ಮಾಡಿಯೂ ಮಾಡದಂತಿರುವವನು ಶರಣ: ಹೊನ್ನಾಳಿ ಶ್ರೀ

KannadaprabhaNewsNetwork |  
Published : Sep 09, 2025, 01:01 AM IST
ಧರ್ಮಸಭೆಯಲ್ಲಿ ಬ್ಯಾಡಗಿ ವರ್ತಕರ ಸಂಘದ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರಾದ ನಾಗಣ್ಣ ಕೆಂಬಿ ದಂಪತಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಎಲ್ಲವನ್ನೂ ಮಾಡಿಯೂ ಮಾಡದಂತಿರುವವನು ಶರಣ ಎನ್ನುವ ಮಾತು ಇತ್ತೀಚೆಗೆ ಬ್ಯಾಡಗಿ ವರ್ತಕರ ಸಂಘದ ಜೀವಮಾನ ಸಾಧನೆಗಾಗಿ ಪ್ರಶಸ್ತಿ ಪುರಸ್ಕೃತರಾದ ನಾಗಣ್ಣ ಕೆಂಬಿ ಅವರಿಗೆ ಅಕ್ಷರಶಃ ಸಲ್ಲುತ್ತದೆ.

ರಾಣಿಬೆನ್ನೂರು: ಸಮಾಜ ಸುಧಾರಕರ ಕಾರ್ಯಗಳು ಅವರಿಗೆ ಚಿಕ್ಕವಾದರೂ ಸಮಾಜಕ್ಕೆ ಅವೇ ದೊಡ್ಡವಾಗಿರುತ್ತವೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ನುಡಿದರು. ನಗರದ ಚೆನ್ನೇಶ್ವರ ಮಠದಲ್ಲಿ ಭಾನುವಾರ ಸಂಜೆ ಜರುಗಿದ ಜ್ಞಾನವಾಹಿನಿ ಮಾಸಿಕ ಧರ್ಮಸಭೆ ಹಾಗೂ ಶ್ರೀಶೈಲ ಪೀಠದ ಲಿಂ. ಜಗದ್ಗುರು ವಾಗೀಶ ಪಂಡಿತಾರಾಧ್ಯ ಮತ್ತು ಉಮಾಪತಿ ಪಂಡಿತಾರಾಧ್ಯರ ಸಂಸ್ಮರಣೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಎಲ್ಲವನ್ನೂ ಮಾಡಿಯೂ ಮಾಡದಂತಿರುವವನು ಶರಣ ಎನ್ನುವ ಮಾತು ಇತ್ತೀಚೆಗೆ ಬ್ಯಾಡಗಿ ವರ್ತಕರ ಸಂಘದ ಜೀವಮಾನ ಸಾಧನೆಗಾಗಿ ಪ್ರಶಸ್ತಿ ಪುರಸ್ಕೃತರಾದ ನಾಗಣ್ಣ ಕೆಂಬಿ ಅವರಿಗೆ ಅಕ್ಷರಶಃ ಸಲ್ಲುತ್ತದೆ. ನೂರಾರು ಕೋಟಿಗಳ ವ್ಯಾಪಾರ ವಹಿವಾಟಿನ ಒಡೆಯರಾಗಿದ್ದರೂ ಸಾಮಾನ್ಯರಲ್ಲಿ ಸಾಮಾನ್ಯರು ನಾಗಣ್ಣನವರಾಗಿದ್ದಾರೆ ಎಂದರು.

