ಬೆಳಗೋಡು ಜಮೀನು ವಿವಾದ ಹಿನ್ನೆಲೆ ಸರ್ವೆ ಅಧಿಕಾರಿಗಳು ವಾಪಸ್

KannadaprabhaNewsNetwork |  
Published : Oct 02, 2026, 02:00 AM IST
30ಎಚ್ಎಸ್ಎನ್17 :  | Kannada Prabha

ಸಾರಾಂಶ

ಬೆಳಗೋಡು ಗ್ರಾಮದ ಸರ್ವೆ ನಂ. 238ರಲ್ಲಿ 3 ಗುಂಟೆ, ಸರ್ವೆ ನಂ. 239ರಲ್ಲಿ 1 ಎಕರೆ 1 ಗುಂಟೆ ಹಾಗೂ ಸರ್ವೆ ನಂ. 224ರಲ್ಲಿ 6 ಗುಂಟೆ ಕಾಫಿ ತೋಟದ ಜಮೀನು ನಮ್ಮ ಹೆಸರಿನಲ್ಲಿದ್ದು, ಕಳೆದ 70 ವರ್ಷಗಳಿಂದ ನಮ್ಮ ಕುಟುಂಬದ ಸ್ವಾಧೀನದಲ್ಲಿದೆ. ನಾವು ಸ್ಥಳದಲ್ಲಿ ಇಲ್ಲದ ಸಮಯ ನೋಡಿ ಗ್ರಾಮ ಪಂಚಾಯಿತಿಯವರು ಕಾಫಿ, ಸಿಲ್ವರ್, ಅಡಿಕೆ ಹಾಗೂ ತೆಂಗಿನ ಮರಗಳನ್ನು ಏಕಾಏಕಿ ಕಡಿದು ಧ್ವಂಸಗೊಳಿಸಿದ್ದಾರೆ ಎಂದು ದೂರಿದ್ದಾರೆ. ಹದ್ದುಬಸ್ತು ಗುರುತಿಸಿಕೊಡಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದರೂ ವಿಳಂಬ ಮಾಡಲಾಯಿತು. ಅಂತಿಮವಾಗಿ ನ್ಯಾಯಾಲಯದ ಮೊರೆ ಹೋದಾಗ, ಸಕಲೇಶಪುರ ಸಿವಿಲ್ ನ್ಯಾಯಾಲಯವು ಜಮೀನಿನಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ತಡೆಯಾಜ್ಞೆ ನೀಡಿದೆ ಎಂದು ಹೇಳಿದ್ದಾರೆ. ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ನಮಗೆ ರಕ್ಷಣೆ ನೀಡಬೇಕು ಎಂದು ಬೆಂಗಳೂರು ನೆಲಮಂಗಲ ನಿವಾಸಿ ಪಾರ್ವತಮ್ಮ ಎಚ್. ಎಸ್. ಪರವಾಗಿ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ​ಸಕಲೇಶಪುರ

ತಾಲೂಕಿನ ಬೆಳಗೋಡು ಗ್ರಾಮದಲ್ಲಿ ದಶಕಗಳಿಂದ ಸ್ವಾಧೀನದಲ್ಲಿದೆ ಎನ್ನಲಾದ ಕಾಫಿ ತೋಟ ಹಾಗೂ ಗ್ರಾಮಠಾಣಾ ಜಾಗದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಸರ್ವೆ ನಡೆಸಲು ಮುಂದಾದ ಕಂದಾಯ ಇಲಾಖೆ ಅಧಿಕಾರಿಗಳನ್ನು ಸ್ಥಳೀಯರು ತಡೆದ ಹಿನ್ನೆಲೆಯಲ್ಲಿ ಸರ್ವೆ ಕಾರ್ಯ ಅರ್ಧಕ್ಕೆ ಮೊಟಕುಗೊಂಡಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ದೂರುದಾರ ಆರೋಪ

