ಜಿಲ್ಲಾಧಿಕಾರಿ ಸತ್ಯಭಾಮ ಅವರಿಗೆ ಪತ್ರಕನ್ನಡಪ್ರಭ ವಾರ್ತೆ ಹಾಸನ
ನಿವಾಸಿ ಸಯ್ಯದ್ ನದೀಮ್ ಮಾಧ್ಯಮದೊಂದಿಗೆ ಮಾತನಾಡಿ, ಈ ಜಾಗವು ಸರ್ಕಾರದ ದಿಶಾಂಕ್ ಆ್ಯಪ್‌ನಲ್ಲಿ ಪರಿಶೀಲಿಸಿದಾಗ ಅದು ಕೆರೆಯ ಜಾಗವಾಗಿದೆ. ಅಲ್ಲಿ ಹಾಸನ ನಗರದ ವಾರ್ಡ್ ನಂ ೧೬,೧೭,೧೮ ರಲ್ಲಿ ಸಾರ್ವಜನಿಕರು ವಾಸವಾಗಿದ್ದು, ಹಾಲಿ ಈದ್ಗಾ ಮೈದಾನದ ಮುಂಭಾಗದಲ್ಲಿದೆ. ಸರ್ಕಾರಿ ನಿಯಮದಂತೆ ಕೆರೆಯ ಜಾಗವು ಸರ್ಕಾರದ ಸ್ವತ್ತಾಗಿದ್ದು, ಕೆರೆಯ ಜಾಗದಲ್ಲಿ ಯಾವುದೇ ಇತರೆ ಕಾಮಗಾರಿಗಾಗಲೀ, ಕಟ್ಟಡಗಳಿಗಾಗಲೀ ನೀಡಲು ಅವಕಾಶವಿರುವುದಿಲ್ಲ ಎಂದು ಸಾರ್ವಜನಿಕರು.
ಕೆರೆಯ ಜಾಗದಲ್ಲಿ ಕರ್ನಾಟಕ ಕೊಳಚೆ ಮತ್ತು ಒಳಚರಂಡಿ ನಿರ್ಮೂಲನಾ ಮಂಡಳಿಯಿಂದ, ಕೊಳಚೆ ನೀರು ಸಂಸ್ಕರಣೆ ಕೇಂದ್ರ ಮಾಡುವ ಉದ್ದೇಶವಿದೆ. ಇದರಿಂದ, ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತದೆ. ಈ ಜಾಗದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಜಮೀನಿನಲ್ಲಿ, ಸರ್ಕಾರಿ ಶಾಲೆಯಾಗಲಿ, ಉದ್ಯಾನವಾಗಲಿ, ಆಸ್ಪತ್ರೆಯಾಗಲಿ, ನಿರ್ಮಿಸಿದಲ್ಲಿ ಅಭ್ಯಂತರವಿರುವುದಿಲ್ಲ. ಆದರೆ ಸಾರ್ವಜನಿಕರಿಗೆ ತೊಂದರೆಯಾಗುವ ಕೊಳಚೆ ನೀರು ಸಂಸ್ಕರಣಾ ಕೇಂದ್ರ ತೆರೆಯಲು ಅವಕಾಶ ಕೊಡಬಾರದು ಎಂಬುದು ಎಲ್ಲಾ ಸಾರ್ವಜನಿಕರ ಅಭಿಪ್ರಾಯವಾಗಿದೆ ಎಂದು ಪತ್ರದಲ್ಲಿ ಸಾರ್ವಜನಿಕರು ಹೇಳಿದ್ದಾರೆ.ನಿವಾಸಿಗಳಾದ ಇಸ್ಮಾಯಿಲ್, ಅಮಾನುಲ್ಲಾ ಶರೀಫ್, ಆಸೀಫ್, ರಶೀದ್, ಶಾರುಕ್, ನದೀಮ್, ಅಲೀಮ್ ಇದ್ದರು.ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಬಂದಿದ್ದ ನಿವಾಸಿಗಳು.