ಕನ್ನಡಪ್ರಭ ವಾರ್ತೆ ಹೊನ್ನಾಳಿ
ಈ ವೇಳೆ ಮಾತನಾಡಿ, ಇರುವಷ್ಟು ದಿನ ಮನುಷ್ಯ ಒಳೆಯದನ್ನು ಮಾಡಬೇಕು ಆಗ ಮಾತ್ರ ಜನ ಮತ್ತು ಸಮಾಜ ನಿಧನದ ನಂತರವೂ ವ್ಯಕ್ತಿಯನ್ನು ಸ್ಮರಿಸುತ್ತಾರೆ, ಇದಕ್ಕೆ ಉದಾಹರಣೆ ದಿವಂಗತ ಎಂ.ರಮೇಶ್ ಅವರು ಪಪಂ ಸದಸ್ಯರಾಗಿ, ನಂತರ ಅಧ್ಯಕ್ಷರಾಗಿ ಹಾಗೂ ಜಿಪಂ ಸದಸ್ಯರಾಗಿ ಉತ್ತಮ ಸೇವೆ ಮಾಡಿದ್ದಾರೆ ಎಂದು ತಾವು ಕೇಳಿದ್ದು, ಅವರ ನಿಧನ ಕೇವಲ ಸಮಾಜಕ್ಕೆ ಮಾತ್ರವಲ್ಲ ಪಕ್ಷಕ್ಕೂ ಕೂಡ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಹೇಳಿದ ಅವರು, ನಮ್ಮ ಕಾಂಗ್ರೆಸ್ ಪಕ್ಷ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಕುಟುಂಬದವರಿಗೆ ಹೇಳಿದರು.
ಈ ವೇಳೆ ಕೆಪಿಸಿಸಿ ಉಪಾಧ್ಯಕ್ಷ ಹಾಲಪ್ಪ ತುಮಕೂರು, ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಎಚ್.ಎ. ಉಮಾಪತಿ, ತಾಲೂಕು ಅಧ್ಯಕ್ಷ ಎಚ್.ಬಿ.ಶಿವಯೋಗಿ, ಮಾಜಿ ಶಾಸಕ ಡಾ. ಗಂಗಪ್ಪ, ಹಿರಿಯ ಮುಖಂಡ ಬಿ.ಸಿದ್ದಪ್ಪ, ಜಿಲ್ಲಾ ಯುವ ಸಮಿತಿ ಕಾರ್ಯದರ್ಶಿ ಎಚ್.ಎಸ್.ರಂಜಿತ, ಮನೋಜ್ ವಾಲಜ್ಜಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ, ಮುಂತಾದವರು ಇದ್ದರು.