ಮುಗ್ವಾದಲ್ಲಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ

KannadaprabhaNewsNetwork |  
Published : Sep 19, 2025, 01:01 AM IST
ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮಕ್ಕೆ ಚಾಲನೆ | Kannada Prabha

ಸಾರಾಂಶ

ಹೊನ್ನಾವರ ತಾಲೂಕಿನ ಸುಬ್ರಹ್ಮಣ್ಯದ ರಾಘವೇಂದ್ರ ಸಂಸ್ಕೃತ ಪಾಠ ಶಾಲೆಯ ಸಭಾಂಗಣದಲ್ಲಿ ಹೊನ್ನಾವರ ತಾಪಂ, ಮುಗ್ವಾ ಗ್ರಾಪಂ ಆಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನ ನಡೆಯಿತು.

ಹೊನ್ನಾವರ: ತಾಲೂಕಿನ ಸುಬ್ರಹ್ಮಣ್ಯದ ರಾಘವೇಂದ್ರ ಸಂಸ್ಕೃತ ಪಾಠ ಶಾಲೆಯ ಸಭಾಂಗಣದಲ್ಲಿ ಹೊನ್ನಾವರ ತಾಪಂ, ಮುಗ್ವಾ ಗ್ರಾಪಂ ಆಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನ ನಡೆಯಿತು.

ಡಾ. ಅನುಪಮಾ ಎಚ್.ಎಸ್. ಮಾತನಾಡಿ, ಪ್ರತಿಯೊಬ್ಬರೂ ತನ್ನೊಳಗಿನ ಅಹಂಕಾರ ಕಳೆದುಕೊಂಡು, ಕಸ ಹೆಕ್ಕುವುದು ಕೀಳು ಎಂದು ತಿಳಿಯದೆ, ಕಸ ಹೆಕ್ಕುವುದರಲ್ಲಿ ತೊಡಗಿಕೊಳ್ಳಬೇಕು. ಆತ್ಮಶೋಧ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಹಾರಾಷ್ಟ್ರದ ಸಂತ ಗಾಡಿಗೆ ಬಾಬಾ ಕಸ ಹೆಕ್ಕಿ, ಸ್ವಚ್ಛತೆ ಕೆಲಸ ಮಾಡಿ ಶಿಕ್ಷಣ ಸಂಸ್ಥೆ, ಅನಾಥಾಶ್ರಮ ಇನ್ನಿತರ ಅನೇಕ ಸಂಸ್ಥೆ ಹುಟ್ಟು ಹಾಕಿದ್ದಾರೆ. ಸಂತ ಅನಿಸಿಕೊಂಡವನು ಕಸ ತೆಗೆಯುವುದರ ಮಹಾತ್ಮ ಎನಿಸಿಕೊಂಡಿದ್ದಾರೆ. ಕಸ ಹೆಕ್ಕುವುದರಲ್ಲಿ ಕೀಳರಿಮೆ ಬೇಡ, ಪ್ಲಾಸ್ಟಿಕ್ ತುಂಬಾ ಅಪಾಯಕಾರಿ, ನಮ್ಮ ತಿಳಿಯದೆ ಮಾನವನ ದೇಹ ಪ್ರವೇಶ ಮಾಡುತ್ತದೆ. ಪ್ಲಾಸ್ಟಿಕ್‌ನಿಂದ ನಾನಾ ರೀತಿಯ ರೋಗ ಹುಟ್ಟಿಕೊಳ್ಳುತ್ತದೆ. ಪ್ಲಾಸ್ಟಿಕ್ ನಿಷೇಧದ ಕಾನೂನು ಕಟ್ಟುನಿಟ್ಟಾಗಿ ಜಾರಿ ಆಗಬೇಕು ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚೇತನಕುಮಾರ ಮಾತನಾಡಿ, ಗಾಂಧಿ ಜಯಂತಿ ವರೆಗೆ ಸ್ವಚ್ಛತಾ ಕಾರ್ಯಕ್ರಮ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಲಿದೆ. ಪ್ರತಿಯೊಬ್ಬರೂ ಸ್ವಚ್ಛತಾ ಕೆಲಸದಲ್ಲಿ ಪಾಲ್ಗೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಐ.ವಿ. ನಾಯ್ಕ ಮಾತನಾಡಿ, ಮೂರು ವರ್ಷದ ಹಿಂದೆ ಕಸ ವಿಲೇವಾರಿ ಘಟಕ ಮಾಡಲು ಹೊರಟಾಗ ಸ್ಥಳೀಯರ ವಿರೋಧ ವ್ಯಕ್ತವಾಯಿತು. ಆದರೂ ಬಾಡಿಗೆ ಕಟ್ಟಡ ಪಡೆದು ಘಟಕ ಸ್ಥಾಪನೆ ಮಾಡಿದ್ದೇವೆ. ಸರ್ಕಾರದ ಯೋಜನೆ ಒಳ್ಳೆದಿದೆ. ಅದಕ್ಕೆ ಹಣದ ಕೊರತೆಯೂ ಇದೆ. ಇದೆಲ್ಲವನ್ನು ನಿಭಾಯಿಸಿ ಕಸ ವಿಲೇವಾರಿ ಕೆಲಸ ಮಾಡುತ್ತಿದ್ದೇವೆ. ಸಂಗ್ರಹ ಆಗಿರುವ ಕಸ ಖಾಲಿ ಮಾಡುವುದು ಸಮಸ್ಯೆ ಆಗಿ ಕಾಡುತ್ತಿದೆ ಎಂದರು.

ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕ ಗಣೇಶ ಕಾಮತ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಕಿರಣಕುಮಾರ್ ಮಾತನಾಡಿದರು.

ಬಾಲಚಂದ್ರ ನಾಯ್ಕ ಸ್ವಾಗತಿಸಿದರು, ಪಿಡಿಒ ಸವಿತಾ ಗೌಡ ವಂದಿಸಿದರು. ಮುಗ್ವಾ ಗ್ರಾಪಂ ಉಪಾಧ್ಯಕ್ಷೆ ವಿದ್ಯಾ ಮೇಸ್ತ, ಗ್ರಾಪಂ ಸದಸ್ಯರಾದ ರಾಮ ಗೌಡ, ನಾರಾಯಣ ಗೌಡ ಇದ್ದರು. ಕಾರ್ಯಕ್ರಮದ ಆನಂತರ ಹೆದ್ದಾರಿ ಅಂಚಿಗೆ ಕಸ ಹೆಕ್ಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