ಸುರಪುರ ಬಿಜೆಪಿ ಅಭ್ಯರ್ಥಿ ರಾಜೂಗೌಡ ಕೋಟಿ ಧಣಿ

KannadaprabhaNewsNetwork |  
Published : Apr 14, 2024, 01:54 AM ISTUpdated : Apr 14, 2024, 11:26 AM IST
ಸುರಪುರ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಉಮೇದುವಾರಿಕೆಯನ್ನು ಸಲ್ಲಿಸುತ್ತಿರುವ ಮಾಜಿ ಸಚಿವ ರಾಜೂಗೌಡ. | Kannada Prabha

ಸಾರಾಂಶ

ಸುರಪುರ ನಗರದ ತಹಸೀಲ್ದಾರ್ ಕಚೇರಿಯಲ್ಲಿನ ಸುರಪುರ-36 ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) ನಾಮಪತ್ರದಲ್ಲಿ ತಮ್ಮ ಆಸ್ತಿ ವಿವಿರವನ್ನು ಘೋಷಿಸಿಕೊಂಡಿದ್ದು, ಕೋಟಿ ಒಡೆಯರಾಗಿದ್ದಾರೆ.

  ಸುರಪುರ : ನಗರದ ತಹಸೀಲ್ದಾರ್ ಕಚೇರಿಯಲ್ಲಿನ ಸುರಪುರ-36 ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) ನಾಮಪತ್ರದಲ್ಲಿ ತಮ್ಮ ಆಸ್ತಿ ವಿವಿರವನ್ನು ಘೋಷಿಸಿಕೊಂಡಿದ್ದು, ಕೋಟಿ ಒಡೆಯರಾಗಿದ್ದಾರೆ.

ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ. ಅವರಿಗೆ ತಮ್ಮ ಉಮೇದುವಾರಿಕೆಯಲ್ಲಿ ಆಸ್ತಿ ವಿವರ ಸಲ್ಲಿಸಿದ್ದಾರೆ. ರಾಜೂಗೌಡರ ಚರಾಸ್ತಿ 5,13,19, 449. 85 ರು. ಗಳು, ಸ್ಥಿರಾಸ್ತಿ 8,60,57,760 ರು.ಗಳಿದೆ. ಪತ್ನಿ ಹೆಸರಲ್ಲಿ 86,32,224.50 ರು.ಗಳು ಹಾಗೂ ಪುತ್ರ ಮಣಿಕಂಠ ನಾಯಕ ಹೆಸರಲ್ಲಿ 22,21,901 ರು.ಗಳು ಆದಾಯದ ವಿವರ ಸಲ್ಲಿಸಿದ್ದಾರೆ.

ಆಸ್ತಿ: 5,55,32,610 ರು.ಗಳು ಮೌಲ್ಯದ ಸ್ವಯಾರ್ಜಿತ ಸ್ವತ್ತುಗಳು ಹಾಗೂ 3,05,25,150 ರು. ಗಳು ಮೌಲ್ಯದ ಪಿತ್ರಾರ್ಜಿತ ಸ್ವತ್ತುಗಳು ಮತ್ತು ಬ್ಯಾಂಕು, ಹಣಕಾಸು ಸಂಸ್ಥೆಗಳು ಸೇರಿದಂತೆ ಇತರರಿಂದ 41,25,347 ರು.ಗಳು ಸಾಲ ಹೊಂದಿರುವುದಾಗಿ ಹಾಗೂ ಕೈಯಲ್ಲಿರುವ ನಗದು ರೂಪದಲ್ಲಿ 3,58,800 ರು.ಗಳು ಇದೆ. ಪತ್ನಿಯ ಹತ್ತಿರ ನಗದು 1 ಲಕ್ಷ ರು.ಗಳು, ಪುತ್ರ ಮಣಿಕಂಠನಾಯಕ ಹತ್ತಿರ ನಗದು 1.50 ಲಕ್ಷ ರು. ಗಳು ಇದೆ.

