರ್ಪಣೆ  ಕಾರ್ಯಕ್ರಮದಲ್ಲಿ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ. | Kannada Prabha

ಸಾರಾಂಶ

ದೇಶದ ರಕ್ಷಣೆಯ ವಿಚಾರದಲ್ಲಿ ಪ್ರಧಾನಮಂತ್ರಿ ಮೋದಿ ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು ಸೈನಿಕ್ಕೆ ಪರಮಾಧಿಕಾರವನ್ನು ನೀಡಿದ್ದಾರೆ ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಪಾಕಿಸ್ತಾನದ ದೇಶದ್ರೋಹಿಗಳು ಮಾಡಿರುವಂತಹ ಹೀನ ಕೃತ್ಯವನ್ನು ಭಾರತ ಎಂದಿಗೂ ಸಹಿಸುವುದಿಲ್ಲ ದೇಶದ ರಕ್ಷಣೆಯ ವಿಚಾರದಲ್ಲಿ ಪ್ರಧಾನಮಂತ್ರಿ ಮೋದಿ ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು ಸೈನಿಕ್ಕೆ ಪರಮಾಧಿಕಾರವನ್ನು ನೀಡಿದ್ದಾರೆ ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.ತಾಲೂಕಿನ ಕಡಬ ಹೋಬಳಿಯ ಯಡವನಹಳ್ಳಿ ಮಜರೆ ಕಡೆಕೋಡಿಪಾಳ್ಯ ಗ್ರಾಮದಲ್ಲಿ ಶ್ರೀ ತಿರುಮಲೇಶ್ವರಸ್ವಾಮಿ ಹಾಗೂ ಶ್ರೀ ಹನುಮಂತ ದೇವರ ನೂತನ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ ಹಿಂದೆ ಇದ್ದ ಸರ್ಕಾರ ಯಾವ ಕೆಲಸ ಮಾಡಲಿಲ್ಲ ನಮ್ಮ ಬಿಜೆಪಿ ಸರ್ಕಾರ 10 ವರ್ಷಗಳಲ್ಲಿ ಉತ್ತಮ ಕೆಲಸ ಮಾಡಿದೆ. ಬಸವಣ್ಣನವರ ಸಂದೇಶವನ್ನು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಪ್ರಕಟಿಸಿ ಜನರಿಗೆ ತಲುಪುವ ಕೆಲಸ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ದಕ್ಷ ಅಧಿಕಾರಿ ದಯಾಶಂಕರ್, ಕೇಂದ್ರ ಸರ್ಕಾರ ಮಾಡಲು ಹೊರಟಿರುವುದು ನಿಜವಾದ ಜಾತಿ ಸಮೀಕ್ಷೆಯಾಗಿದೆ. ಇದರಿಂದ ದೇಶದ ಹಾಗೂ ಸಾಮಾಜಿಕ ಶೈಕ್ಷಣಿಕ ಮತ್ತು ಪ್ರತಿಯೊಂದು ಸಮುದಾಯಕ್ಕೂ, ಧರ್ಮಕ್ಕೂ ಅನುಕೂಲವಾಗುತ್ತದೆ.ಶಾಸಕ ಎಸ್. ಆರ್. ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ಮಳೆ ಗಾಳಿಯಿಂದ ಅಡಿಕೆ,ಬಾಳೆ, ತೆಂಗಿನ, ಮರಗಳು ಬಿದ್ದು ಬಹಳಷ್ಟು ಹಾನಿಯಾಗಿದೆ. ಅಧಿಕಾರಿಗಳಿಗೆ ಸಮೀಕ್ಷೆ ಮಾಡಿ ವರದಿ ಕೊಡಲು ತಿಳಿಸಲಾಗಿದೆ. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲಾಗುತ್ತದೆ ಎಂದರು.ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಸಿದ್ದೇಶ್ವರಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠ ಚಿಕ್ಕಬಳ್ಳಪುರದ ಮಂಗಳನಾಥಸ್ವಾಮೀಜಿ, ಸರ್ಪಳಿ ಮಠದ ಅಧ್ಯಕ್ಷರಾದ ಜ್ಞಾನಾನಂದಪುರಿ ಸ್ವಾಮಿಗಳು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ದಿಲೀಪ್ ಕುಮಾರ್, ಚಂದ್ರಶೇಖರ ಬಾಬು, ಎನ್ ಸಿ ಪ್ರಕಾಶ್, ಜಿ.ಎನ್..ಬೇಟ್ಟಸ್ವಾಮಿ, ಕಳ್ಳಿಪಾಳ್ಯ ಲೋಕೇಶ್, ಬ್ಯಾಟರಂಗೇಗೌಡ, ಸು.ಮು ಮುನಿಯಪ್ಪ, ರಮೇಶ್, ರಾಜಶೇಖರ್, ಮಂಜುಳಾಪಾಟೀಲ್, ಕಲಾವತಿ ಇತರರಿದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು