ಬಿಡದಿ ಪುರಸಭೆ ಕಚೇರಿಯಲ್ಲಿ ಕಡತಗಳ ಕಳವು ಅನುಮಾನ

KannadaprabhaNewsNetwork | Published : Dec 18, 2024 12:45 AM

ಸಾರಾಂಶ

ರಾಮನಗರ: ಬಿಡದಿ ಪುರಸಭಾ ಕಚೇರಿಯ ಬೀಗ ಮುರಿದು ಬಿರುವಿನಲ್ಲಿದ್ದ ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ಕಳ್ಳನೊಬ್ಬ ಕಡತಗಳನ್ನು ಕಳವು ಮಾಡಿರುವ ಅನುಮಾನ ವ್ಯಕ್ತವಾಗಿದೆ.

ರಾಮನಗರ: ಬಿಡದಿ ಪುರಸಭಾ ಕಚೇರಿಯ ಬೀಗ ಮುರಿದು ಬಿರುವಿನಲ್ಲಿದ್ದ ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ಕಳ್ಳನೊಬ್ಬ ಕಡತಗಳನ್ನು ಕಳವು ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಕಳೆದ ಭಾನುವಾರ ತಡರಾತ್ರಿ 1.30ರಲ್ಲಿ ಮುಖಕ್ಕೆ ಬಟ್ಟೆ ಸುತ್ತಿಕೊಂಡ ಓರ್ವ ವ್ಯಕ್ತಿ ಪುರಸಭಾ ಕಚೇರಿಯ ಮುಖ್ಯ ದ್ವಾರದ ಬಾಗಿಲು ಮುರಿದು ಒಳ ಪ್ರವೇಶ ಮಾಡಿ ಒಳಗಿದ್ದ ಕಡತಗಳನ್ನ ತುಂಬಿದ್ದ ಬೀರುಗಳ ಬಾಗಿಲು ಒಡೆದು ಅಲ್ಲಿನ ಕಡತಗಳನ್ನ ಹುಡುಕುವ ಭರಾಟೆಯಲ್ಲಿ ಚೆಲ್ಲಾಪಿಲ್ಲಿ ಮಾಡಿದ್ದಾನೆ.

ಇದಲ್ಲದೆ ಕಬ್ಬಿಣದ ಡ್ರಾಯಾರ್ ಗಳನ್ನು ಸಹ ಹೊಡೆದು ಅಲ್ಲು ಹುಡುಕಾಟ ಮಾಡಿದ್ದಾನೆ. ಪುರಸಭಾ ಕಚೇರಿಗೆ ಕಳ್ಳ ಬರುವ ದೃಶ್ಯ ಹೊರಗಿನ ಲ್ಯಾಬ್ ಗ ಅಳವಡಿಕೆ ಮಾಡಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮರು ದಿನ ಬೆಳಗ್ಗೆ ಪುರಸಭೆಯ ಪ್ರಭಾರ ಮೇಲ್ವಿಚಾರಕ ಛಲಪತಿ ಬಂದು ನೋಡಲಾಗಿ ಕಚೇರಿಯ ಮುಖ್ಯ ದ್ವಾರದ ಬೀಗ ಹೊಡೆದಿರುವುದು ಕಂಡು ಬಂದಿದೆ. ತಕ್ಷಣ ಪುರಸಭಾ ಮುಖ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಪುರಸಭಾ ಮುಖ್ಯಾಧಿಕಾರಿಗಳಾದ ಕೆ.ಜಿ‌.ರಮೇಶ್ ಹಾಗೂ ಸಿಬ್ಬಂದಿಗಳು ಬಂದು ನೋಡಿದಾಗ ಕಳ್ಳತನ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಆನಂತರ ಕಳ್ಳತನ ನಡೆದಿರುವ ಮಾಹಿತಿಯನ್ನ ಪೊಲೀಸರಿಗೆ ತಿಳಿಸಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಕಚೇರಿಗೆ ಬಂದು ಪರಿಶೀಲನೆ ಮಾಡಿ ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಯಿಸಿ ತಪಾಸಣೆ ನಡೆಸಿದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಕೆ.ಜಿ.ರಮೇಶ್ ದೂರು ದಾಖಲಿಸಿದ್ದಾರೆ.