ಬೆಳಗೋಡು ಗ್ರಾಮದ ಸರ್ವೆ ನಂ. 238ರಲ್ಲಿ 3 ಗುಂಟೆ, ಸರ್ವೆ ನಂ. 239ರಲ್ಲಿ 1 ಎಕರೆ 1 ಗುಂಟೆ ಹಾಗೂ ಸರ್ವೆ ನಂ. 224ರಲ್ಲಿ 6 ಗುಂಟೆ ಕಾಫಿ ತೋಟದ ಜಮೀನು ನಮ್ಮ ಹೆಸರಿನಲ್ಲಿದ್ದು, ಕಳೆದ 70 ವರ್ಷಗಳಿಂದ ನಮ್ಮ ಕುಟುಂಬದ ಸ್ವಾಧೀನದಲ್ಲಿದೆ. ನಾವು ಸ್ಥಳದಲ್ಲಿ ಇಲ್ಲದ ಸಮಯ ನೋಡಿ ಗ್ರಾಮ ಪಂಚಾಯಿತಿಯವರು ಕಾಫಿ, ಸಿಲ್ವರ್, ಅಡಿಕೆ ಹಾಗೂ ತೆಂಗಿನ ಮರಗಳನ್ನು ಏಕಾಏಕಿ ಕಡಿದು ಧ್ವಂಸಗೊಳಿಸಿದ್ದಾರೆ ಎಂದು ದೂರಿದ್ದಾರೆ. ಹದ್ದುಬಸ್ತು ಗುರುತಿಸಿಕೊಡಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದರೂ ವಿಳಂಬ ಮಾಡಲಾಯಿತು. ಅಂತಿಮವಾಗಿ ನ್ಯಾಯಾಲಯದ ಮೊರೆ ಹೋದಾಗ, ಸಕಲೇಶಪುರ ಸಿವಿಲ್ ನ್ಯಾಯಾಲಯವು ಜಮೀನಿನಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ತಡೆಯಾಜ್ಞೆ ನೀಡಿದೆ ಎಂದು ಹೇಳಿದ್ದಾರೆ. ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ನಮಗೆ ರಕ್ಷಣೆ ನೀಡಬೇಕು ಎಂದು ಬೆಂಗಳೂರು ನೆಲಮಂಗಲ ನಿವಾಸಿ ಪಾರ್ವತಮ್ಮ ಎಚ್. ಎಸ್. ಪರವಾಗಿ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.

ಸ್ಥಳೀಯ ದಲಿತ ಮುಖಂಡರ ಆಕ್ಷೇಪ- ಅಧಿಕಾರಿಗಳು ವಾಪಸ್:

ದೂರುದಾರರ ಮನವಿ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಸರ್ವೆ ಇಲಾಖಾ ಅಧಿಕಾರಿಗಳು ಆಗಮಿಸಿದಾಗ ಸ್ಥಳೀಯ ದಲಿತ ಮುಖಂಡರು ಹಾಗೂ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಗ್ರಾಮಠಾಣಾ ಜಾಗವಾಗಿದ್ದು, ಈಗಾಗಲೇ ಇಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ಇದೇ ಜಾಗದಲ್ಲಿ ಡಾ. ಬಿ. ಆರ್‌. ಅಂಬೇಡ್ಕರ್‌ ಭವನ ನಿರ್ಮಾಣಕ್ಕಾಗಿ ಭೂಮಿ ಕಾಯ್ದಿರಿಸುವಂತೆ ನಾವು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಈ ಭೂಮಿ ಸಾರ್ವಜನಿಕ ಉದ್ದೇಶಕ್ಕೆ ಹಾಗೂ ಅಂಬೇಡ್ಕರ್‌ ಭವನಕ್ಕೆ ಅತ್ಯಗತ್ಯವಾಗಿದೆ. ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡದೆ, ದಾಖಲೆಗಳನ್ನು ಪರಿಶೀಲಿಸದೆ ಏಕಾಏಕಿ ಸರ್ವೆ ನಡೆಸುವುದು ಸರಿಯಲ್ಲ ಎಂದು ಪಟ್ಟುಹಿಡಿದರು. ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಸರ್ವೆ ಅಧಿಕಾರಿಗಳು ಅಳತೆ ಮಾಡದೆ ಸ್ಥಳದಿಂದ ವಾಪಸ್ ತೆರಳಿದರು.

ಉನ್ನತ ಅಧಿಕಾರಿಗಳ ಭೇಟಿಗೆ ಆಗ್ರಹ

ಒಂದು ಕಡೆ ದೂರುದಾರರು ಇದು ತಮ್ಮ ಹಕ್ಕಿನ ಪಟ್ಟಾ ಜಮೀನು ಎಂದು ದಾಖಲೆಗಳನ್ನು ಮುಂದಿಡುತ್ತಿದ್ದರೆ, ಮತ್ತೊಂದೆಡೆ ಇದು ಗ್ರಾಮಠಾಣಾ ಜಾಗ ಎಂದು ಸ್ಥಳೀಯರು ಪ್ರತಿಪಾದಿಸುತ್ತಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಉಭಯ ಬಣಗಳ ಸಮ್ಮುಖದಲ್ಲಿ ಮೂಲ ಕಾಗದಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರ ನಡುವೆ ಪರಸ್ಪರ ಜಗಳ-ಘರ್ಷಣೆಗಳು ಸಂಭವಿಸುವ ಸಾಧ್ಯತೆಯಿದ್ದು, ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶಿಸಿ ಶಾಂತಿ ಕಾಪಾಡಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷಯಮುಕ್ತ ಸಮಾಜಕ್ಕಾಗಿ ಆರಂಭಿಕ ಪತ್ತೆ, ಕಡ್ಡಾಯ ನೋಂದಣಿ ಅಗತ್ಯ: ಎಸಿ
ಬಡ ಮಕ್ಕಳ ಅಕ್ಷರದ ಕನಸಿಗೆ ಗಾರೆ ಗೋಪಾಲಣ್ಣನ ಆಸರೆ