ಕನ್ನಡಪ್ರಭ ವಾರ್ತೆ, ದಾವಣಗೆರೆ
ಬೆಳಗ್ಗೆ 11 ಗಂಟೆಗೆ ಬಳಗದ ಉದ್ಘಾಟನೆ ಹಾಗೂ ವೆಬ್ ಸೈಟ್ ಲೋಕಾರ್ಪಣೆ, ಸಮಾರಂಭದಲ್ಲಿ ಹಿತೈಷಿಗಳು, ಸಮಾನ ಮನಸ್ಕರು, ವಿದ್ಯಾರ್ಥಿ- ಯುವಜನರು ಪಾಲ್ಗೊಳ್ಳುವರು. ನಂತರ ಬಳಗದ ಸಭೆಯನ್ನು ನಡೆಸಿ, ಚರ್ಚೆ ನಡೆಸಲಾಗುವುದು ಎಂದು ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ತಿಳಿಸಿದ್ದಾರೆ.
ನಾಡಿನ ಕನ್ನಡಿಗರು ಸ್ವಾಭಿಮಾನ, ಸಮಾನತೆ, ಸಹಬಾಳ್ವೆಯಲ್ಲಿ ಹೃದಯ ಶ್ರೀಮಂತಿಕೆ ಹೊಂದಿದ್ದಾರೆ. ಹಾಗಾಗಿ ಈ ನೆಲದ ಸ್ವಾಭಿಮಾನಿಗೆಳೆಲ್ಲರೂ ಸಾಮಾಜಿಕ ಕಳಕಳಿಯೊಂದಿಗೆ ಸೇರಿ ನಾಡು, ನುಡಿ, ಭಾಷೆ ಮತ್ತು "ಶೈಕ್ಷಣಿಕ-ರಾಜಕೀಯ ಸಮಾನತೆಗೆ " ಸಾಮಾಜಿಕ ಬದ್ಧತೆಯೊಂದಿಗೆ ಒಗ್ಗೂಡಿ ಸಂಘಟನಾತ್ಮಕ ಹೋರಾಟದೊಂದಿಗೆ ಬಳಗ ಮುನ್ನಡೆಯಲಿದೆ. ಯಾವ ವೈಯಕ್ತಿಕ ಸ್ವಾರ್ಥ ಇರದೇ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿ ಸರ್ವ ಸ್ವಾಭಿಮಾನಿಗಳೂ ಬಳಗವನ್ನು ಮುನ್ನಡೆಸೋಣ ಎಂದು ಅವರು ಮನವಿ ಮಾಡಿದ್ದಾರೆ.ಸಮೃದ್ಧ ಸಮಾಜ ನಿರ್ಮಾಣ-ಸ್ವಾಭಿಮಾನದ ಜೀವನದೊಂದಿಗೆ ಸರ್ವ ಸಮಾಜದ ಸಮಾನ-ಮನಸ್ಕರ ಸ್ವಾಭಿಮಾನಿಗಳನ್ನು ಒಳಗೊಂಡು ಒಂದಾಗಿ ನಡೆಯೋಣ ಒಗ್ಗಟ್ಟಾಗಿ ಬಾಳೋಣ ಎಂಬ ಧ್ಯೇಯವಾಕ್ಯದಡಿ ಬಳಗ ಸಾಗಲಿದೆ. ಸ್ವಾಭಿಮಾನಿ ಬಳಗ ರಾಜ್ಯದಲ್ಲಿ ದೊಡ್ಡದಾಗಿ ಬೆಳೆದೇ ಬೆಳೆಯುತ್ತದೆ. ರಾಜ್ಯದ ಜನರು ಸ್ವಾಭಿಮಾನಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಹಾಗಾಗಿ ಬಳಗವು ಜನರನ್ನು ತಲುಪಲಿದೆ ಎಂಬ ದೃಢವಾದ ನಂಬಿಕೆ ನನ್ನದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಳಗ ಸೇರುತ್ತಾರೆ ಎಂಬ ವಿಶ್ವಾಸ ಇದೆ ಎಂದು ಅವರು ಹೇಳಿದ್ದಾರೆ.
ಬೀದರ್, ಮೈಸೂರು, ಶಿವಮೊಗ್ಗ, ಮಂಗಳೂರು, ಚಿಕ್ಕಮಗಳೂರು, ಕೊಪ್ಪಳ, ಯಾದಗಿರಿ ಇತರೆಡೆ ನಾನು ಹೋಗಿ ಬಂದಿದ್ದೇನೆ. ಎಲ್ಲೆಡೆ ಜನರು ಆಹ್ವಾನಿಸುತ್ತಿದ್ದಾರೆ. ರಾಜಕೀಯ ಪ್ರಜ್ಞೆ ಮೂಡಿಸುವುದು, ಶೈಕ್ಷಣಿಕ ಅಸಮಾನತೆ ನಿರ್ಮೂಲನೆಯಾದರೆ ಎಲ್ಲವೂ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಇರುವ ಕಾರ್ಯಕ್ರಮಕ್ಕೆ ಹೆಚ್ಚಾಗಿ ಹೋಗುತ್ತಿದ್ದೇನೆ. ರಾಜಕಾರಣ ಮಾತನಾಡುವ ಬದಲು ವಿದ್ಯಾರ್ಥಿಗಳಲ್ಲಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ವಿಚಾರಗಳ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯದ ಮೂಲೆ ಮೂಲೆಗೆ ತೆಗೆದುಕೊಂಡು ಹೋಗಿ ಹೊಸ ಅಭಿವೃದ್ಧಿ ಪರ್ವ, ರಾಜಕೀಯ ಪ್ರಜ್ಞೆ ಹುಟ್ಟು ಹಾಕುವ ನಿಟ್ಟಿನಲ್ಲಿ ಬಳಗ ಕಾರ್ಯೋನ್ಮುಖವಾಗಲಿದೆ. ಸ್ವಾಭಿಮಾನಿ ಬಳಗ ಉದ್ಘಾಟನೆ ಹಾಗೂ ವೆಬ್ ಸೈಟ್ ಲೋಕಾರ್ಪಣೆ ಸಮಾರಂಭ ಹಾಗೂ ನಂತರ ನಡೆಯುವ ಸಭೆಯಲ್ಲಿ ಸಮಾನ ಮನಸ್ಕರು, ಹಿರಿಯರು, ಮಹಿಳೆಯರು, ಪುರುಷರು, ವಿದ್ಯಾರ್ಥಿ, ಯುವ ಜನರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಿ.ವಿನಯಕುಮಾರ ಮನವಿ ಮಾಡಿದ್ದಾರೆ.- - -
-15ಕೆಡಿವಿಜಿ8: ಜಿ.ಬಿ.ವಿನಯಕುಮಾರ