ಎಲ್ಲರ ಸಹಕಾರದಿಂದ ಮಾತ್ರ ಸ್ವಚ್ಛ ಭಾರತ ಸಾಧ್ಯ

KannadaprabhaNewsNetwork |  
Published : Oct 02, 2026, 01:45 AM IST
1ಎಚ್ಎಸ್ಎನ್7 : ಹೊಳೆನರಸೀಪುರದ ಪುರಸಭಾ ವ್ಯಾಪ್ತಿಯ ಹೇಮಾವತಿ ನದಿ ತಡೆಗೋಡೆ ವಾಕಿಂಗ್ ಪಾತ್‌ನಲ್ಲಿ ಸ್ವಚ್ಛತಾ ಶ್ರಮದಾನಕ್ಕೆ ಮುಖ್ಯಾಧಿಕಾರಿ ಶಿವಶಂಕರ್ ಚಾಲನೆ ನೀಡಿದರು.  | Kannada Prabha

ಸಾರಾಂಶ

ದೇಶದ ಪ್ರತಿಯೊಬ್ಬ ನಾಗರಿಕನಲ್ಲೂ ಸ್ವಚ್ಛತೆಯ ಬಗೆಗಿನ ಹೊಣೆಗಾರಿಕೆಯನ್ನು ಜಾಗೃತಗೊಳಿಸುವ ಜತೆಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲು ನಾಗರಿಕರು ಕೈಜೋಡಿಸುವುದು ಈ ಕಾರ್ಯಕ್ರಮದ ಮೂಲ ಆಶಯ ಎಂದರು. ಸ್ವಚ್ಛತೆಯು ಕೇವಲ ಪೌರಕಾರ್ಮಿಕರ ಕೆಲಸವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಹೊಣೆಗಾರಿಕೆ ಎಂಬುದನ್ನು ಶ್ರಮದಾನದ ಮೂಲಕ ತಿಳಿಯಲು ಸಾಧ್ಯವಾಗುತ್ತದೆ. ತಾವೇ ಸ್ವತಃ ಪೊರಕೆ ಹಿಡಿದು ಕಸ ಗುಡಿಸಿದಾಗ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲಬಾರದು ಎಂಬ ಎಚ್ಚರಿಕೆ ಅಥವಾ ಅರಿವು ಪ್ರತಿಯೊಬ್ಬರಲ್ಲೂ ಮೂಡುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಸಾರ್ವಜನಿಕ ಸ್ಥಳಗಳನ್ನು ಕಸಮುಕ್ತವಾಗಿಸಿ, ನೈರ್ಮಲ್ಯ ಹಾಗೂ ಆರೋಗ್ಯಪೂರ್ಣ ಜೀವನಶೈಲಿಯನ್ನು ಉತ್ತೇಜಿಸುವ ದೃಷ್ಠಿಯಿಂದ ‘ಸ್ವಚ್ಛತಾ ಹೀ ಸೇವಾ’ ಅಭಿಯಾನದಡಿ ಒಂದು ದಿನ, ಒಂದು ಗಂಟೆ, ಒಟ್ಟಾಗಿ ಸ್ವಚ್ಛತೆಯ ಶ್ರಮದಾನದಲ್ಲಿ ಯುವಕರು, ವಿದ್ಯಾರ್ಥಿಗಳು, ಹಿರಿಯರು, ಸಂಘ, ಸಂಸ್ಥೆಗಳ ಸದಸ್ಯರು ಒಂದೇ ಕಾರ್ಯಕ್ರದಡಿಯಲ್ಲಿ ಕೈಜೋಡಿಸಿದಾಗ ಮಾತ್ರ ಕಸಮುಕ್ತ ಭಾರತ ಹಾಗೂ ಸ್ವಚ್ಛ ಭಾರತ ನಿರ್ಮಾಣ ಸಾಧ್ಯವೆಂದು ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್ ಅಭಿಪ್ರಾಯಪಟ್ಟರು.