ಹೂಡಿಕೆ: ವಿವಿಧ ಕಂಪನಿಗಳು, ಮ್ಯೂಚುವೆಲ್ ಫಂಡ್‌ಬಾಂಡ್‌ಗಳು ಹಾಗೂ ಷೇರುಗಳಲ್ಲಿ ಮಾಡಿರುವ ಹೂಡಿಕೆ ಕ್ರೇನ್ ಮೆಲ್ಟೋ ಪಿಪೈನ್ಸ್ ಕಂಪನಿ ಬೆಂಗಳೂರಲ್ಲಿ 8 ಲಕ್ಷ ರು., ತಾಯಿ ತಿಮ್ಮಮ್ಮ ಶುಗರ್ ಆ್ಯಂಡ್ ಎಥಾನಾಲ್ ಪ್ರೈ.ಲಿ 5 ಲಕ್ಷ ರು., ತಾಯಿ ತಿಮ್ಮಮ್ಮ ಕೋಲ್ಡ್ ಸ್ಟೋರೇಜ್ ಪ್ರೈ.ಲಿ 5 ಲಕ್ಷ ರು., ತಾಯಿ ತಿಮ್ಮಮ್ಮ ಶುಗರ್ ಆ್ಯಂಡ್ ಎಥಾನಾಲ್ ಪ್ರೈ.ಲಿ 25.50 ಲಕ್ಷ ರು., ತಾಯಿ ತಿಮ್ಮಮ್ಮ ಕೋಲ್ಡ್ ಸ್ಟೋರೆಜ್ ಪ್ರೈ.ಲಿ 50 ಸಾವಿರ ರು. ಗಳು, ತಾಯಿ ತಿಮ್ಮಮ್ಮ ಅಗ್ರಿ ಸರ್ವಿಸ್ ಪ್ರೈ.ಲಿ 50 ಸಾವಿರ ರು.ಗಳು, ತಾಯಿ ತಿಮ್ಮಮ್ಮ ಅಗ್ರಿವೆಂಚರ್ ಪ್ರೈ.ಲಿ 50 ಸಾವಿರ ರು.ಗಳು ಹೂಡಿಕೆ ಮಾಡಲಾಗಿದೆ.

ಕಾರು-ಚಿನ್ನ: 29.69 ಲಕ್ಷ ರು. ಮೌಲ್ಯದ ಫಾರ್ಚುನರ್ ಕಾರು, 240 ಗ್ರಾಂ ಚಿನ್ನ, ಪತ್ನಿ ಬಳಿ 1250 ಗ್ರಾಂ ಚಿನ್ನ, ಮಗನ ಬಳಿ 270 ಗ್ರಾಂ ಚಿನ್ನವಿದೆ.

ಕೃಷಿ: ಒಕ್ಕಲುತನ ಮತ್ತು ಕುರಿ ಸಾಕಾಣಿಕೆಯಿಂದ 1.05 ಕೋಟಿ, ಎಮ್ಮೆಗಳ ಮೌಲ್ಯ 18.40 ಲಕ್ಷ ಹಾಗೂ ಇತರೆ ಕೃಷಿ ಸಾಮಗ್ರಿಗಳು 27,50,136 ರೂ. ಒಟ್ಟು 5,13,19,449 ಮೌಲ್ಯದ ಸಂಪತ್ತುವಿದೆ. ರಾಯನಗೊಳ ಗ್ರಾಮದಲ್ಲಿ ಹಾಗೂ ಕೊಡೇಕಲ್ ಗ್ರಾಮದಲ್ಲಿ 39.37 ಎಕರೆ ಕೃಷಿ ಭೂಮಿಯಿದೆ. ಬೆಂಗಳೂರಿನ ರ‍್ಸೂರ ಗ್ರಾಮದಲ್ಲಿ 2640 ಚದರಡಿ, ಬೆಂಗಳೂರಿನ ಭೂಪಸಂದ್ರದಲ್ಲಿ 4000 ಚದರಡಿ ಭೂಮಿ ಇದೆ. ಕೊಡೇಕಲ್ ಗ್ರಾಮದಲ್ಲಿ ಒಂದು ಮನೆ ಹೊಂದಿರುವುದಾಗಿ ತಮ್ಮ ದೃಢೀಕರಣದಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸೂಚಕರಾದ ಯಲ್ಲಪ್ಪ ಕುರಕುಂದಿ, ಮುಖಂಡರಾದ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ಭೀಮಾಶಂಕರ ಬಿಲ್ಲವ್, ಶೇಖರ ನಾಯ್ಕ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!