ಕನ್ನಡಪ್ರಭ ವಾರ್ತೆ ಮೂಲ್ಕಿ
ಸಂಸ್ಥೆಯ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಮಾತನಾಡಿ, ಕ್ರಿಕೆಟ್ ಪಂದ್ಯಾಕೂಟವು ಎಪ್ರಿಲ್ ತಿಂಗಳ 5 ಮತ್ತು 6 ರಂದು ಸುರತ್ಕಲ್ ಗೋವಿಂದದಾಸ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾಜ್ಯದ ಬೆಂಗಳೂರು, ಶಿವಮೊಗ್ಗ, ಅರಸೀಕೆರೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಪ್ರತಿಷ್ಠಿತ 14 ತಂಡಗಳು ಭಾಗವಹಿಸಲಿದೆಯೆಂದು ತಿಳಿಸಿದರು.
ಈ ಸಂದರ್ಭ ಸಂಸ್ಥೆಯ ಸಂಚಾಲಕ ಮನೋಹರ್ ಶೆಟ್ಟಿ ಸೂರಿಂಜೆ, ಉಪಾಧ್ಯಕ್ಷ ನಾಗರಾಜ್ ಕಡಂಬೋಡಿ, ಕಾರ್ಯದರ್ಶಿ ಕಿರಣ್ ಆಚಾರ್ಯ, ಪದಾಧಿಕಾರಿಗಳಾದ ಕುಶಲ ಮಣಿಯಾಣಿ, ಸಂತೋಷ್ ಬೇಕಲ್, ಲೀಲಾಧರ ಕಡಂಬೋಡಿ, ಶಿವಪ್ರಸಾದ್, ಅನಂತರಾಜ್ ಶೆಟ್ಟಿಗಾರ್, ನಿರಂಜನ್ ಶೆಟ್ಟಿ, ಓಂಪ್ರಕಾಶ್ ಶೆಟ್ಟಿಗಾರ್ ಕಡಂಬೋಡಿ ಮತ್ತಿತರರು ಉಪಸ್ಥಿತರಿದ್ದರು.