ಸುರ್ಯ ದೇವಸ್ಥಾನ: ಏಪ್ರಿಲ್ 6ರಂದು ಪ್ರತಿಷ್ಠಾ ವಾರ್ಷಿಕೋತ್ಸವ,ಲ್‌ ಏಪ್ರಿಲ್ 7ರಿಂದ ಜಾತ್ರೆ

KannadaprabhaNewsNetwork | Published : Apr 4, 2025 12:48 AM

ಸಾರಾಂಶ

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ 6ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ 7 ರಿಂದ 11ರವರೆಗೆ ವರ್ಷಾವಧಿ ಜಾತ್ರೆ ನೆರವೇರಲಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ 6ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ 7 ರಿಂದ 11ರವರೆಗೆ ವರ್ಷಾವಧಿ ಜಾತ್ರೆ ನೆರವೇರಲಿದೆ. 6ರಂದು ಬೆಳಗ್ಗೆ 7.30ರಿಂದ ಪುಣ್ಯಾಹ, ಗಣಪತಿ ಹೋಮ, ಕಲಶ ಪೂಜೆ ಕಲಶಾಭಿಷೇಕ ಮಧ್ಯಾಹ್ನ 12.30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ರಾತ್ರಿ 8 ರಿಂದ ರಂಗಪೂಜೆ, ಉತ್ಸವ ನಡೆಯಲಿದೆ.

7ರಂದು ಬೆಳಗ್ಗೆ 7.15 ರಿಂದ ಗಣಪತಿ ಹೋಮ, ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ, ನಿತ್ಯಬಲಿ, ಅನ್ನ ಸಂತರ್ಪಣೆ, 8 ರಂದು ಮಧ್ಯಾಹ್ನ 12.30 ರಿಂದ ಮಹಾಪೂಜೆ, ನಿತ್ಯಬಲಿ, ಅನ್ನ ಸಂತರ್ಪಣೆ, ಸಂಜೆ 6 ಗಂಟೆಗೆ ಸುರ್ಯಗುತ್ತು ಮನೆಯಿಂದ ದೈವಗಳ ಭಂಡಾರ ಹೊರಡುವುದು, ರಾತ್ರಿ 8 ಗಂಟೆಯಿಂದ ಉತ್ಸವ ಹೊರಟು ವಸಂತ ಕಟ್ಟೆ ಪೂಜೆ, ಮಹಾ ಪೂಜೆ ನಡೆಯಲಿದೆ.

9ರಂದು ಬೆಳಗ್ಗೆ 7 ಗಂಟೆಯಿಂದ ಸೊಡರ ಬಲಿ ಉತ್ಸವ, ಮಧ್ಯಾಹ್ನ ಸಂತರ್ಪಣೆ, ರಾತ್ರಿ 8 ಗಂಟೆಯಿಂದ ಉತ್ಸವ ಹೊರಟು ಕೆರೆಕಟ್ಟೆ ಪೂಜೆ, ಮಹಾಪೂಜೆ ನಡೆಯಲಿದೆ. 10 ರಂದು ಬೆಳಗ್ಗೆ 8.45 ರಿಂದ ದರ್ಶನಬಲಿ, ಉತ್ಸವ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ 8 ರಿಂದ ಉತ್ಸವ, ಪುಷ್ಪರಥೋತ್ಸವ, ನೃತ್ಯ ಬಲಿ ಉತ್ಸವ, ರಥಕಟ್ಟೆ ಪೂಜೆ, ಮಹಾಪೂಜೆ, ಭೂತ ಬಲಿ ಶಯನೋತ್ಸವ ನಡೆಯುವುದು.

11ರಂದು ಬೆಳಗ್ಗೆ 9ರಿಂದ ಕವಾಟೋದ್ಘಾಟನೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ, ಸಂಜೆ 6ರಿಂದ ಯಾತ್ರಾ ಹೋಮ, ಅವಭೃತ ಸ್ನಾನಕ್ಕೆ ಹೊರಡುವುದು, ಧ್ವಜಾವರೋಹಣ, ರಾತ್ರಿ 11 ಗಂಟೆಯಿಂದ ದೈವಗಳ ನೇಮ ಜರಗಲಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ| ಸತೀಶ್ಚಂದ್ರ ಸುರ್ಯಗುತ್ತು ತಿಳಿಸಿದ್ದಾರೆ.

...................

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ 8ರಂದು ದೇವದಾಸ್ ಕಾಪಿಕಾಡ್ ಮತ್ತು ತಂಡದವರಿಂದ ಹಾಸ್ಯಮಯ ತುಳು ನಾಟಕ ‘ಏರ್ಲಾ ಗ್ಯಾರಂಟಿ ಅತ್ತ್’ ನಾಟಕ, 9 ರಂದು ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ, 10 ರಂದು ರಾತ್ರಿ 9.30 ರಿಂದ ಅಂಗನವಾಡಿ ಕೇಂದ್ರದ ಹಾಗೂ ಸ.ಹಿ.ಪ್ರಾ. ಶಾಲೆ ಸುರ್ಯ ಇಲ್ಲಿಯ ಮಕ್ಕಳಿಂದ ವಿವಿಧ ಕಲಾ ಪ್ರದರ್ಶನ, ಬಳಿಕ ಸಂಗಮ ಕಲಾವಿದರು ಇವರಿಂದ ‘ಕಾಸ್ದ ಕಸರತ್’ ತುಳು ಹಾಸ್ಯ ನಾಟಕ ಜರಗಲಿದೆ.

Share this article