ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ಕಳೆದ ೩ ದಶಕದಿಂದ ದತ್ತಾಂಶದ ನಿಖರತೆಯ ಗೊಂದಲದಿಂದಾಗಿ ನಿವೃತ್ತ ನ್ಯಾಯಾಮೂರ್ತಿ ನಾಗಮೋಹನದಾಸ್ ಏಕಪೀಠ ಸದಸ್ಯತ್ವದ ಆಯೋಗ ಸಮಿತಿ ರಚಿಸಿದ್ದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಲು ನಿಖರವಾದ ದತ್ತಾಂಶ ಪಡೆಯಲು ಸಮೀಕ್ಷೆಗಳಲ್ಲಿ ಸಮರ್ಪವಾದ ಮಾಹಿತಿ ನೋಂದಾಯಿಸಿದಾಗ ಮಾತ್ರ ನಿಖರವಾದ ಮೀಸಲಾತಿ ಪಡೆಯಲು ಸಾಧ್ಯ. ಜಾತಿ ಗಣತಿಯ ಸಮೀಕ್ಷೆಗೆ ಬಂದ ಸಂದರ್ಭದಲ್ಲಿ ಉಪಜಾತಿಯ ಜೊತೆಗೆ ಮೂಲಜಾತಿ ನೋಂದಾಯಿಸಕೊಳ್ಳಬೇಕೆಂಬ ಅರಿವು ಮೂಡಿಸಬೇಕಾಗಿದೆ ಎಂದು ಚಿತ್ರದುರ್ಗ ಭೋವಿ ಗುರು ಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ವಿಚಾರಗಳನ್ನು ಪರಿಪೂರ್ಣವಾಗಿ ಅರಿಯಲು ದತ್ತಾಂಶದ ಅಗತ್ಯವಿದೆ ಇದರಿಂದ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.ನ್ಯಾ.ನಾಗಮೋಹನ್ ದಾಸ್ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವಂತ ಕೈಪಿಡಿಗಳನ್ನು ಅಧ್ಯಯನ ಮಾಡುವಂತಾಗಬೇಕು, ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಬೇಕು, ನಮಗೆ ದೊರೆತಿರುವ ಮಾಹಿತಿ ಪ್ರಕಾರ ೨೦೨೫ರಲ್ಲಿ ಸುಮಾರು ೬.೮೦ ಕೋಟಿ ಜನಸಂಖ್ಯೆ ಹೊಂದಿದ್ದೇವೆ. ಇದನ್ನು ನಿಖರಪಡಿಸಿಕೊಳ್ಳಲು ಸರ್ಕಾರವು ಸೂಚಿಸಿರುವ ಸಮಿತಿಯ ವರದಿಯಲ್ಲಿ ಖಚಿತಪಡಿಸಿಕೊಳ್ಳಬೇಕು ಹಾಗಾಗಿ ಎಲ್ಲರೂ ಸಮೀಕ್ಷೆಗೆ ಒಳಪಟ್ಟು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಬೇಕು ಎಂದರು.ಸಮೀಕ್ಷೆ ಸಂದರ್ಭದಲ್ಲಿ ತಮ್ಮ ಚುನಾವಣಾ ಗುರುತಿನ ಚೀಟಿ/ ಆಧಾರ್ ಕಾರ್ಡನೊಂದಿಗೆ ತಮ್ಮ ಉಪಜಾತಿ ವಡ್ಡರ್ ಜೊತೆಗೆ ಭೋವಿ ಎಂದು ನೋಂದಾಯಿಸಿಕೊಳ್ಳಬೇಕು. ತಮ್ಮ ಮನೆಗಳ ಮೇಲೆ ಜಾತಿ, ಉಪಜಾತಿ ಸ್ಟೀಕರ್‌ನ್ನು ಅಳವಡಿಸಬೇಕು. ಇದರಿಂದ ಸಮೀಕ್ಷೆಗೆ ಬರುವವರು ತಮ್ಮ ಮನೆಗಳನ್ನು ಗುರುತಿಸಲು ಸುಲಭವಾಗಲಿದೆ. ಬಹುತೇಕ ಮಂದಿ ಊರಿಂದ ಊರಿಗೆ ಅಲೆಮಾರಿಗಳ ಬದುಕು ಹೊಂದಿರುವವರಿಂದಾಗಿ ಸಮೀಕ್ಷೆಯಲ್ಲಿ ಕೈತಪ್ಪಿ ಹೋದಲ್ಲಿ ಮುಂದಿನ ಭವಿಷ್ಯದ ಪೀಳಿಗೆಗಳಿಗೆ ಅನ್ಯಾಯವಾಗಲಿದೆ. ವಂಚನೆಯಾಗಲಿದೆ ಅದಕ್ಕೆ ಅವಕಾಶ ಮಾಡಿಕೊಡದೆ ಮೇ.೫ರಿಂದ ೧೭ರವರೆಗೆ ಮಾಡಲಿರುವ ಸಮೀಕ್ಷೆಗೆ ಮಾಹಿತಿ ನೀಡುವುದು ಕಡ್ಡಾಯವಾಗಿ ಪಾಲಿಸಬೇಕೆಂದು ಕರೆ ನೀಡಿದರು.
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲಿನ ದಾಳಿ ಖಂಡನೀಯಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪದಕರು ಅಮಾಯಕರ ಮೇಲೆ ಮಾಡಿದ ಮರಣ ಹೋಮ ನಾವು ತೀವ್ರವಾಗಿ ಖಂಡಿಸುತ್ತೇವೆ, ಧರ್ಮದ ರಕ್ಷಣೆಗೆ ಕ್ರಾಂತಿ ಅನಿವಾರ್ಯವಾಗಿದೆ, ನಾವುಗಳು ಶಾಂತಿಗೂ ಬದ್ದರಾಗಿರೋಣಾ, ಕ್ರಾಂತಿಗೂ ಸಿದ್ದವಾಗಿರೋಣಾ, ನಮ್ಮ ಮುಂದಿನ ಭವಿಷ್ಯದ ಸುಂದರ ಬದುಕಿಗಾಗಿ ಮುಂದಿನ ಪೀಳಿಗೆಗಳಿಗೆ ಅವುಗಳು ಸಿಗಬೇಕು ಅಂದರೆ ಛಡಿ ಏಟು ಬೀಸುವ ಮೂಲಕ ಪಾಠ ಕಲಿಸಬೇಕಾಗಿದೆ. ನಮ್ಮ ಮನೆಗೆ ಶಸ್ತ್ರಗಳೊಂದಿಗೆ ನುಗ್ಗಿದಾಗ ನಾವುಗಳು ಶಾಂತಿಯ ಪಾಠ ಕಲಿಸಲು ಆಗುವುದಿಲ್ಲ ಹಾಗಾಗಿ ನಾವುಗಳು ಶಸ್ತ್ರಾಸ್ತಗಳೊಂದಿಗೆಯೇ ಉತ್ತರಿಸಬೇಕೆಂದು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.