ಹಿರೇಕೆರೂರು: ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರಾಗಿ ಹಿರೇಕೆರೂರು ಕ್ಷೇತ್ರದ ಸುರೇಶ್ ಮಡಿವಾಳರ ಹಾಗೂ ಉಪಾಧ್ಯಕ್ಷರಾಗಿ ಎತ್ತಿನಹಳ್ಳಿ ಎಂ.ಕೆ. ಕ್ಷೇತ್ರದ ಹಾದ್ರಿಹಳ್ಳಿ ಗ್ರಾಮದ, ಸವಿತಾ ರಾಜು ಬಣಕಾರ್ ಅವಿರೋಧವಾಗಿ ಆಯ್ಕೆಯಾದರು.ಸೋಮವಾರ ಚುನಾವಣೆ ನಡೆಯಿತು. ನಂತರ ಬ್ಯಾಂಕಿನ ಬಿ.ಜಿ. ಬಣಕಾರ ಸಹಕಾರಿ ಸಭಾಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಯು.ಬಿ. ಬಣಕಾರವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಬ್ಯಾಂಕ್ ಉನ್ನತ ಸ್ಥಾನದಲ್ಲಿದ್ದು, ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಆಡಳಿತ ಮಂಡಳಿಯ ಪಾತ್ರ ಪ್ರಮುಖವಾಗಿದ್ದು, ತಾಲೂಕಿನ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಉತ್ತಮ ಆಡಳಿತ ನಡೆಸುವಂತೆ ಕರೆ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಅದ್ಯಕ್ಷ ಮಲ್ಲನಗೌಡ್ರು, ನಾಗಪ್ಪನವರ್,ರಮೇಶ್ ಮಾಳಮ್ಮನವರ್, ನಿರ್ದೇಶಕರುಗಳಾದ ಷಣ್ಮುಖಯ್ಯ ಮಳಿಮಠ, ಮಲ್ಲಿಕಾರ್ಜುನ್ ಬುರುಡಿಕಟ್ಟಿ, ಭೀಮಣ್ಣ ದೊಡ್ಡಗೌಡ್ರ, ಸಂತೋಷ್ ಬಾಸು, ನಾಗಣ್ಣ ಮುತ್ತಗಿ, ಮಹೇಶ್ ಅಗಸನಳ್ಳಿ, ಮಹೇಶ್ ಪಾಳ್ಯದ, ತಿರಕಮ್ಮಾ ಸಪ್ಪಾಳಿ, ಮೋಹನ್ ಗೌಡ ಪಾಟೀಲ್, ಪಕ್ಷದ ಮುಖಂಡರಾದ ಮಹೇಂದ್ರ ಬಡಳ್ಳಿ,ರವಿ ಸಿದ್ದಪಗೌಡ್ರ, ರವಿ ಚಿಂದಿ, ಸಿದ್ದು ನರೇಗೌಡ್ರ, ಶಂಭುಣ್ಣ ಹಂಸಭಾವಿ, ರಾಮು ಚಿಗಮರಬ, ರಾಮಣ್ಣ ತೆಂಭದ, ಭರಮಪ್ಪ ಹರಿಜನ, ಪ್ರಭು ಮಳವಳ್ಳಿ, ಸನಾವುಲ್ಲಾ ಮಕಾಂದಾರ, ಅಂಜನ ಜೆ., ವ್ಯವಸ್ಥಾಪಕರಾದ ಕರಬಸಪ್ಪ ಬಜಂತ್ರಿ ಸೇರಿದಂತೆ ಅನೇಕ ಮುಖಂಡರು, ಶೇರುದಾರರು ಉಪಸ್ಥಿತರಿದ್ದರು. ಚುನಾವಣಾಧಿಕಾರಿಗಳಾಗಿ ಮಂಗಳಾ ಕಾರ್ಯನಿರ್ವಹಿಸಿದರು.