ಮೆಂದಾರೆ ಗ್ರಾಮದಲ್ಲಿ ಮುಂದುವರೆದ ಸರ್ವೆ ಕಾರ್ಯ

KannadaprabhaNewsNetwork | Published : May 29, 2024 12:45 AM

ಸಾರಾಂಶ

ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಮೆಂದಾರೆ ಗ್ರಾಮದ ಪುನರ್ವಸತಿ ಕಲ್ಪಿಸಲು ದಾಖಲೆಗಳ ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಿ ಕಾರ್ಯ ಮುಂದುವರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಮೆಂದಾರೆ ಗ್ರಾಮದ ಪುನರ್ವಸತಿ ಕಲ್ಪಿಸಲು ದಾಖಲೆಗಳ ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಿ ಕಾರ್ಯ ಮುಂದುವರಿಸಿದ್ದಾರೆ.

ಅಧಿಕಾರಿಗಳ ತಂಡ ಪ್ರತಿ ಮನೆ ಮನೆಗೆ ಭೇಟಿ ನೀಡಿ ಮನೆಯ ಯಜಮಾನ ಸೇರಿದಂತೆ ಅಲ್ಲಿನ ಅವರ ಆಸ್ತಿ ಮರು ಮೌಲ್ಯಮಾಪನ ಮಾಡುವುದರ ಜೊತೆಗೆ ಸ್ಥಿತಿಗತಿಯ ಬಗ್ಗೆ ಸಹ ಅಧಿಕಾರಿಗಳು ಸಂಪೂರ್ಣ ಮಾಹಿತಿ ಕಲೆಯಾಕುವುದರ ಜೊತೆಗೆ ಸರ್ಕಾರಕ್ಕೆ ವರದಿ ನೀಡಲು ಪೂರಕವಾದ ದಾಖಲೆಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳ ತಂಡ ಕಳೆದ 2 ದಿನಗಳಿಂದ ಮೆಂದಾರೆ ಗ್ರಾಮದ ಆದಿವಾಸಿ ಬುಡಕಟ್ಟು ಸೋಲಿಗ ಸಮುದಾಯದವರು ವಾಸಿಸುತ್ತಿರುವ ಹಾಡಿಯ ಚಿತ್ರಣದ ಸಂಪೂರ್ಣ ವರದಿ ಪಡೆಯಲು ಮುಂದಾಗಿದ್ದಾರೆ.ಜನರಿಗೆ ಸಿಗುವುದೇ ಮತ್ತೊಂದೆಡೆ ಸೂರು:

ಇಂಡಿಗನತ್ತ ಗ್ರಾಮದಲ್ಲಿ ಏ. 26ರಂದು ನಡೆದ ಗಲಭೆ ಘಟನೆಯಿಂದ ನೊಂದ ಆದಿವಾಸಿ ಸೋಲಿಗ ಬುಡಕಟ್ಟು ಸಮುದಾಯದವರೇ ವಾಸಿಸುತ್ತಿರುವ 63 ಕುಟುಂಬಗಳ ಮನೆಗಳಿರುವ 230 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದ ಜನತೆಗೆ ಗ್ರಾಮ ತೊರೆಯಲು ಮುಂದಾಗಿದ್ದು, ಜಿಲ್ಲಾಡಳಿತ ಜನತೆಗೆ ಸಕಲ ರೀತಿಯಲ್ಲೂ ಸೌಕರ್ಯದ ಜೊತೆಗೆ ಗ್ರಾಮವನ್ನು ಬೇರೆ ಸ್ಥಳಾಂತರ ಮಾಡಲು ನಡೆಯುತ್ತಿರುವ ಪುನರ್ವಸತಿ ಸರ್ವೆಕಾರ್ಯ ಮುಗಿದ ನಂತರ ಪ್ರಥಮ ಆರ್ಥಿಕ ಪರಿಸ್ಥಿತಿ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ವರದಿ ಸಲ್ಲಿಸಲ್ಲಿದ್ದಾರೆ. ಹೀಗಾಗಿ ನೊಂದ ಜೀವಗಳಿಗೆ ತ್ತಕ್ಷಣ ಸೂರು ಕಲ್ಪಿಸಿ ಮೂಲ ಸೌಲಭ್ಯ ಕಲ್ಪಿಸುವ ವ್ಯವಸ್ಥೆಗೆ ಮುಂದಾಗುವರೆ ಕಾದು ನೋಡಬೇಕಾಗಿದೆ.ಸಮೀಕ್ಷೆಗೆ ಪೂರಕ ಸ್ಪಂದನೆ ದೊರೆತಿದೆ:

ಮೆಂದಾರೆ ಗ್ರಾಮದಲ್ಲಿ ನಡೆಯುತ್ತಿರುವ ಸಮೀಕ್ಷೆ ಮನೆಗಳು ಹಾಗೂ ಅಲ್ಲಿನ ನಿವಾಸಿಗಳ ಜಮೀನು ಜನಸಂಖ್ಯೆ, ಕುಟುಂಬಗಳ ಸಮೀಕ್ಷೆಗೆ ಅಧಿಕಾರಿಗಳಿಗೆ ಪೂರಕವಾಗಿ ಅಲ್ಲಿನ ಬುಡಕಟ್ಟು ಸಮುದಾಯದ ನಿವಾಸಿಗಳು ಸ್ಪಂದಿಸುವ ಮೂಲಕ ತಮ್ಮಲ್ಲಿರುವ ದಾಖಲಾತಿಗಳನ್ನು ಸಹ ಅಧಿಕಾರಿಗಳಿಗೆ ಮೌಲ್ಯಮಾಪನಕ್ಕೆ ನೀಡುವುದರ ಮೂಲಕ ಸ್ಪಂದಿಸುತ್ತಿದ್ದಾರೆ.

ಮೆಂದಾರೆ ಗ್ರಾಮದ ಸ್ಥಿತಿಗತಿಯ ಬಗ್ಗೆ ಜಿಲ್ಲಾಡಳಿತಕ್ಕೆ ಸರ್ಕಾರಕ್ಕೆ ತಿಳಿದ ವಿಚಾರವಾಗಿದ್ದು, ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ವಾಸ್ತವ್ಯ ವಿಸೃತ ವರದಿ ನೀಡುವ ಮೂಲಕ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಜನರ ಸ್ಥಿತಿಗತಿ ಪರಿಶೀಲಿಸಬೇಕು. ಆದಿವಾಸಿ ಬುಡಕಟ್ಟು ಸೋಲಿಗ ಜನಾಂಗವೇ ವಾಸಿಸುತ್ತಿರುವ ಗ್ರಾಮ ಸ್ಥಳಕ್ಕೆ ಪೂರಕವಾದ ಸ್ಥಳ ಪರಿಶೀಲನೆ ನಡೆಸಿ ಇಂಡಿಗನತ್ತ ಗ್ರಾಮದಲ್ಲಿ ನಡೆದ ಘಟನೆ ತೀವ್ರತೆಯನ್ನು ಅಲ್ಲಿನ ಜನರ ಸ್ಥಿತಿಯನ್ನು ಅರಿತು ಕೂಡಲೇ ಸರ್ಕಾರ ನೆರವಿಗೆ ಧಾವಿಸಬೇಕು.

ಮುತ್ತಯ್ಯ, ರಾಜ್ಯ ಕಾರ್ಯದರ್ಶಿ ಬುಡಕಟ್ಟು ಸೋಲಿಗ ಸಮುದಾಯ

Share this article