ಕಳ್ಳಿನಿಂದ ಕಡತಗಳಿಗಾಗಿ ಕಳ್ಳತನ:

ಪುರಸಭಾ ಕಚೇರಿಯಲ್ಲಿ ನಡೆದಿರುವ ಕಳವು ಪ್ರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಕಚೇರಿಯಲ್ಲಿ ಯಾವುದೇ ಹಣವನ್ನು ಇಡುವುದಿಲ್ಲ ಕೇವಲ ಸರ್ಕಾರಿ ದಾಖಲೆಗಳು ಮಾತ್ರ ಇರುತ್ತವೆ. ಇಂತಹ ಕಚೇರಿಯಲ್ಲಿ ಕಳ್ಳತನ ಮಾಡಿರುವುದನ್ನು ನೋಡಿದರೆ ಮೇಲ್ನೋಟಕ್ಕೆ ಯಾವುದೋ ಕಡತಗಳಿಗಾಗೆ ಕಳ್ಳತನ ನಡೆದಿರುವ ಅನುಮಾನ ಮೂಡಿದೆ. ಅಲ್ಲದೆ ಬೀರುಗಳು ಹಾಗೂ ಡೇಬಲ್ ಡ್ರಾಯರ್ ಗಳನ್ನು ಹೊಡೆದು ಕಡತಗಳನ್ನಷ್ಟೆ ಹುಡುಕಾಟ ಮಾಡಿರುವುದನ್ನ ಗಮನಿಸಿದರೆ ಇದೊಂದು ಯಾವುದೋ ಪ್ರಮುಖ ಕಡತಕ್ಕಾಗಿಯೆ ಕಳ್ಳತನ ನಡೆದಿರುವುದು ಗೊತ್ತಾಗುತ್ತಿದೆ.

ಬಾಕ್ಸ್ ...........

ಸಿಸಿಟಿವಿ ವೈರ್‌ಗಳ ಕಟ್‌

ಬಿಡದಿ ಪುರಸಭಾ ಕಚೇರಿಯಲ್ಲಿ ಕಳ್ಳತನಕ್ಕೆ ಮುಂದಾಗಿದ್ದ ವ್ಯಕ್ತಿ ಮೊದಲು ಕಚೇರಿ ಬಳಿಗೆ ಬಂದು ಕಚೇರಿ ಬಾಗಿಲ ಬಳಿ ಅಳವಡಿಸಿರುವ ಸಿಸಿಟಿವಿ ಪಕ್ಕಕ್ಕೆ ತಿರುಗಿಸಿದ್ದಾನೆ. ನಂತರ ಬಾಗಿಲು ಒಡೆದು ಒಳ‌ ಪ್ರವೇಶ ಮಾಡಿ, ಅಲ್ಲಿಯೂ ಸಿಸಿಟಿವಿಗಳನ್ನು ತಿರುಗಿಸಿ ಸಿಸಿಟಿವಿ ವೀಕ್ಷಣೆಗೆ ಅಳವಡಿಕೆ ಮಾಡಿದ್ದ ವೈರ್‌ಗಳನ್ನು ಸಹ ಕಟ್ ಮಾಡಿದ್ದಾನೆ.

ಕೋಟ್ ................

ಪುರಸಭೆ ಕಚೇರಿಯಲ್ಲಿ ಭಾನುವಾರ ರಾತ್ರಿ ಕಳ್ಳ ಕಚೇರಿಯ ಬಾಗಿಲು ಒಡೆದು ಒಳ ಬಂದು ಬೀರು, ಡ್ರಾಯರ್ ಗಳ ಒಳಗಿದ್ದ ಕಡತಗಳನ್ನ ಚೆಲ್ಲಾಪಿಲ್ಲಿ ಮಾಡಿದ್ದಾನೆ. ಅಲ್ಲದೇ ಇಂಟರ್ ನೆಟ್, ಸಿಸಿಟಿವಿಗೆ ಅಳವಡಿಸಿದ್ದ ವೈರ್ ಗಳನ್ನು ಸಹ ಕಟ್ ಮಾಡಿದ್ದಾರೆ. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯ ನಿರ್ವಹಿಸಲು ಸಮಸ್ಯೆಯಾಗಿದೆ. ಕಡತಗಳು ಕಳವಾಗಿರುವ ಬಗ್ಗೆ ಪರಿಶೀಲಿಸಲಾಗುವುದು.

-ರಮೇಶ್, ಮುಖ್ಯಾಧಿಕಾರಿ, ಬಿಡದಿ ಪುರಸಭೆ

17ಕೆಆರ್ ಎಂಎನ್ 5.ಜೆಪಿಜಿ

ಬಿಡದಿ ಪುರಸಭೆ ಕಚೇರಿ ಬಾಗಿಲ ಬೀಗ ಒಡೆದಿರುವುದು.

Share this article