ಪಟ್ಟಣದ ಪುರಸಭಾ ವ್ಯಾಪ್ತಿಯ ಹೇಮಾವತಿ ನದಿ ತಡೆಗೋಡೆ ವಾಕಿಂಗ್ ಪಾತ್‌ನಲ್ಲಿ ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಾತ್ಮ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಕೇಂದ್ರ ಸರ್ಕಾರವೂ ದೇಶಾದ್ಯಂತ ಆಚರಿಸಲಾಗುವ "ಸ್ವಚ್ಛತಾ ಹೀ ಸೇವಾ " (ಸ್ವಚ್ಛತೆಯೇ ಸೇವೆ) ಅಭಿಯಾನದ ಭಾಗವಾಗಿ ’ಒಂದು ದಿನ, ಒಂದು ಗಂಟೆ, ಒಟ್ಟಾಗಿ ಸ್ವಚ್ಛತೆ’ ಎಂಬ ಮಹತ್ವದ ಶ್ರಮದಾನ ಕರೆಯನ್ನು ನೀಡಲಾಯಿತು. ದೇಶದ ಪ್ರತಿಯೊಬ್ಬ ನಾಗರಿಕನಲ್ಲೂ ಸ್ವಚ್ಛತೆಯ ಬಗೆಗಿನ ಹೊಣೆಗಾರಿಕೆಯನ್ನು ಜಾಗೃತಗೊಳಿಸುವ ಜತೆಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲು ನಾಗರಿಕರು ಕೈಜೋಡಿಸುವುದು ಈ ಕಾರ್ಯಕ್ರಮದ ಮೂಲ ಆಶಯ ಎಂದರು. ಸ್ವಚ್ಛತೆಯು ಕೇವಲ ಪೌರಕಾರ್ಮಿಕರ ಕೆಲಸವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಹೊಣೆಗಾರಿಕೆ ಎಂಬುದನ್ನು ಶ್ರಮದಾನದ ಮೂಲಕ ತಿಳಿಯಲು ಸಾಧ್ಯವಾಗುತ್ತದೆ. ತಾವೇ ಸ್ವತಃ ಪೊರಕೆ ಹಿಡಿದು ಕಸ ಗುಡಿಸಿದಾಗ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲಬಾರದು ಎಂಬ ಎಚ್ಚರಿಕೆ ಅಥವಾ ಅರಿವು ಪ್ರತಿಯೊಬ್ಬರಲ್ಲೂ ಮೂಡುತ್ತದೆ ಎಂದರು. ಇತ್ತೀಚಿನ ವರ್ಷಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳು, ಡೈಪರ್‌ಗಳು, ಎಲೆಟ್ರಾನಿಕ್ಸ್ ಉತ್ಪನ್ನಗಳು ಹಾಗೂ ಬಣ್ಣದ ಡಬ್ಬಗಳ ತ್ಯಾಜ್ಯದ ನಿರ್ವಹಣೆಯೂ ಸಮಸ್ಯೆಯಾಗಿದೆ. ಆದ್ದರಿಂದ ಮನೆ ಮನೆಗೆ ಕಸ ಸಂಗ್ರಹದ ವಾಹನ ಬಂದಾಗ ನಾಗರಿಕರು ಹಸಿ ಕಸ, ಒಣ ಕಸ, ಸ್ಯಾನಿಟರಿ ಪ್ಯಾಡ್ಸ್ ತ್ಯಾಜ್ಯ ಹಾಗೂ ವಿಶೇಷ ಕಾಳಜಿ ತ್ಯಾಜ್ಯವೆಂದು ನಾಲ್ಕು ಬಗೆಯಲ್ಲಿ ತ್ಯಾಜ್ಯವನ್ನು ವಿಂಗಡಿಸಿ ನೀಡುವಂತೆ ವಿನಂತಿಸಿದರು. ಪಟ್ಟಣದ ಡಾ. ಜಗಜೀವನ್ ರಾಮ್ ವೃತ್ತದಿಂದ ಆರ್‌ಎಂಸಿ ಯಾರ್ಡ್ ಮೂಲಕ ಹೇಮಾವತಿ ನದಿ ತಡೆಗೋಡೆ ವಾಕಿಂಗ್ ಪಾತ್ ತನಕ ನಡೆದ ಜಾಥದಲ್ಲಿ ಸ್ವಚ್ಛತೆ, ಕಸ ನಿರ್ವಹಣೆ ಹಾಗೂ ಸ್ವಚ್ಛತೆಯ ಮಹತ್ವ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಿದರು.ಪುರಸಭೆ ಪರಿಸರ ಅಭಿಯಂತಕರಾದ ರುಚಿದರ್ಶಿನಿ, ಹಿರಿಯ ಆರೋಗ್ಯ ನಿರೀಕ್ಷಕ ವಸಂತ್ ಕುಮಾರ್, ಸಿಒ ರಮೇಶ್, ಸಿಎಒ ಪಂಕಜ, ಆರ್‌ಒ ಚೇತನ, ಸರ್ಕಾರಿ ಕಾನೂನು ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಹಾಗೂ ಸಹಾಯಕ ಪ್ರಾಧ್ಯಾಪಕ ಪ್ರತಾಪ್, ಎನ್‌ಎಸ್‌ಎಸ್ ಸಂಯೋಜಕರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ್, ಪುರಸಭೆ ಮೇಸ್ತ್ರಿಗಳಾದ ನಾಗಮ್ಮ, ಚೆಲುವ ಹಾಗೂ ಕಿರಣ್, ಕರ ವಸೂಲಿಗಾರ ಹುಸೇನ್, ಸರ್ಕಾರಿ ಕಾನೂನು ಕಾಲೇಜು ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್‌ನ ವಿದ್ಯಾರ್ಥಿಗಳು, ಸ್ವಸಹಾಯ ಸಂಘದ ಸದಸ್ಯರು, ಪುರಸಭೆ ಕಚೇರಿ ಸಿಬ್ಬಂದಿ ಹಾಶಗೂ ಪೌರ ಕಾರ್ಮಿಕರು, ಸಾರ್ವಜನಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯಗೊಳ್ಳಬೇಕು: ಕಾವೇರಿ
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಕ್ರೀಡಾಕೂಟ..!