ಕೃಷ್ಣ ಭೈರೇಗೌಡ್ರು ಬಹಳ ಶಿಸ್ತು ಎಂದ ಸೂರಜ್ ರೇವಣ್ಣ

KannadaprabhaNewsNetwork |  
Published : Aug 09, 2025, 12:00 AM IST
8ಎಚ್ಎಸ್ಎನ್13 : ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ. | Kannada Prabha

ಸಾರಾಂಶ

ಹೊಸದಾಗಿ ಕೃಷ್ಣಭೈರೇಗೌಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಆಗಿದ್ದು, ಅವರು ಬಹಳ ಡಿಸಿಪ್ಲೀನ್ ಉಳ್ಳವರು. ಒಳ್ಳೆಯ ರೀತಿಯ ಕಾರ್ಯವೈಖರಿ ಬಗ್ಗೆ ಕೇಳಿದ್ದೇನೆ. ಒಳ್ಳೆಯ ರೀತಿಯ ಕೆಲಸ ಆಗಲಿದೆ ಎನ್ನುವ ನಿರೀಕ್ಷೆ ಇದೆ. ರೈತರು ಗೊಬ್ಬರ ಕೇಳಿದರೆ ಕೇಂದ್ರದಿಂದ ಬರಬೇಕು ಅಂತಾರೆ. ಹಾಗಿದ್ದರೆ ರಾಜ್ಯ ಸರ್ಕಾರ ಏನು ಮಾಡುತ್ತಿದೆ. ಮಳೆ ಹಾನಿಯಿಂದ ಎಷ್ಟು ಸಮಸ್ಯೆ ಆಗಿದೆ. ಬರ್ತಾರೆ ಹೋಗ್ತಾರೆ. ಏನಾದ್ರು ಪರಿಹಾರ ಕೊಟ್ಟಿದಾರಾ! ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರಿಗೆ ಏನೆಲ್ಲಾ ಅನುಕೂಲ ಮಾಡಿದ್ದರು. ಈಗ ಬರೀ ಗ್ಯಾರಂಟಿ ಒಂದೇ ಅಜೆಂಡಾ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆದಾಗ್ಯೂ ಇದುವರೆಗೆ ಇದ್ದ ಜಿಲ್ಲಾ ಉಸ್ತುವಾರಿ ಸಚಿವರು ಏನನ್ನೂ ಮಾಡಲಿಲ್ಲ. ಈಗ ಜಿಲ್ಲಾ ಮಂತ್ರಿಯಾಗಿ ಕೃಷ್ಣಭೈರೇಗೌಡ ನೇಮಕಗೊಂಡಿದ್ದು, "ಅವರು ಬಹಳ ಡಿಸಿಪ್ಲೀನ್ ಉಳ್ಳವರು ಒಳ್ಳೆ ಕೆಲಸ ಮಾಡಲಿದ್ದಾರೆ " ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿ, ಸಚಿವರ ಬದಲಾವಣೆ ಸರ್ಕಾರಕ್ಕೆ ಬಿಟ್ಟ ವಿಚಾರ. ಈಗ ಹೊಸದಾಗಿ ಕೃಷ್ಣಭೈರೇಗೌಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಆಗಿದ್ದು, ಅವರು ಬಹಳ ಡಿಸಿಪ್ಲೀನ್ ಉಳ್ಳವರು. ಒಳ್ಳೆಯ ರೀತಿಯ ಕಾರ್ಯವೈಖರಿ ಬಗ್ಗೆ ಕೇಳಿದ್ದೇನೆ. ಒಳ್ಳೆಯ ರೀತಿಯ ಕೆಲಸ ಆಗಲಿದೆ ಎನ್ನುವ ನಿರೀಕ್ಷೆ ಇದೆ. ರೈತರು ಗೊಬ್ಬರ ಕೇಳಿದರೆ ಕೇಂದ್ರದಿಂದ ಬರಬೇಕು ಅಂತಾರೆ. ಹಾಗಿದ್ದರೆ ರಾಜ್ಯ ಸರ್ಕಾರ ಏನು ಮಾಡುತ್ತಿದೆ. ಮಳೆ ಹಾನಿಯಿಂದ ಎಷ್ಟು ಸಮಸ್ಯೆ ಆಗಿದೆ. ಬರ್ತಾರೆ ಹೋಗ್ತಾರೆ. ಏನಾದ್ರು ಪರಿಹಾರ ಕೊಟ್ಟಿದಾರಾ! ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರಿಗೆ ಏನೆಲ್ಲಾ ಅನುಕೂಲ ಮಾಡಿದ್ದರು. ಈಗ ಬರೀ ಗ್ಯಾರಂಟಿ ಒಂದೇ ಅಜೆಂಡಾ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಸ್ಪಂದಿಸಬೇಕು. ಮತ ಕಳ್ಳತನ ಬಗ್ಗೆ ಕಾಂಗ್ರೆಸ್ ಪ್ರತಿಭಟನೆ ವಿಚಾರ. ಅವರ ಅಭಿಪ್ರಾಯ ಅವರು ಹೇಳಲಿ. ಈ ಪ್ರಕರಣ ಕೋರ್ಟ್‌ನಲ್ಲಿ ಇದ್ದು, ತೀರ್ಪು ಏನು ಬರುತ್ತದೆ ನೋಡೋಣ? ಏನಾದರು ಅಕ್ರಮ ಆಗಿದ್ದರೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ ಎಂದರು.

