ಸ್ವಾಮಿ ಪರಮಾರ್ಥ ದೇವ್‌ಜೀ ವಿಶೇಷ ಯೋಗ ತರಬೇತಿ ಶಿಬಿರ

KannadaprabhaNewsNetwork | Published : May 9, 2025 12:36 AM
Follow Us

ಸಾರಾಂಶ

ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರನ್ನು ಸತ್ಕರಿಸುವ ಮೂಲಕ ಹರಿದ್ವಾರದ ಯೋಗ ಗುರು ಸ್ವಾಮಿ ಪರಮಾರ್ಥ ದೇವಜೀ ವಿಶೇಷ ಯೋಗ ತರಬೇತಿ ಶಿಬಿರ ನಗರದ ಮಲ್ಲಿಗೆ ಹೋಟೆಲ್ ಆವರಣದಲ್ಲಿ ಇತ್ತೀಚೆಗೆ ನಡೆಯಿತು.

ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರನ್ನು ಸತ್ಕರಿಸುವ ಮೂಲಕ ಹರಿದ್ವಾರದ ಯೋಗ ಗುರು ಸ್ವಾಮಿ ಪರಮಾರ್ಥ ದೇವಜೀ ವಿಶೇಷ ಯೋಗ ತರಬೇತಿ ಶಿಬಿರ ನಗರದ ಮಲ್ಲಿಗೆ ಹೋಟೆಲ್ ಆವರಣದಲ್ಲಿ ಇತ್ತೀಚೆಗೆ ನಡೆಯಿತು.

ಯೋಗ ಗುರು ಬಾಬಾ ರಾಮ್‌ದೇವ್ ಪರಮಾಪ್ತ ಶಿಷ್ಯ ಸ್ವಾಮಿ ಪರಮಾರ್ಥ ದೇವ್‌ಜೀ ಅವರಿಂದ ನಡೆದ ಯೋಗ ಕಾರ್ಯಕ್ರಮದಲ್ಲಿ ನಗರದ ಸೇಕ್ರೆಡ್ ಹಾರ್ಟ್‌ ಕೆಥೋಲಿಕ್ ಚರ್ಚ್‌ನ ಧರ್ಮಗುರು ಫಾದರ್ ಭಗವಂತ್‌ ರಾಜ್‌, ಹಂಸಾಂಬಾ ಶಾರದಾಶ್ರಮದ ಮಾತಾಜಿ ಪ್ರಬೋದಮಯಿ ಇದ್ದರು.

ಬಳಿಕ ಪೌರ ಕಾರ್ಮಿಕರಿಗೆ ರುದ್ರಾಕ್ಷಿ ಮಾಲೆ ಹಾಕಿದ ಸ್ವಾಮೀಜಿ, ನೆನಪಿನ ಕಾಣಿಗೆ ನೀಡಿ ಸನ್ಮಾನಿಸಿದರು. ಹತ್ತಕ್ಕೂ ಅಧಿಕ ಕಾರ್ಮಿಕರನ್ನು ಸತ್ಕರಿಸಿದ ಬಳಿಕ ವಿಶೇಷ ಯೋಗ ಶಿಬಿರ ಆರಂಭಿಸಲಾಯಿತು. ನಗರ, ಊರಿನ ಸ್ವಚ್ಛತೆಗೆ ಪೌರ ಕಾರ್ಮಿಕರು ಬೇಕು, ನಮ್ಮ ದೇಹದೊಳಗಿನ ಶುದ್ಧಿಗೆ ಯೋಗ ಬೇಕು ಎಂಬ ಸಂದೇಶ ಸ್ವಾಮೀಜಿ ನೀಡಿದರು.

ಸ್ವಾಮಿ ಪರಮಾರ್ಥ ದೇವ್‌ಜೀ ಅವರು ಬೆಳಗ್ಗೆ 5.40ರಿಂದ 7.20ರ ವರೆಗೆ ಪತಂಜಲಿ ಯೋಗದ ಪ್ರಯೋಜನ ವಿವರಿಸಿದರು.

ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ, ಗದಗ, ವಿಜಯನಗರ ಜಿಲ್ಲಾ ಪ್ರಭಾರಿ ಡಾ. ಎಸ್‌.ಬಿ. ಹಂದ್ರಾಳ, ರಾಜ್ಯ ಸಮಿತಿ ಸದಸ್ಯ ಬಾಲಚಂದ್ರ ಶರ್ಮಾ, ಯುವ ಭಾರತ ರಾಜ್ಯ ಪ್ರಭಾರಿ ಕಿರಣ್‌ ಕುಮಾರ, ಕಿರಣ ಮನೋಲಕರ್, ಸಂಜಯ ಕುಸ್ತಿಗಾರ, ಯೋಗ ಸಾಧಕರಾದ ಮಂಗಳಮ್ಮ, ಡಾ. ಸುಮಂಗಲಾದೇವಿ, ಪ್ರಮೀಳಮ್ಮ, ಗೌರಮ್ಮ, ಸಮಿತಿಯ ಸದಸ್ಯರಾದ ಪ್ರಹ್ಲಾದ ಭೂಪಾಳ್‌, ಯೋಗ ಸಾಧಕರಾದ ರಾಜೇಶ್ ಕರ್ವಾ, ಸತ್ಯಪ್ಪಾಜಿ, ವೆಂಕಟೇಶ ವಾಸಿ, ಕಟ್ಟಾ ನಂಜಪ್ಪ, ಅನಂತ ಜೋಷಿ, ಅಶೋಕ ಚಿತ್ರಗಾರ, ನಾಗರತ್ನಾ, ವಿಠೋಬ ಬಲ್ಲೂರ, ಶ್ರೀಧರ, ಆರ್.ವಿ. ಗುಮಾಸ್ತೆ, ನಗರಸಭೆ ಉಪಾಧ್ಯಕ್ಷ ರಮೇಶ ಗುಪ್ತಾ ಮತ್ತಿತರರಿದ್ದರು.