- ಬಂಧಿತನ ವೈದ್ಯಕೀಯ ತಪಾಸಣೆ ನಂತರ ವಶಕ್ಕೆ ಪಡೆದ ಪೊಲೀಸರು ।
- - -
ಕನ್ನಡಪ್ರಭ ವಾರ್ತೆ ದಾವಣಗೆರೆಅಯೋಧ್ಯೆಯ ಶ್ರೀ ರಾಮ ಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸುವ ಬಯಕೆ ಹೊಂದಿರುವುದಾಗಿ ಪಾಕಿಸ್ತಾನದ ರಾಣಾ ಎಂಬಾತನಿಗೆ ಆಡಿಯೋ ಹಾಗೂ ವಾಟ್ಸಾಪ್ ಮೆಸೇಜ್ ಮಾಡಿದ್ದ ಬಂಧಿತ ಶಂಕಿತ ಉಗ್ರನನ್ನು 10 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯವು ಹರಿಹರ ಗ್ರಾಮಾಂತರ ಪೊಲೀಸರ ಒಪ್ಪಿಸಿದೆ.
ಬಂಧಿತ ಶಂಕಿತ ಉಗ್ರನನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಬುಧವಾರ ರಾತ್ರಿ ದಾವಣಗೆರೆ ಜಿಲ್ಲಾ ಕಾರಾಗೃಹಕ್ಕೆ ಕರೆ ತರಲಾಗಿತ್ತು. ಗುರುವಾರ ಬೆಳಗ್ಗೆ ಶಂಕಿತ ಉಗ್ರ ಸೊಹೇಲ್‌ನನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ, ಮುಖಕ್ಕೆ ಮುಸುಕು ಹಾಕಿಸಿಕೊಂಡು ಹರಿಹರ ತಾಲೂಕು ನ್ಯಾಯಾಲಯಕ್ಕೆ ಕರೆದೊಯ್ದು, ನ್ಯಾಯಾಧೀಶರ ಸಮಕ್ಷಮದಲ್ಲಿ ಹಾಜರುಪಡಿಸಲಾಯಿತು. ಬುಧವಾರ ಒಂದು ದಿನಕ್ಕೆ ನ್ಯಾಯಾಂಗ ಬಂಧನಕ್ಕೆ ಅನುಮತಿ ನೀಡಿದ್ದ ನ್ಯಾಯಾಲಯಕ್ಕೆ ಶಂಕಿತ ಉಗ್ರನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲು ಇನ್ನೂ 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿತು.
ಶಂಕಿತ ಉಗ್ರನ ಮೊಬೈಲ್ ಫೋನ್, ಸಂಪರ್ಕ ಜಾಲ, ಆರ್ಥಿಕ ವ್ಯವಹಾರಗಳು ಹಾಗೂ ಇತರೆ ಚಟುವಟಿಕೆ ಬಗ್ಗೆ ಪೊಲೀಸರು ಸವಿವರ ಪರಿಶೀಲನೆ ಶುರು ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಭದ್ರತಾ ಸಂಸ್ಥೆಗಳ ನಡುವೆ ಮಾಹಿತಿ ವಿನಿಮಯ ನಡೆಯುತ್ತಿದ್ದು, ಕೇಂದ್ರ ತನಿಖಾ ಸಂಸ್ಥೆಗಳ ಅಧಿಕಾರಿಗಳು ವಿಚಾರಣೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಇದೇ ವೇಳೆ, ಬನ್ನಿಕೋಡು ಗ್ರಾಮದಲ್ಲಿ ಶಂಕಿತನ ವಾಸ್ತವ್ಯದ ಹಿನ್ನೆಲೆ, ಆತನ ಸಂಪರ್ಕ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಯಾವುದೇ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾನೆಯೇ ಎಂಬ ದೃಷ್ಟಿಯಿಂದಲೂ ತನಿಖೆ ಮುಂದುವರಿದಿದೆ.
