ಮಾ.3ರಿಂದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಸ್ವಾಮಿಯ ಅಷ್ಟಬಂಧ ಬ್ರಹ್ಮಕಲಶೋತ್ಸವ

KannadaprabhaNewsNetwork |  
Published : Dec 31, 2025, 03:00 AM IST
ಬ್ರಹ್ಮ | Kannada Prabha

ಸಾರಾಂಶ

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಸ್ವಾಮಿಯ ಅಷ್ಟಬಂಧ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ ಹಾಗು ನೂತನ ಬ್ರಹ್ಮರಥ ಸಮರ್ಪಣಾ ಸಮಾರಂಭ ಮಾ.3ರಿಂದ 11ರವರೆಗೆ ನೆರವೇರಲಿದೆ.

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಸ್ವಾಮಿಯ ಅಷ್ಟಬಂಧ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ ಹಾಗು ನೂತನ ಬ್ರಹ್ಮರಥ ಸಮರ್ಪಣಾ ಸಮಾರಂಭ ಮಾ.3ರಿಂದ 11ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಪೂರ್ವಭಾವಿ ಸಮಾಲೋಚನಾ ಸಭೆ ಶುಕ್ರವಾರ ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಅಧ್ಯಕ್ಷತೆ ವಹಿಸಿದ್ದರು.

