ಸುರಪುರ: ಬಿಜೆಪಿ ಅಭ್ಯರ್ಥಿ ರಾಜೂಗೌಡ ಭರ್ಜರಿ ರೋಡ್‌ ಶೋ

KannadaprabhaNewsNetwork |  
Published : Apr 19, 2024, 01:00 AM ISTUpdated : Apr 19, 2024, 01:01 AM IST
ಸುರಪುರ ಬಿಜೆಪಿ ಅಭ್ಯರ್ಥಿ ರಾಜೂಗೌಡ ನಾಮಪತ್ರ ಸಲ್ಲಿಸುವ ನಿಮಿತ್ತ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸೇರಿದ್ದ ಜನಸ್ತೋಮ. | Kannada Prabha

ಸಾರಾಂಶ

ಮೇ 7 ರಂದು ನಡೆಯಲಿರುವ ಸುರಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರ ಸ್ಪರ್ಧಿಸಿರುವ ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಗುರುವಾರ ತಮ್ಮ ಸಾವಿರಾರು ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಭರ್ಜರಿ ರೋಡ್‌ ಶೋ ನಡೆಸಿ ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಮೇ 7 ರಂದು ನಡೆಯಲಿರುವ ಸುರಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರ ಸ್ಪರ್ಧಿಸಿರುವ ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಗುರುವಾರ ತಮ್ಮ ಸಾವಿರಾರು ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಭರ್ಜರಿ ರೋಡ್‌ ಶೋ ನಡೆಸಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ, ನಗರದ ವೇಣುಗೋಪಾಲ ಸ್ವಾಮಿ, ಬನಶಂಕರಿ ದೇವಿ ದೇಗುಲಗಳಿಗೆ ಕುಟುಂಬಸ್ಥರು, ಮುಖಂಡರು, ಕಾರ್ಯಕರ್ತರೊಂದಿಗೆ ಪೂಜೆ ಸಲ್ಲಿಸಿದರು.

ಹುಣಸಗಿ ಮತ್ತು ಸುರಪುರ ತಾಲೂಕಿನ ಗ್ರಾಮಗಳಿಂದ ನೂರಾರು ವಾಹನಗಳಲ್ಲಿ ಕಾರ್ಯಕರ್ತರ ಹಾಗೂ ಬೆಂಬಲಿಗರ ಜನಸಮೂಹ ಸುರಪುರ ನಗರಕ್ಕೆ ಆಗಮಿಸಿತ್ತು. ನಗರದಲ್ಲಿ ಎಲ್ಲಿ ನೋಡಿದರಲ್ಲಿ ಬಿಜೆಪಿ ಕಾರ್ಯಕರ್ತರೇ ಕಾಣಿಸುತ್ತಿದ್ದರು.

ಮಧ್ಯಾಹ್ನ 12 ಗಂಟೆ ಸುಮಾರಿಗೆ ನಗರಸಭೆಗೆ ಮುಖಂಡರೊಂದಿಗೆ ಆಗಮಿಸಿದ ರಾಜೂಗೌಡ, ತೆರೆದ ವಾಹನದಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ, ಕೊಪ್ಪಳ ಎಂಎನ್‌ಸಿ ಹೇಮಲತಾ ನಾಯ್ಕ್, ದಯಾನಂದ ಮ್ಯಾಕ್ಸ್, ರಾಜಾ ಹನುಮಪ್ಪ ನಾಯಕ ತಾತಾ, ಮಂಡಲ ಅಧ್ಯಕ್ಷ ವೇಣುಮಾಧವ ನಾಯಕ ಸೇರಿದಂತೆ ಇತರರು ಕಾರ್ಯಕರ್ತರ ಜೊತೆಗೂಡಿದರು.

ತೆರೆದ ವಾಹನದಲ್ಲಿ ಮೆರವಣಿಗೆ ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸಿದ ಮುಖಂಡರು ಪ್ರಚಾರ ವೇಳೆ ಮಾತನಾಡಿದರು. ಬಿರು ಬಿಸಿಲಿಗೆ ಜಗ್ಗದ ಕಾರ್ಯಕರ್ತರು ತಮ್ಮ ನಾಯಕನಿಗಾಗಿ ನಿಂತಲ್ಲೇ ನಿಂತು ಭಾಷಣ ಆಲಿಸಿದರು.

ಕೇಸರಿ ಟೋಪಿ: ನಗರದಲ್ಲಿ ಎಲ್ಲಿ ನೋಡಿದರೂ ಬಿಸಿಲಿನಿಂದ ಸಂರಕ್ಷಿಸಿಕೊಳ್ಳಲು ಕೇಸರಿ ಟೋಪಿಯನ್ನು ಬಳಸಿದ್ದು, ಅವ್ಯಾಹಿತವಾಗಿ ಕಂಡುಬಂದಿತು. ಕುಡಿಯಲು ನೀರಿನ ಪ್ಯಾಕೆಟ್‌ಗಳನ್ನು ನೀಡಲಾಗುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿತ್ತು.

ಬಿಜೆಪಿ ಅಭ್ಯರ್ಥಿ ರಾಜೂಗೌಡ ಮಾತನಾಡಿ, ಹಿರಿಯರು, ಶಾಸಕರು ನಮ್ಮನ್ನು ಅಗಲಿ ಸ್ವರ್ಗದಲ್ಲಿದ್ದಾರೆ. ಅವರೊಂದಿಗೆ ನಮ್ಮ ಹೋರಾಟವಿತ್ತೇ ಹೊರತು ಈಗಿನ ಅಭ್ಯರ್ಥಿಯೊಂದಿಗಲ್ಲ. ಈಗಿನ ಕಾಂಗ್ರೆಸ್ ಅಭ್ಯರ್ಥಿ ಸುರಪುರಕ್ಕೆ ಕೊಟ್ಟ ಅಭಿವೃದ್ಧಿ ಕೊಡುಗೆಗಳು ಏನು ಎಂಬುದನ್ನು ತೋರಿಸಲಿ. ಅವರೊಂದಿಗೆ ಬಹಿರಂಗ ಚರ್ಚೆಗೂ ಸಿದ್ಧ ಎಂದು ಕಾಂಗ್ರೆಸ್ ಅಭ್ಯರ್ಥಿ ಪರ ಚಾಟಿ ಬೀಸಿದರು.

ಚುನಾವಣೆಯಲ್ಲಿ ಯಾವುದೋ ಒಂದು ಗಾಳಿಯಿಂದ ನಾನು ಸೋತಿರುವೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಗಾಳಿಯಿಂದಾಗಿ ನನ್ನ ಗೆಲುವು ನಿಶ್ಚಿತವಾಗಿದೆ. ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆದ್ದರಿಂದ ಈ ಬಾರಿ ಕ್ಷೇತ್ರದಲ್ಲಿ ಕಮಲ ಅರಳುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯೆ ಹೇಮಲತಾ ನಾಯ್ಕ ಮಾತನಾಡಿ, ರಾಜೂಗೌಡರು ಅಪಾರ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