ಸೈಕಲ್ ಮೇಲೆ ಆರಂಭವಾದ ಮೆಣಸಿನಕಾಯಿ ವ್ಯಾಪಾರ ವಿವಿಧ ಬ್ರಾಂಡ್‌ಗಳ ಮೂಲಕ ಭಾರತ ಸೇರಿದಂತೆ ವಿದೇಶಗಳನ್ನು ತಲುಪಿದೆ. 80ರ ಹರೆಯದ ದಣಿವರಿಯದ ನಾಗಣ್ಣ ಕೆಂಬಿ, ಅನುಭವಿ ಶರಣರು ನಮ್ಮ ಸಂಸ್ಥೆಯ ಪದಾಧಿಕಾರಿಗಳಲ್ಲಿ ಒಬ್ಬರಾಗಿರುತ್ತಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು. ಸನ್ಮಾನ ಸ್ವೀಕರಿಸಿದ ನಾಗರಾಜ ಕೆಂಬಿ ಮಾತನಾಡಿ, ನಾವು ಮಾಡುವ ಕೆಲಸಗಳೇ ನಮಗೆ ಪ್ರಶಸ್ತಿಗಳು. ಸಾಧನೆ ಸಾಧಕನ ಸ್ವತ್ತೆ ಹೊರತು ಆಲಸಿಗಳದ್ದಲ್ಲ. ಉಣ್ಣಲು, ಉಡಲು ಕೊಟ್ಟಿರುವ ಭಗವಂತನಿಗೆ ಏನನ್ನೂ ಕೇಳಬಾರದು. ಬದಲಾಗಿ ಕೊಟ್ಟಿರುವುದನ್ನು ಸಮಾಜದ ಒಳಿತಿಗೋಸ್ಕರ ವಿನಿಯೋಗಿಸಲು ಕಲಿಯಬೇಕು. ಆಗ ಭಗವಂತ ಮತ್ತಷ್ಟು ಕೊಡುತ್ತಾನೆ ಎನ್ನುವುದು ನನ್ನ ಯಶಸ್ಸಿನ ಹಿಂದಿರುವ ರಹಸ್ಯ ಎಂದರು. ಸಮಾರಂಭದಲ್ಲಿ ನಾಗರಾಜ ಕೆಂಬಿ ದಂಪತಿಗಳು, ಪ್ರಥಮದರ್ಜೆ ಗುತ್ತಿಗೆದಾರ ಪ್ರಭಾಕರ ಮುದಗಲ್, ಬಿಸಿಎಂ ಇಲಾಖೆ ನಿವೃತ್ತ ಅಧಿಕಾರಿ ವಿ.ಎಸ್. ಹಿರೇಮಠ ಅವರಿಗೆ ಗುರುರಕ್ಷೆ ನೀಡಿ ಸನ್ಮಾನಿಸಲಾಯಿತು. ನೆಹರು ಮಾರ್ಕೆಟ್ ವರ್ತಕರ ಸಂಘದ ಅಧ್ಯಕ್ಷ ಬಸವರಾಜಣ್ಣ ಪಟ್ಟಣಶೆಟ್ಟಿ, ಜಗದೀಶ ಮಳಿಮಠ, ರಾಜೇಂದ್ರಕುಮಾರ ತಿಳುವಳ್ಳಿ, ಸುಜೀತ ಜಂಬಗಿ, ಚಂದ್ರಣ್ಣ ಜಂಬಗಿ, ಚಂದ್ರಣ್ಣ ಸೊಪ್ಪಿನ, ಬಿದ್ದಾಡೆಪ್ಪ ಚಕ್ರಸಾಲಿ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀಶೈಲ ಪೀಠದ ಲಿಂ. ಜಗದ್ಗುರು ವಾಗೀಶ ಪಂಡಿತಾರಾಧ್ಯರ ಕುರಿತು ಬಿಎಜೆಎಸ್‌ಎಸ್ ಬಿಇಡಿ ಕಾಲೇಜಿನ ಪ್ರಾ. ಡಾ. ಎಂ.ಎಂ. ಮೃತ್ಯುಂಜಯ ಉಪನ್ಯಾಸ ನೀಡಿದರು.ಗೌರಮ್ಮ ಜಂಬಗಿ, ವೀರಣ್ಣ ಜಂಬಗಿ, ಗುರುಶಾಂತಯ್ಯ ಆರಾಧ್ಯಮಠ, ಸುರೇಶ್ ಮಳೆಮಠ, ಶಿವಯೋಗಿ ಹಿರೇಮಠ, ಅಮೃತಗೌಡ ಹಿರೇಮಠ, ಕಸ್ತೂರಮ್ಮ ಪಾಟೀಲ, ಸುನಂದಮ್ಮ ತಿಳುವಳ್ಳಿ, ಉಮೇಶಣ್ಣ ಗುಂಡಗಟ್ಟಿ, ಶಿವಾನಂದ ಸೊಂಡೂರ, ಶಿವಯೋಗಿ ಹಿರೇಮಠ, ಎಂ.ಕೆ. ಹಾಲಸಿದ್ದಯ್ಯ, ಸೋಮನಾಥ ಹಿರೇಮಠ, ಮೃತ್ಯುಂಜಯ ಪಾಟೀಲ, ಗಾಯಿತ್ರಮ್ಮ ಕುರವತ್ತಿ, ಶಕುಂತಲಮ್ಮ, ಭಾಗ್ಯಮ್ಮ ಹಾಗೂ ತಾಲೂಕು ಶ್ರೀ ವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘ, ಶ್ರೀ ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆಯ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು