ದೊಡ್ಡಬಳ್ಳಾಪುರ: ವಿಶ್ವಗುರು ಸ್ವಾಮಿ ವಿವೇಕಾನಂದರ 164 ನೇ ಜಯಂತ್ಯುತ್ಸವದ ಅಂಗವಾಗಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್ ವತಿಯಿಂದ ವಿವೇಕಾನಂದ ಪುತ್ಥಳಿಗೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಸಿಹಿ ವಿತರಣೆ ಹಾಗೂ ಅನ್ನದಾಸೋಹ ಮಾಡಲಾಯಿತು.
ಎಂಎಬಿಎಲ್ ವಿದ್ಯಾ ಸಂಸ್ಥೆಯ ಎಂ.ಬಿ.ಗುರುದೇವ್ ಮಾತನಾಡಿ, ಯುವಕರನ್ನು ಬಡಿದಿಬ್ಬಿಸುವ ಸದೃಢ ಯುವ ದೇಶವನ್ನು ಕಟ್ಟುವ ಕಾಯಕವನ್ನು ಸ್ವಾಮಿ ವಿವೇಕಾನಂದರು ನಿರಂತರವಾಗಿ ಮಾಡಿದ್ದರು ಎಂದರು.
ದೇವಾಂಗ ಮಂಡಲಿ ನಿರ್ದೇಶಕಿ ಪ್ರಿಯಾಂಕಾ ಮಾತನಾಡಿ, ದೇಶಾಭಿಮಾನ, ಪ್ರಬುದ್ಧತೆ, ಅರಿವು ಇದಕ್ಕೆ ಮತ್ತೊಂದು ಹೆಸರೇ ಸ್ವಾಮಿ ವಿವೇಕಾನಂದರು. ವಿವೇಕಾನಂದರು ಎಂದಿಗೂ ಅಳಿಯದ ಅನನ್ಯ ಚೇತನ ಎಂದರು.ನಗರದಲ್ಲಿ ಶಾಲಾ ಮಕ್ಕಳ ವಿಶೇಷ ಜಾಥಾ ನಡೆಯಿತು. ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಟ್ರಸ್ಟ್ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
12ಕೆಡಿಬಿಪಿ4-ದೊಡ್ಡಬಳ್ಳಾಪುರದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.