ಕಾರವಾರ:
ನಗರದ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ಸುಸಜ್ಜಿತ ಆಸ್ಪತ್ರೆಗಾಗಿ ಹೋರಾಟ ಮಾಡುತ್ತಿದ್ದಾರೆ. ನಾವು ಮೊದಲು ಈ ಕಾಲೇಜನ್ನು ಸಮಗ್ರ ಅಭಿವೃದ್ಧಿ ಮಾಡಿಕೊಂಡು ಬಳಿಕ ಹೊನ್ನಾವರ ಅಥವಾ ಕುಮಟಾ ಭಾಗದಲ್ಲಿ ಮತ್ತೊಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಯೋಚಿಸಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ೫ ತಿಂಗಳು ಕಳೆದಿದೆ. ಯಾರೊಬ್ಬರೂ ಇಂತಹ ವ್ಯವಸ್ಥೆ ಆಗಬೇಕು ಎಂದು ನಮ್ಮ ಬಳಿ, ಸ್ಥಳೀಯ ಶಾಸಕರ ಹತ್ತಿರ ಕೇಳಲಿಲ್ಲ. ನಿಮ್ಮ ಮನಸ್ಥಿತಿ ನೋಡಿದರೆ ಆಸಕ್ತಿ ಇಲ್ಲದಂತೆ ಕಾಣುತ್ತದೆ ಎಂದು ಕಿಡಿಕಾರಿದರು.ಎಂಆರ್‌ಐ ಯಂತ್ರಕ್ಕೆ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿದೆ. ಯಂತ್ರ ಬರುವುದು ಬಾಕಿದೆ. ನಮ್ಮ ಸರ್ಕಾರ ಬಂದಮೇಲೆ ಯಾವುದೇ ಪ್ರಸ್ತಾವನೆ ಕಾಲೇಜಿನಿಂದ ಸರ್ಕಾರಕ್ಕೆ ಹೋಗಿಲ್ಲ. ಆದರೂ ನಮ್ಮ ಕರ್ತವ್ಯ ಮರೆಯಬಾರದು. ಜನರಿಗೆ ತೊಂದರೆ ಆಗಬಾರದು ಎಂದು ಎಂಆರ್‌ಐ ಯಂತ್ರದ ಪ್ರಸ್ತಾವನೆ ಸಲ್ಲಿಸಿ ಮಂಜೂರಿ ಮಾಡಿಸಿಕೊಂಡಿದ್ದೇವೆ ಎಂದರು.ಶಾಸಕ ಸತೀಶ ಸೈಲ್, ಟ್ರಾಮಾಸೆಂಟರ್‌ಗೆ ಇಲ್ಲಿನ ವೈದ್ಯರು ನಿರಾಸಕ್ತಿ ತೋರುತ್ತಿದ್ದಾರೆ. ಜಾಗ ನೀಡಿ ಎಂದರೂ ನೆಪ ಹೇಳುತ್ತಿದ್ದಾರೆ. ಈಚೆಗೆ ದೊಡ್ಡ ಪ್ರಮಾಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ. ಸೌಜನ್ಯಕ್ಕೂ ಸ್ಥಳೀಯ ಶಾಸಕರನ್ನು ಆಹ್ವಾನಿಸಿಲ್ಲ. ಸಚಿವರು, ಶಾಸಕರು ಜಿಲ್ಲಾಧಿಕಾರಿ ಯಾರೂ ಇವರಿಗೆ ಸಂಬಂಧವಿಲ್ಲ. ಅವರದ್ದೇ ಬೇರೆ ಆಡಳಿತ ವ್ಯವಸ್ಥೆಯಿದೆ. ನಾವು ಗಂಭೀರವಾಗಿ ಪರಿಗಣಿಸದೇ ಇದ್ದರೆ ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದರು.
ಡಾ. ಪೂರ್ಣಿಮಾ ಮಾತನಾಡಿ, ೨೦೧೪ರಿಂದ ಈ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ಹಿರಿಯ ವೈದ್ಯರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನಾನು ಪ್ರಶ್ನೆ ಮಾಡಲು ಹೋದರೆ ನಮ್ಮನ್ನು ಟಾರ್ಗೆಟ್ ಮಾಡುತ್ತಾರೆ. ಅನಗತ್ಯವಾಗಿ ನಮಗೆ ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿದರು.ಡಾ. ಸವಿತಾ, ಡಾ. ಗಣೇಶ, ಡಾ. ಹೇಮಗಿರಿ ಕೂಡಾ ಕಾಲೇಜಿನ ಸಮಸ್ಯೆಗಳ ಬಗ್ಗೆ ಸಚಿವರಿಗೆ ತಿಳಿಸಿದರು. ಸೈಲ್, ನೀವು ನಿಮ್ಮದಿಯಿಂದ ಇಲ್ಲದಿದ್ದರೆ ರೋಗಿಗಳನ್ನು ಗುಣಪಡಿಸಲು ಸಾಧ್ಯವಿಲ್ಲ. ನಿಮ್ಮ ಜೀವಿತಾವಧಿ ಕೊನೆಯವರಿಗೂ ಜನರನ್ನು ಬದುಕಿಸಬಹುದು. ಬೇರೆ ಯಾರಿಗೂ ಅವಕಾಶವಿಲ್ಲ. ವೈದ್ಯರಿಗೊಂದೆ ಈ ಒಂದೇ ಅವಕಾಶ ಇರುತ್ತದೆ ಎಂದರು.