ಸಮಾಜ ತಿದ್ದಿದ ಕಾಯಕ ಶರಣರು: ಎಡಿಸಿ ರಜಪೂತ್‌

KannadaprabhaNewsNetwork |  
Published : Feb 11, 2024, 01:48 AM ISTUpdated : Feb 11, 2024, 04:05 PM IST
ಕಾರವಾರದ ಡಿಸಿ ಕಚೇರಿಯಲ್ಲಿ ಕಾಯಕ ಶರಣರ ಜಯಂತೋತ್ಸವ ನಡೆಯಿತು. | Kannada Prabha

ಸಾರಾಂಶ

ಕಾಯಕ ಶರಣರು ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ಹೋಗಲಾಡಿಸಿ ಎಲ್ಲರೂ ಸಮಾತೆಯಿಂದ ಬದುಕಬೇಕು ಎಂದು ತಮ್ಮ ಕಾಯಕ ಹಾಗೂ ಸರಳ ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು.

ಕಾರವಾರ: ಕಾಯಕ ಶರಣರು ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ ಹೋಗಲಾಡಿಸಿ ಎಲ್ಲರೂ ಸಮಾತೆಯಿಂದ ಬದುಕಬೇಕು ಎಂದು ತಮ್ಮ ಕಾಯಕ ಹಾಗೂ ಸರಳ ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದರು ಎಂದು‌ ಅಪರ ಜಿಲ್ಲಾಧಿಕಾರಿ‌ ಪ್ರಕಾಶ ರಜಪೂತ ಅಭಿಪ್ರಾಯಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉರಿಲಿಂಗಪೆದ್ದಿ, ಮಾದರ ಧೂಳಯ್ಯ, ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

12ನೇ ಶತಮಾನದಲ್ಲಿ‌ನ ಶ್ರೇಷ್ಠ ಶರಣರಲ್ಲಿ ಉರಿಲಿಂಗಪೆದ್ದಿ, ಮಾದಾರ ಧೂಳಯ್ಯ, ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ ಪ್ರಮುಖರಾಗಿದ್ದಾರೆ. 

ಇವರು ತಮ್ಮ ಕಾಯಕದ ಮೂಲಕ ಸಮಾಜದಲ್ಲಿ‌ ತಾವು ಮಾಡುವ ಕಾಯಕದಲ್ಲಿ ಶಿವನನ್ನು ಕಂಡವರು. ಯಾವುದೇ ವೃತ್ತಿ‌ಯಲ್ಲಿ ಮೇಲುಕೀಳೆಂಬ ಭಾವನೆ ಇರಬಾರದು, ನಾವು ಮಾಡುವ ವೃತ್ತಿಯಲ್ಲಿ ಪ್ರಮಾಣಿಕತೆ, ಶ್ರದ್ಧೆ ಇರಬೇಕು‌ ಎಂದು ತೋರಿಸಿಕೊಟ್ಟವರು. 

ಅಂತಹ ಮಹಾನ ಶಿವಶರಣರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಡಾ. ಡಿ.ಎಸ್. ದೊಡ್ಡಮನಿ ಉಪನ್ಯಾಸ ನೀಡಿ, ಕರ್ನಾಟಕ ಇತಿಹಾಸ ಮತ್ತು ಕನ್ನಡ ಸಾಹಿತ್ಯದಲ್ಲಿ‌ 12ನೇ ಶತಮಾನ ಅತ್ಯಂತ ಪ್ರಮುಖ ಕಾಲಘಟ್ಟವಾಗಿದೆ. 

ಈ ಕಾಲಘಟ್ಟದಲ್ಲಿ ಜನಸಾಮಾನ್ಯರು ಶಿಕ್ಷಣದಿಂದ ವಂಚತರಾಗಿದ್ದರು. ಇಂತಹ ಸಂದರ್ಭದಲ್ಲಿ‌ ಕಾಯಕ ಶರಣರು ಆಡುಭಾಷೆಯಲ್ಲಿ ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಸರಳವಾಗಿ ವಚನಗಳನ್ನು ರಚಿಸಿ ಸಮಾಜದಲ್ಲಿನ ಮೇಲುಕೀಳು ಎಂಬ ತಾರತಮ್ಯ ಹೋಗಲಾಡಿಸಿ ಸಮಾಜ ತಿದ್ದುವ ಕೆಲಸ ಮಾಡಿದರು ಎಂದು ತಿಳಿಸಿದರು.

ಯಾವುದೇ ಕಾಯಕವು ಜಾತಿಯ ಸಂಕೇತವಲ್ಲ. ಜಾತಿ ಹುಟ್ಟಿನಿಂದ ಬಂದಿದ್ದಲ್ಲ. ಉಪ ಜೀವನಕ್ಕೆ ಕೈಗೊಂಡ ಕಾಯಕ ಜಾತಿಯಲ್ಲ ಎಂಬ ಕಾಯಕ ಶರಣರ ನಿಲುವು ಸಮಾಜದಲ್ಲಿ ಬದಲಾವಣೆ ತಂದಿತು ಎಂದು ಹೇಳಿದರು.

ಸಭಾ ಕಾರ್ಯಕ್ರಮಕ್ಕೂ ಪೂರ್ವ ಕಾಯಕ ಶರಣರ ಭಾವಚಿತ್ರವಿರುವ ಜಾಥಾಕ್ಕೆ ಚಾಲನೆ ನೀಡಲಾಯಿತು. ಜಾಥದಲ್ಲಿ ವಿದ್ಯಾರ್ಥಿಗಳು, ವಿವಿಧ ಸಮಾಜದ ಮುಖಂಡರು, ಅಧಿಕಾರಿಗಳು ಪಾಲ್ಗೊಂಡಿದ್ದರು.

ನಗರಸಭಾ ಸದಸ್ಯ ಹನಮಂತಪ್ಪ ತಳವಾರ, ನಗರಸಭೆ ಪೌರಾಯುಕ್ತ ಕೆ. ಚಂದ್ರಮೌಳಿ‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಾಮಚಂದ್ರ ಕೆ.ಎಂ., ಕರ್ನಾಟಕ ರಾಜ್ಯ ಚಮಗಾರ ಹರಳಯ್ಯ ಸಮಾಜದ ರಾಜ್ಯ ಸಂಘಟನಾ ಸಂಚಾಲಕ ದೀಪಕ ಕುಡಾಳಕರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಡಗಿ, ನಾಲತವಾಡಗೆ ಪಿಯು ಕಾಲೇಜು ಪರಿಶೀಲಿಸಿ ಮಂಜೂರು
ಲಗಾನಿ ಹೆಸರಿನಲ್ಲಿ ಕಬ್ಬು ಬೆಳೆಗಾರರ ಲೂಟಿ