ಕನ್ನಡಪ್ರಭ ವಾರ್ತೆ ಮಧುಗಿರಿ
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ಸಿದ್ಧಗಂಗಾ ಡಯಾಲಿಸಿಸ್ ಸೆಂಟರ್ ಪಾವಗಡ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಮಹಾರಾಜ್ ಅವರಿಗೆ ತುಮಕೂರಿನ ಶ್ರೀ ಸಿದ್ಧಾರ್ಥ ವಿಶ್ವ ವಿವಿಯಿಂದ ಗೌರವ ಡಾಕ್ಟರೇಟ್ ದೊರೆತ ಹಿನ್ನೆಲೆಯಲ್ಲಿ ಮಧುಗಿರಿಯ ನಾಗರಿಕರು ಮತ್ತು ಶಾರದಾ ಕಣ್ಣಿನ ಆಸ್ಪತ್ರೆ ಮತ್ತು ಡಯಾಲಿಸಿಸ್ ಕೇಂದ್ರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಧುಗಿರಿ ಪಾವಗಡ ತಾಲೂಕುಗಳು ಅತ್ಯಂತ ಬರಪೀಡಿತ ಪ್ರದೇಶಗಳು, ಈ ಭಾಗದಲ್ಲಿ ಕುಗ್ರಾಮಗಳಿಗೆ ತೆರಳಿ ಸ್ವಾಮೀಜಿ ನೊಂದವರ ಬದುಕಿಗೆ ಆಶ್ರಯ ನೀಡುವ ಜೊತೆಗೆ ಆರೋಗ್ಯ, ಶಿಕ್ಷಣ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸುಮಾರು ವರ್ಷಗಳಿಂದ ಮಾಡುತ್ತಿರುವ ಸೇವೆ ಗಮನಿಸಿದ್ದು, ನಿಮ್ಮ ಸೇವೆಯೊಂದಿಗೆ ನಾವುಗಳು ಸದಾ ಕೈ ಜೋಡಿಸುತ್ತೇವೆ ಎಂದರು.ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ,ಮೌಢ್ಯವನ್ನು ಹೋಗಲಾಡಿಸುವುದು, ಶಿಕ್ಷಣದ ಬಗ್ಗೆ ತಿಳುವಳಿಕೆ ಜನರಲ್ಲಿರುವ ಅಜ್ಞಾನ ಹೋಗಲಾಡಿಸಲು ಸ್ವಾಮೀಜಿ ಶ್ರಮಿಸಿದ್ದಾರೆ. ಈ ಭಾಗದ ಶಿಕ್ಷಣ ,ಆರೋಗ್ಯ , ವೈಚಾರಿಕತೆಯಲ್ಲಿ ಬದಲಾವಣೆ ತರಲು ಸ್ವಾಮೀಜಿ ಅವರು ಕನಸು ಕಟ್ಟಿದ್ದು, ಅವರ ಸೇವೆಗೆ ಗೌರವ ಡಾಕ್ಟರೇಟ್ ಎಲ್ಲರಿಗೂ ಸಂತಸ ತಂದಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಸಿ.ಕೃಷ್ಣಪ್ಪ ಮಾತನಾಡಿ ,ಪಾವಗಡದಂತಹ ಬರಪೀಡಿತ ಪ್ರದೇಶದಲ್ಲಿ ನೆಲಸಿ ಬಡವರ ಪಾಲಿನ ದೇವರಾಗಿ ಸಕಲ ರೀತಿಯಲ್ಲೂ ನೆರವಾಗುವ ಮೂಲಕ ಸ್ವಾಮಿ ಜಪಾನಂದಜೀ ಅವರು ಮನೆ ಮಾತಾಗಿದ್ದಾರೆ ಎಂದರು.
ನಿವೃತ್ತ ಪ್ರಾಂಶುಪಾಲ ಡಿ.ಎಸ್.ಮುನೀಂದ್ರ ಕುಮಾರ್,ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರಮಣಪ್ಪ ಮಾತನಾಡಿದರು. ಸಭೆಯಲ್ಲಿ ಡಿವೈಎಸ್‌ಪಿ ಮಂಜುನಾಥ್,ಕಸಾಪ ಅಧ್ಯಕ್ಷೆ ಸಹನಾ ನಾಗೇಶ್,ಡಯಾಲಿಸಿಸ್ ಕೇಂದ್ರದ ಅನುರಾದ,ಅಕ್ಷಯ್, ವರದಾಯಿನಿ ಸೇವಾ ಟ್ರಸ್ಟ್ ಅಧ್ಯಕ್ಷೆ ಗಾಯಿತ್ರಿ ನಾರಯಣ್, ಡಾ.ಜಿ.ಕೆ.ಜಯರಾಮ್, ಡಾ.ಸ್ವಾತಿ, ರೋಟರಿ ಅಧ್ಯಕ್ಷ ನಟರಾಜು ಸೇವಾಕರ್ತರಾದ ಟಿ.ಪ್ರಸನ್ನಕುಮಾರ್, ನಂಜಮ್ಮ ಹಾಗೂ ನಾಗರಿಕರು ಇದ್ದರು.