ಎಚ್.ಡಿ, ರಂಗಸ್ವಾಮಿ
ದೇಶ ಸ್ವಾತಂತ್ರ್ಯ ನಂತರ ಆಹಾರೋತ್ಪಾದನೆಯಲ್ಲಿ ಸ್ವಾವಲಂಭನೆ ಸಾಧಿಸಿದ್ದರೂ ಬದಲಾದ ಸನ್ನಿವೇಶದಲ್ಲಿ ಆಹಾರೋತ್ಪಾದನೆಯಲ್ಲಿ ಹೊಸ ಸವಾಲುಗಳು ಎದುರಾಗುತ್ತಿದ್ದು, ಅವುಗಳನ್ನು ಸರ್ಮಥವಾಗಿ ಎದುರಿಸಲು ಕೃಷಿ ಕ್ಷೇತ್ರವನ್ನು ಬಲಯುತಗೊಳಿಸಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಸೋಮವಾರ ನಡೆದ ಕೃಷಿ ಮೇಳ ಮತ್ತು ದನಗಳ ಜಾತ್ರೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಬದಲಾದ ಸನ್ನಿವೇಶದಲ್ಲಿ ಮಿತಿ ಮೀರಿದ ರಾಸಾಯನಿಕ ಬಳಕೆಯಿಂದಾಗಿ ಕೃಷಿ ಭೂಮಿ ವಿಷಯುಕ್ತವಾಗುತ್ತಿದೆ, ಹೀಗಾಗಿ ಭವಿಷ್ಯದಲ್ಲಿ ಸಾವಯವ ಕೃಷಿಗೆ ಒತ್ತು ನೀಡಬೇಕಿದ್ದು, ಆ ಮೂಲಕ ಸುಸ್ಥಿರ ಕೃಷಿಯೊಂದಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಶಾಡಬೇಕಿದೆ. ವಿಶ್ವಮಟ್ಟದಲ್ಲಿ ಭಾರತಕ್ಕೆ ವ್ಯಾಪಕ ಮನ್ನಣೆ ಇದ್ದು, ಜಗತ್ತಿನ ಅತ್ಯಂತ ಹೆಚ್ಚು ಜನಸಂಖ್ಯೆಯಾಗಿರುವ ಭಾರತ ಭವಿಷ್ಯದಲ್ಲಿ ಆಧುನಿಕ ಮತ್ತು ಶಕ್ತಿಶಾಲಿ ರಾಷ್ಟ್ರವಾಗಿಯೂ ಗುರುತಿಸಿಕೊಳ್ಳಬೇಕಾದಲ್ಲಿ ದೇಶದ 140 ಕೋಟಿಗೂ ಹೆಚ್ಚು ಸಂಖ್ಯೆಯ ಜನರ ಬುದ್ಧಶಕ್ತಿಯನ್ನು ಬಳಸಿಕೊಂಡು ಪ್ರಗತಿಯತ್ತ ಸಾಗಬೇಕಿದೆ ಎಂದು ತಿಳಿಸಿದರು.
ದನಗಳ ಜಾತ್ರೆಯಲ್ಲಿ ವಿವಿಧ ವಿಭಾಗಳಲ್ಲಿ ಉತ್ತಮ ಪ್ರದರ್ಶನ ತೋರಿದ ರಾಸುಗಳಿಗೆ ಬಹುಮಾನ ವಿತರಿಸಲಾಯಿತು.ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಮಾತನಾಡಿದರು.
ಮಾಜಿ ಶಾಸಕ ನಿರಂಜನ್ ಕುಮಾರ್, ಮೈಲ್ಯಾಕ್ ಮಾಜಿ ಅಧ್ಯಕ್ಷ ವೆಂಕಟೇಶ್, ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ವೇಲುಸ್ವಾಮಿ, ಶರವಣನ್, ಉಪಾಧ್ಯಕ್ಷ ಸತೀಶ್, ಮುತ್ತುಕುಮಾರ್ ಭಾಗವಹಿಸಿದ್ದರು.ದನಗಳ ಜಾತ್ರೆ ಬಹುಮಾನ ವಿಜೇತರ ವಿವರ
ಎತ್ತುಗಳ ವಿಭಾಗ; ಹಾಲು ಹಲ್ಲಿನ ಜೋಡಿ ರಾಸುಗಳು- ಶಿವಕುಮಾರ್, ಗಂಜಾಂ (ಪ್ರಥಮ), ನಾಗರಾಜು, ಮಳವಳ್ಳಿ (ದ್ವಿತೀಯ), ಮಹೇಶ್, ಲಲಿತಾದ್ರಿಪುರ (ತೃತೀಯ).ಎರಡು ಹಲ್ಲಿನ ಜೋಡಿ ರಾಸುಗಳು- ಶಿವರಾಮು, ಗಂಜಾಂ, (ಪ್ರಥಮ), ಎಂ.ಕೆ. ನವೀನ್, ಮಾಡ್ರಹಳ್ಳಿ (ದ್ವಿತೀಯ), ಶಿವಮೂರ್ತಿ, ಮಾಡ್ರಹಳ್ಳಿ (ತೃತೀಯ).