ವಿಜಯಗೋಪುರ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಮಾತನಾಡಿ, ಉಜಿರೆಯ ಯುವಕರ ತಂಡ ಯಾವುದೇ ಕೆಲಸಕ್ಕೆ ಸದಾ ಸಿದ್ಧವಾಗಿರುತ್ತಿದ್ದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ, ಮಹಿಳಾ ಸದಸ್ಯೆಯರ ಸೇವಾ ಮನೋಭಾವ, ಜನರ ಸಹಕಾರ ಹಾಗೂ ಊರವರ ಉತ್ಸಾಹದಿಂದ ಬ್ರಹ್ಮರಥ ಸಮರ್ಪಣೆ, ವಿಜಯಗೋಪುರ ಲೋಕಾರ್ಪಣೆ ಕಾರ್ಯ ಉತ್ತಮ ರೀತಿಯಲ್ಲಿ ನಡೆಯುವುದೆಂಬ ನಂಬಿಕೆಯಿದೆ ಎಂದರು. ಶಾಸಕ ಹರೀಶ್ ಪೂಂಜ ಮಾತನಾಡಿ ಶ್ರೀ ದೇವರ ಸನ್ನಿಧಿಯಲ್ಲಿ ನಮಗೆ ಸೇವೆ ಮಾಡುವ ಅಪೂರ್ವ ಅವಕಾಶ ದೊರೆತಿದ್ದು ಅದನ್ನು ಸದ್ವಿನಿಯೋಗಗೊಳಿಸುವ ಕೆಲಸ ನಮ್ಮದು. ಎಲ್ಲರೂ ಸಹಮತದಿಂದ ಭಾಗವಹಿಸಿ ಮಾಡುವ ಕೆಲಸ ನಮ್ಮದೆಂಬ ಭಾವದಿಂದ ದುಡಿದರೆ ಕಾರ್ಯ ಯಶಸ್ವಿಯಾಗುವುದು. 25 ಸಾವಿರ ರು. ದೇಣಿಗೆ ನೀಡಿ ಅನ್ನದಾನ ಸೇವೆ ಮಾಡಲು ಅವಕಾಶವಿದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಎಲ್ಲರೂ ಜತೆಯಾಗಿ ಕೆಲಸ ಮಾಡಿ ಯಶಸ್ವಿಗೊಳಿಸೋಣ ಎಂದರು.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿ, 2001 ಮತ್ತು 2013 ರಲ್ಲಿ ಶ್ರೀ ಜನಾರ್ದನ ಸ್ವಾಮಿ ಬ್ರಹ್ಮಕಲಶೋತ್ಸವ ನಡೆದಿದ್ದು ಇದೀಗ 2026 ರಲ್ಲಿ ಬ್ರಹ್ಮಕಲಶೋತ್ಸವ ನಡೆಸಲು ನಿರ್ಧರಿಸಲಾಗಿದೆ. ಗ್ರಾಮದ 4156 ಮನೆಗಳಿಗೆ ಭೇಟಿ ನೀಡಿ ಜಾತಿ, ಮತ ಭೇದವಿಲ್ಲದೆ ದೇವಸ್ಥಾನ ಮತ್ತು ಭಕ್ತರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಅತಿಥಿಗಳು ಬ್ರಹ್ಮಕಲಶೋತ್ಸವದ ಲಾಂಛನವನ್ನು ಅನಾವರಣಗೊಳಿಸಿದರು. ಸಂಜೀವ ಶೆಟ್ಟಿ ಕುಂಟಿನಿ ಇದುವರೆಗಿನ ಆಯವ್ಯಯ ಲೆಕ್ಕಪತ್ರ ಮಂಡಿಸಿದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಗೌರವ ಮಾರ್ಗದರ್ಶಕರಾಗಿ, ಡಿ. ಹರ್ಷೇಂದ್ರ ಕುಮಾರ್‌ ಅವರು ಪ್ರಧಾನ ಗೌರವಾಧ್ಯಕ್ಷರಾಗಿ, ಶಶಿಧರ ಶೆಟ್ಟಿ ಬರೋಡ ಕಾರ್ಯಾಧ್ಯಕ್ಷರಾಗಿ, ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್ ಅವರನ್ನು ಸಮಿತಿ ಅಧ್ಯಕ್ಷರಾಗಿ ಘೋಷಿಸಲಾಯಿತು.ಗೌರವಾಧ್ಯಕ್ಷರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಭರತ್ ಕುಮಾರ್, ಕಾರ್ಯದರ್ಶಿಯಾಗಿ ರವೀಂದ್ರ ಶೆಟ್ಟಿ ಬಳಂಜ, ಪ್ರಕಾಶ್ ಗೌಡ ಅಪ್ರಮೇಯ, ರವಿ ಚೆಕ್ಕಿತ್ತಾಯ, ಶಿವಪ್ರಸಾದ ಸುರ್ಯ , ವನಿತಾ ಶೆಟ್ಟಿ, ಪ್ರಧಾನ ಸಂಚಾಲಕರಾಗಿ ಕೆ.ಮೋಹನ ಕುಮಾರ್, ಸಂಚಾಲಕರಾಗಿ ಮೋಹನ ಶೆಟ್ಟಿಗಾರ್, ಕಿರಣ್ ಕುಮಾರ್, ಲಕ್ಷ್ಮಣ ಸಫಲ್ಯ, ಪ್ರಧಾನ ಕೋಶಾಧಿಕಾರಿಯಾಗಿ ಶರತ್ ಕೃಷ್ಣ ಪಡುವೆಟ್ನಾಯ, ಸಂಜೀವ ಕೆ, ಶರತ್ ಕುಮಾರ್, ಪ್ರಶಾಂತ ಜೈನ್ , ರಾಜೇಶ್ ಪೈ ಆಯ್ಕೆಯಾದರು. ಉಳಿದಂತೆ, ಉಪಾಧ್ಯಕ್ಷರು, ಸ್ವಾಗತ ಸಮಿತಿ, ವೈದಿಕ ಸಮಿತಿ, ಆರ್ಥಿಕ ಸಮಿತಿ, ಕಲಶ ಸಮಿತಿ, ಆಹಾರ ಸಮಿತಿ, ವಾಹನ ನಿಲುಗಡೆ ಸಮಿತಿ, ಲೆಕ್ಕಪತ್ರ ಸಮಿತಿ, ಸಾಂಸ್ಕೃತಿಕ ಸಮಿತಿ, ಅಲಂಕಾರ ಸಮಿತಿ, ಫಲಕಾಣಿಕೆ ಸಮಿತಿ, ಸ್ವಯಂಸೇವಕ ಸಮಿತಿ, ಸಾಮಾಜಿಕ ಜಾಲತಾಣ ಸಮಿತಿ, ಮೆರವಣಿಗೆ ಸಮಿತಿ, ವೇದಿಕೆ ಸಮಿತಿ, ಸ್ವಚ್ಛತೆ ಸಮಿತಿ, ರಕ್ಷಣಾ ಸಮಿತಿ, ಸುಡುಮದ್ದು ಸಮಿತಿ, ಪ್ರಚಾರ ಸಮಿತಿ, ಮಾಧ್ಯಮ ಸಮಿತಿ ಸಂಚಾಲಕರನ್ನು ಘೋಷಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲಕುಮಾರ್ ಎಸ್ ಎಸ್ , ದೇವಸ್ಥಾನದ ನಾಳ್ವಿಕೆಯರಾದ ಅನಂತಕೃಷ್ಣ ಮೂಡಣ್ಣಾಯ, ಶಿವರಾಮ ಪಡುವೆಟ್ನಾಯ, ಸಂಚಾಲಕ ಕೆ.ಮೋಹನ ಕುಮಾರ್, ಕಾರ್ಯದರ್ಶಿ ಲಕ್ಷ್ಮಣ ಸಫಲ್ಯ, ಕೋಶಾಧಿಕಾರಿ ರಾಜೇಶ್ ಪೈ, ಉಜಿರೆ ಗ್ರಾ,ಪಂ. ಅಧ್ಯಕ್ಷೆ ಉಷಾಕಿರಣ ಕಾರಂತ್ ಉಪಸ್ಥಿತರಿದ್ದರು, ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬಳಂಜ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