ಅತ್ಯಾಚಾರ ಕೇಸ್ ನಲ್ಲಿ ಸಹೋದರ ಪ್ರಜ್ವಲ್ ಗೆ ಜೀವಾವಧಿ ಶಿಕ್ಷೆ ವಿಚಾರ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ತೀರ್ಪು ಹೊರ ಬಂದಿದ್ದು, ಮೇಲ್ಮನವಿಗೆ ಸಲ್ಲಿಸುತ್ತೇವೆ. ಅದು ಬಿಟ್ಟು ಬೇರೆ ಏನು ಹೇಳಲು ಸಾಧ್ಯ? ಪ್ರಕರಣ ನ್ಯಾಯಾಲಯದಲ್ಲಿದೆ. ಇದನ್ನ ಯಾರು ಚರ್ಚೆ ಮಾಡೋದು ಸೂಕ್ತವಲ್ಲ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದರು. * ಬಾಕ್ಸ್‌: ಈಗಲಾದರೂ ಜಿಲ್ಲೆ ಅಭಿವೃದ್ಧಿ ಆಗಲಿ: ಶಾಸಕ ಸ್ವರೂಪ್‌

ಇದುವರೆಗೂ ಜಿಲ್ಲೆಗೆ ಸಹಕಾರಿ ಸಚಿವರಾದ ಕೆ.ಎನ್. ರಾಜಣ್ಣ ಉಸ್ತುವಾರಿ ಸಚಿವರಾದ ಮೇಲೆ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾಣಲಿಲ್ಲ. ಉಸ್ತುವಾರಿ ಸ್ಥಾನದ ಬಗ್ಗೆ ಆಸಕ್ತಿ ಇರಲಿಲ್ಲ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ. ಈಗ ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಆಗಿರುವ ಕೃಷ್ಣ ಭೈರೇಗೌಡ ಅವರ ಅವಧಿಯಲ್ಲಾದರೂ ಹೆಚ್ಚಿನ ಅಭಿವೃದ್ಧಿ ಆಗುತ್ತದೆಯಾ ಎಂಬುದನ್ನು ಕಾದು ನೋಡಬೇಕು ಎಂದು ಶಾಸಕ ಸ್ವರೂಪ್‌ ಹೇಳಿದರು.

ಹಾಸನ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಬಗ್ಗೆ ಅತಿ ಶೀಘ್ರವಾಗಿ ಕೃಷ್ಣಭೈರೇಗೌಡ ಅವರನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಇವರ ಅವಧಿಯಲ್ಲಿ ಆದರೂ ಜಿಲ್ಲೆ ಸಮಗ್ರ ಅಭಿವೃದ್ಧಿ ಆಗಲಿ ಎಂದು ಆಶಿಸಿದರು.

PREV

Recommended Stories

ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ
12.69 ಲಕ್ಷ ಶಂಕಾಸ್ಪದ ಬಿಪಿಎಲ್‌ ಚೀಟಿ ರಾಜ್ಯದಲ್ಲಿ ಪತ್ತೆ: ಮುನಿಯಪ್ಪ