ನಾಲ್ಕು ಹಲ್ಲಿನ ಜೋಡಿ ರಾಸುಗಳು- ಮಹದೇವಪ್ರಸಾದ್, ದೇವರಸನಹಳ್ಳಿ (ಪ್ರಥಮ), ಜಗದೀಶ, ಕನ್ನಹಳ್ಳಿ (ದ್ವಿತೀಯ), ಎಂ. ಪ್ರಮೋದ್, ಇಮ್ಮಾವು (ತೃತೀಯ).ಆರು ಹಲ್ಲಿನ ಜೋಡಿ ರಾಸುಗಳು- ಮನು, ಮಾದಯ್ಯನ ಹುಂಡಿ (ಪ್ರಥಮ), ಜಯರಾಮ, ಬೊಮ್ಮನಾಯಕನಹಳ್ಳಿ (ದ್ವಿತೀಯ), ಬಿ. ಮಹೇಶ, ಜಂತಗಳ್ಳಿ (ತೃತೀಯ).
ಬಾಯಿಗೂಡಿದ ಹಲ್ಲಿನ ಜೋಡಿ ರಾಸುಗಳು- ಡಾ. ರಾಹುಲ್ ಗೌಡ, ಬನ್ನೂರು (ಪ್ರಥಮ), ಗಂಗಸೇನಾ, ಬನ್ನೂರು (ದ್ವಿತೀಯ), ಶಶೀಧರ, ಹಳೆ ಕೆಂಪಯ್ಯನಹುಂಡಿ (ತೃತೀಯ).ಮೊಳೆ ಹಲ್ಲಿನ ಜೋಡಿ ರಾಸುಗಳು-ಎಸ್.ಎಂ. ದಿವಾಕರ್, ಸಿದ್ದಲಿಂಗಪುರ (ಪ್ರಥಮ), ನಟೇಶ್, ಗಂಜಾಂ (ದ್ವಿತೀಯ) ಹಾಗೂ ಮೂರನೆಯ ಬಹುಮಾನ ಎಂ.ಎನ್. ನಂಜುಂಡಸ್ವಾಮಿ, ಮಂಡಕಳ್ಳಿ
ಉಳುವ ಹಸುಗಳ ವಿಭಾಗ- ಹಾಲು ಹಲ್ಲಿನ ಜೋಡಿ ರಾಸುಗಳು- ಮಲ್ಲಿಕಾರ್ಜುಸ್ವಾಮಿ, ಕಳ್ಳೀಪುರ (ಪ್ರಥಮ), ಅಭಿಷೇಕ್, ಕನ್ನಹಳ್ಳಿ (ದ್ವಿತೀಯ), ಬಹುಗುಣ, ಕೂಡನಹಳ್ಳಿ (ತೃತೀಯ).ಎರಡು ಹಲ್ಲಿನ ಜೋಡಿ ರಾಸುಗಳು- ಬಸವಣ್ಣ, ಕಳ್ಳೀಪುರ - ಪ್ರಥಮ, ಮಾದೇಶ, ಬಿ ಸೀಹಳ್ಳಿ- ದ್ವಿತೀಯ, ಶಿವಣ್ಣಶೆಟ್ಟಿ, ಕಳ್ಳೀಪುರ- ತೃತೀಯ.
ನಾಲ್ಕು ಹಲ್ಲಿನ ಜೋಡಿ ರಾಸುಗಳು- ಎಂ.ಎಂ. ಸಂಜಯ್, ಮಲ್ಲಿಗೆ ಹಳ್ಳಿ- ಪ್ರಥಮ.ಆರು ಹಲ್ಲಿನ ಜೋಡಿ ರಾಸುಗಳು-ಆರ್. ಚಂದನ್, ಚೊಕ್ಕನಹಳ್ಳಿ- ಪ್ರಥಮ, ಮಹದೇವನಾಯಕ, ಆಲತ್ತೂರು- ದ್ವಿತೀಯ, ಪಿ. ಪ್ರಂಶಾತ್, ತಾಯುರು- ತೃತೀಯ.ಬಾಯಿಗೂಡಿದ ಹಲ್ಲಿನ ಜೋಡಿ ರಾಸುಗಳು-ಮೇಘನ, ಸಜ್ಜೆಹುಂಡಿ- ಪ್ರಥಮ, ಪರಶಿವಮೂರ್ತಿ, ಮದ್ಘಾರ ಲಿಂಗಯ್ಯನಹುಂಡಿ- ದ್ವಿತೀಯ, ಚಿಕ್ಕಸ್ವಾಮಿ, ರಾಗಿಬೊಮ್ಮನಹಳ್ಳಿ- ತೃತೀಯ.
ಮೊಳೆ ಹಲ್ಲಿನ ಜೋಡಿ ರಾಸುಗಳು- ರಾಜಯ್ಯ, ರಂಗನಾಥಪುರ- ಪ್ರಥಮ, ಹುಚ್ಚೇಗೌಡ, ಬೀಡನಹಳ್ಳಿ- ದ್ವಿತೀಯ, ಲಕ್ಷ್ಮೀ, ಕೀಳನಪುರ- ತೃತೀಯ. ಬಿತ್ತನೆ ಹೋರಿ ವಿಭಾಗ- ಕೆ.ಆರ್. ಪ್ರಶಾಂತ್, ಕುಪ್ಪರವಳ್ಳಿ - ಪ್ರಥಮ, ರಘು, ಸುತ್ತೂರು- ದ್ವಿತೀಯ, ಆರ್. ಶಿವಶಂಕರ್, ಮುಡಿಗುಂಡ - ತೃತೀಯ. ಕುರಿಗಳ ವಿಭಾಗ- ಮಲ್ಲಿಕಾರ್ಜುನಸ್ವಾಮಿ, ಕಳ್ಳೀಪುರ- ಪ್ರಥಮ.