ಸುತ್ತೂರು ಜಾತ್ರಾ ಮಹೋತ್ಸವ: ಪ್ರಚಾರ ರಥ ಕುಶಾಲನಗರಕ್ಕೆ ಆಗಮನ

KannadaprabhaNewsNetwork |  
Published : Dec 08, 2025, 02:45 AM IST
ಪ್ರಚಾರ ರಥವನ್ನು ಬರಮಾಡಿಕೊಂಡ ಸಂದರ್ಭ | Kannada Prabha

ಸಾರಾಂಶ

ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಭಕ್ತ ಜನರನ್ನು ಆಹ್ವಾನಿಸಲು ರಾಜ್ಯದಾದ್ಯಂತ ಸಂಚಾರ ಮಾಡುತ್ತಿರುವ ಪ್ರಚಾರ ರಥ ಕುಶಾಲನಗರಕ್ಕೆ ಆಗಮಿಸಿತು.

ಕುಶಾಲನಗರ : ಶ್ರೀ ಕ್ಷೇತ್ರ ಸುತ್ತೂರಿನಲ್ಲಿ 2026 ಜ. 15 ರಿಂದ 20 ರವರೆಗೆ ಜರುಗುವ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಭಕ್ತ ಜನರನ್ನು ಆಹ್ವಾನಿಸಲು ರಾಜ್ಯದಾದ್ಯಂತ ಸಂಚಾರ ಮಾಡುತ್ತಿರುವ ಪ್ರಚಾರ ರಥ ಶನಿವಾರ ಕುಶಾಲನಗರಕ್ಕೆ ಆಗಮಿಸಿತು.ಈ ಸಂದರ್ಭ ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಆಗಮಿಸಿ ಪ್ರಚಾರ ರಥದಲ್ಲಿನ ಸುತ್ತೂರು ಮಠದ ಸ್ಥಾಪನಾಚಾರ್ಯ ಶ್ರೀ ಶಿವರಾತ್ರೀಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್ ಈ ಸಂದರ್ಭ ಮಾತನಾಡಿ, ಸುತ್ತೂರು ಜಾತ್ರೆಯಲ್ಲಿ ನಾಡಿನ ಪರಂಪರೆಗಳನ್ನು ಬಿಂಬಿಸುವ ದೇಸೀಯ ಕ್ರೀಡೆಗಳ ಪ್ರದರ್ಶನಗಳೊಂದಿಗೆ ಸಾಮೂಹಿಕ ವಿವಾಹ, ಕೃಷಿ ಮೇಳ, ವಸ್ತು ಪ್ರದರ್ಶನ, ರೈತರಿಗೆ ಕೃಷಿ ಮಾಹಿತಿ ಸೇರಿದಂತೆ ಎಲ್ಲವು ಒಂದೇ ಕಡೆ ನಡೆಯುತ್ತದೆ. ಆಗಮಿಸುವ ಸಹಸ್ರ ಭಕ್ತ ಜನರಿಗೆ ಮೂರು ಹೊತ್ತು ಪ್ರಸಾದದ ವ್ಯವಸ್ಥೆಯೂ ಇರುತ್ತದೆ ಎಂದರು.

ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ ಮಾತನಾಡಿ, ಪ್ರತೀ ವರ್ಷದಂತೆ ಈ ಬಾರಿಯೂ ಸುತ್ತೂರು ಜಾತ್ರೆಗೆ ಕೊಡಗಿನ ಭಕ್ತ ಜನ ಆಗಮಿಸಬೇಕೆಂದು ಕೋರಿದರು.ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾರ್ಯದರ್ಶಿ ನಟರಾಜು, ಕೋಶಾಧಿಕಾರಿ ಕೆ.ಪಿ ಪರಮೇಶ್, ಕುಶಾಲನಗರದ ಹಿರಿಯ ನಾಗರೀಕರಾದ ಎಂ.ಹೆಚ್.ನಜೀರ್ ಆಹಮದ್, ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್‌.ಚಂದ್ರಮೋಹನ್, ಹಾಸನ ಜಿಲ್ಲೆ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ, ಪ್ರಮುಖರಾದ ಪಿ.ಮಹದೇವಪ್ಪ, ಎಂ.ಎಸ್.ಶಿವಾನಂದ, ಎಂ.ಎಸ್.ಲೋಕೇಶ್, ಕೋಳೂರು ಚಂದ್ರಪ್ಪ, ಬಸವರಾಜು, ಶಿವಲಿಂಗ, ಅಕ್ಕನ ಬಳಗದ ಮನು ದೇವಿ, ಸರೋಜ ಆರಾಧ್ಯ, ಪುಷ್ಪ, ಸೌಭಾಗ್ಯ, ಶೈಲಾ, ಪ್ರಚಾರ ರಥ ಯಾತ್ರೆಯ ಸಂಚಾಲಕ ಪಂಚಾಕ್ಷರಿ, ರಾಜಶೇಖರ, ಶಿವಪ್ರಕಾಶ್, ಆದರ್ಶ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