- - -
* ಬನ್ನಿಕೋಡು ಇಬ್ಬರು ಬ್ರದರ್ಸ್‌ಗಳೇ ನಾಪತ್ತೆ! ಉತ್ತರ ಪ್ರದೇಶದ ಮೂಲದ ಪೇಂಟಿಂಗ್ ಕೆಲಸಗಾರರು ತಮ್ಮೊಂದಿಗೆ ಹರಿಹರ ತಾ. ಬನ್ನಕೋಡು ಗ್ರಾಮದಲ್ಲಿ 15-20 ದಿನಗಳಿಂದ ಇದ್ದಂತಹ ತಮ್ಮದೇ ರಾಜ್ಯದ ಶಂಕಿತ ಉಗ್ರ ಸೊಹೇಲ್ (20) ಬಂಧನ ಆಗಿರುವುದಕ್ಕೆ ಶಾಕ್ ಆಗಿದ್ದರೂ, ಎಂದಿನಂತೆ ಸಮೀಪದ ಕಾರ್ಖಾನೆಯಲ್ಲಿ ಪೇಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದಾರೆ.
ಸೊಹೇಲ್ ಬಂಧನದ ನಂತರ ಬನ್ನಿಕೋಡು ಗ್ರಾಮದಲ್ಲೇ ಇದ್ದಂತಹ ಇಬ್ಬರು ಸಹೋದರರು ಅಲ್ಲಿಂದ ಹೋಗಿದ್ದಾರೆ. ಬನ್ನಿಕೋಡು ಮನೆ ಖಾಲಿ ಮಾಡಿ ಹೋದ ಆ ಇಬ್ಬರು ಯಾರೆಂಬ ಬಗ್ಗೆ ಈಗ ಸಾಕಷ್ಟು ಅನುಮಾನಗಳು ಕಾಡುತ್ತಿವೆ. ಹೀಗೆ ಹೋದ ಸಹೋದರರು ಸಹ ಸೊಹೇಲ್‌ನ ರೀತಿಯ ಮನಸ್ಥಿತಿಯವರಾ ಅಥವಾ ಮುಗ್ಧರಾ ಎಂಬ ಪ್ರಶ್ನೆ ಪೊಲೀಸ್ ಇಲಾಖೆಯನ್ನು ಚಿಂತೆಗೀಡು ಮಾಡಿದೆ ಎನ್ನಲಾಗಿದೆ.
(ಬಾಕ್ಸ್-2) * 2 ತಿಂಗಳ ಹಿಂದೆ ಸೊಹೇಲ್‌ಗೆ ಮೊಬೈಲ್ ಕೊಡಿಸಿದ್ದೆ: ಶೋಯೆಬ್
- ಇಂದು ಅಥವಾ ನಾಳೆ ಹರಿಹರಕ್ಕೆ ಬಂಧಿತ ಶಂಕಿತ ಉಗ್ರನ ಹೆತ್ತವರ ಆಗಮನ? ದಾವಣಗೆರೆ: ಎರಡು ತಿಂಗಳ ಹಿಂದಷ್ಟೇ ಸೊಹೇಲ್‌ಗೆ ಮೊಬೈಲ್ ಕೊಡಿಸಿದ್ದೆ. ಆದರೆ, ಪಾಕಿಸ್ತಾನ ಮೂಲದ ಗ್ರೂಪ್‌ಗಳಿಗೆ ಈತನ ನಂಬರ್ ಹೇಗೆ ಸೇರಿಕೊಂಡಿದೆಯೋ ಗೊತ್ತಿಲ್ಲ ಎಂದು ಹರಿಹರ ತಾ. ಬನ್ನಿಕೋಡು ಗ್ರಾಮದಲ್ಲಿ ಪೊಲೀಸರು ಬಂಧಿಸಿದ ಉತ್ತರ ಪ್ರದೇಶ ಮೂಲಕ ಶಂಕಿತ ಉಗ್ರ ಸೊಹೇಲ್‌ನ ಸಹೋದರ ಶೋಯೆಬ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.ತಾವು ಉತ್ತರ ಪ್ರದೇಶದ ಸಹರಾನಪುರ ಜಿಲ್ಲೆಯವರು. ತನ್ನ ತಂದೆ, ತಾಯಿಗೆ ಒಟ್ಟು 10 ಜನ ಮಕ್ಕಳು. ಅದರಲ್ಲಿ 6 ಜನ ಸಹೋದರಿಯರು, ನಾಲ್ವರು ಸಹೋದರರಿದ್ದೇವೆ. ಸೊಹೇಲ್ ನಮ್ಮೆಲ್ಲರಿಗಿಂತ ಕಿರಿಯನಾಗಿದ್ದಾನೆ. ಆತನ ವಯಸ್ಸೂ ಕಡಿಮೆ ಇದೆ. ಆಧಾರ್ ಕಾರ್ಡ್ ಸಹ ಅಪ್‌ಡೇಟ್ ಮಾಡಿಸಿದ್ದೆವು. 2 ತಿಂಗಳ ಹಿಂದಷ್ಟೇ ಸೊಹೇಲ್‌ಗೆ ಮೊಬೈಲ್ ಕೊಡಿಸಿದ್ದೆ ಎಂದು ಆತನ ಸಹೋದರ ತಿಳಿಸಿದ್ದಾನೆ.
ನನ್ನದೇ ಗುರುತಿನ ಪತ್ರ ನೀಡಿ, ಆತನಿಗೆ ಸಿಮ್ ಸಹ ಕೊಡಿಸಿದ್ದೆ. ಈ ಹಿಂದೆ ದೆಹಲಿಯ ನೊಯ್ಡಾ ಸೇರಿದಂತೆ ಹಲವಾರು ಕಡೆ ಕೆಲಸ ಮಾಡಿದ್ದೆವು. ಪಾಕಿಸ್ತಾನ ಮೂಲಕ ಗ್ರೂಪ್‌ಗಳಲ್ಲಿ ಯಾರು ಸೊಹೇಲ್‌ನನ್ನು ಸೇರಿಸಿದ್ದಾರೋ ಗೊತ್ತಿಲ್ಲ. ಆ ಗ್ರೂಪ್‌ಗಳಲ್ಲಿ ಏನು ಮಾತುಕತೆ ಆಗಿದೆಯೋ ತಮಗೆ ಮಾಹಿತಿ ಇಲ್ಲ. ಮಂಗಳವಾರ ನಸುಕಿನ ವೇಳೆ ಪೊಲೀಸರು ಬಂದು, ನಮ್ಮ 8 ಜನರನ್ನು ಕರೆದೊಯ್ದಿದ್ದರು ಎಂದು ಆತ ಹೇಳಿದ್ದಾನೆ.ಅನಂತರ ಸೊಹೇಲ್ ಮೊಬೈಲ್‌ನಲ್ಲಿ ಏನು ಪತ್ತೆಯಾಗಿದೆಯೋ ನನಗೆ ಮಾಹಿತಿ ಇಲ್ಲ. ತನ್ನ ಸಹೋದರ ಸೊಹೇಲ್‌ನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ, ಜೈಲಿಗೆ ಕಳಿಸಿದ ಎಲ್ಲ ವಿಚಾರವನ್ನು ತಮ್ಮ ತಂದೆ, ತಾಯಿಗೆ ತಿಳಿಸಿದ್ದೇನೆ. ಶುಕ್ರವಾರ ಅಥವಾ ಶನಿವಾರ ತನ್ನ ತಂದೆ, ತಾಯಿಗಳು ಸಹ ಇಲ್ಲಿಗೆ ಬರಬಹುದು ಎಂದು ಬಂಧಿತ ಶಂಕಿತ ಉಗ್ರನ ಸಹೋದರ ಶೋಯೆಬ್ ಮಾಹಿತಿ ನೀಡಿದ್ದಾನೆ.
- - --(ಫೋಟೋಗಳಿವೆ)