ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಯುವಕರಿಗೆ ಸ್ಫೂರ್ತಿ

KannadaprabhaNewsNetwork |  
Published : Mar 16, 2026, 01:30 AM IST
ಹಾವೇರಿ ನಗರದ ಹೊರವಲಯದ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಮನುಷ್ಯನ ಮೆದುಳು ಅಗಾಧ ಶಕ್ತಿಯ ಮೂಲ. ಸ್ವಾಮಿ ವಿವೇಕಾನಂದರ ತತ್ವಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಸಾಮರ್ಥ್ಯವನ್ನು ಗುರುತಿಸಿದರೆ ಎಂತಹ ಸಾಧನೆಯನ್ನೂ ಮಾಡಬಹುದು ಎಂದು ಗದಗ-ವಿಜಯಪುರದ ರಾಮಕೃಷ್ಣಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.

ಹಾವೇರಿ: ಮನುಷ್ಯನ ಮೆದುಳು ಅಗಾಧ ಶಕ್ತಿಯ ಮೂಲ. ಸ್ವಾಮಿ ವಿವೇಕಾನಂದರ ತತ್ವಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಸಾಮರ್ಥ್ಯವನ್ನು ಗುರುತಿಸಿದರೆ ಎಂತಹ ಸಾಧನೆಯನ್ನೂ ಮಾಡಬಹುದು ಎಂದು ಗದಗ-ವಿಜಯಪುರದ ರಾಮಕೃಷ್ಣಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.ನಗರದ ಹೊರವಲಯದ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಹಾಗೂ ಸ್ವಾಮಿ ವಿವೇಕಾನಂದರ ಸಂದೇಶ ಕುರಿತು ಅವರು ಮಾತನಾಡಿದರು. ಯಶಸ್ಸು ಪಡೆಯಲು ಗುರಿ ಸ್ಪಷ್ಟವಾಗಿರಬೇಕು. ಕೇವಲ ಪದವಿ ಪಡೆಯುವುದು ಅಥವಾ ನೌಕರಿ ಹಿಡಿಯುವುದು ಗುರಿಯಾಗಬಾರದು. ಬದಲಿಗೆ ಜ್ಞಾನವಂತನಾಗುವುದು ಪ್ರಾಥಮಿಕ ಗುರಿಯಾಗಬೇಕು ಎಂದು ಕಿವಿಮಾತು ಹೇಳಿದರು.ನಾವು ನಮ್ಮನ್ನು ಕೀಳಾಗಿ ಕಾಣಬಾರದು. ನಮ್ಮಲ್ಲಿರುವ ಶಕ್ತಿಯನ್ನು ಅರಿತಾಗ ಮಾತ್ರ ಸಾಧನೆ ಸಾಧ್ಯ. ಹಳ್ಳಿಯಿಂದ ಬಂದು ಕನ್ನಡ ಮಾಧ್ಯಮದಲ್ಲಿ ಓದಿ ಮೊದಲ ಪ್ರಯತ್ನದಲ್ಲೇ ಐಪಿಎಸ್ ಸಾಧಿಸಿದ ರವಿ ಚನ್ನಣ್ಣನವರ್ ಅವರ ಸಾಧನೆಯ ಹಿಂದೆ ವಿವೇಕಾನಂದರ ಸಾಹಿತ್ಯದ ಪ್ರಭಾವವಿದೆ ಎಂದು ಸ್ಮರಿಸಿದರು.ಐನ್‌ಸ್ಟಿನ್ ಅಂತಹ ವಿಜ್ಞಾನಿಗಳು ತಮ್ಮ ಮೆದುಳಿನ ಶೇ.25ರಷ್ಟು ಮಾತ್ರ ಬಳಸಿಕೊಂಡಿದ್ದರು. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯೂ ಅಷ್ಟೇ ಶಕ್ತಿಯನ್ನು ಹೊಂದಿರುತ್ತಾನೆ. ಆದರೆ ಅದನ್ನು ಬಳಸಿಕೊಳ್ಳುವ ರೀತಿ ಮುಖ್ಯ. ಅಬ್ರಹಾಂ ಲಿಂಕನ್, ಥಾಮಸ್ ಅಲ್ವಾ ಎಡಿಸನ್ ಮತ್ತು ಮೈಕೆಲ್ ಫ್ಯಾರಡೆ ಅಂತಹ ಮಹಾನ್ ವ್ಯಕ್ತಿಗಳು ಬಡತನ ಮತ್ತು ಕನಿಷ್ಠ ಶಿಕ್ಷಣದ ನಡುವೆಯೂ ಹೇಗೆ ಜಗತ್ತನ್ನೇ ಬೆರಗುಗೊಳಿಸಿದರು ಎಂಬ ಉದಾಹರಣೆಗಳನ್ನು ನೀಡಿ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು. ಪ್ರತಿಯೊಬ್ಬರೂ ವಿವೇಕಾನಂದರ ಸಣ್ಣ ಪುಸ್ತಕಗಳನ್ನಾದರೂ ಓದಿ ಜೀವನದಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂದರು. ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ. ರೇಣುಕಾ ಮೇಟಿ ಮಾತನಾಡಿ, ಇಂದಿನ ಯುವಜನತೆಗೆ ಸ್ವಾಮಿ ವಿವೇಕಾನಂದರ ವಿಚಾರಗಳು ಕೇವಲ ಭಾಷಣಗಳಲ್ಲ, ಅವು ಬದುಕನ್ನು ಕಟ್ಟಿಕೊಳ್ಳುವ ದಾರಿದೀಪಗಳಾಗಿವೆ ಎಂದರು. ತುಮಕೂರಿನ ಸ್ವಾಮಿ ವಿರೇಶಾನಂದ ಸರಸ್ವತಿ ಮಾತನಾಡಿ, ರಾಮಕೃಷ್ಣ ಪರಮಹಂಸರು ಯಾವುದೇ ಗ್ರಂಥಗಳನ್ನು ಬರೆಯದಿದ್ದರೂ, ತಮ್ಮ ಬದುಕನ್ನೇ ಒಂದು ಸಂದೇಶವಾಗಿ ರೂಪಿಸಿದ್ದರು. ಅವರ ತ್ರಿಕರಣ ಶುದ್ಧಿ ಇಂದಿನ ಸಮಾಜಕ್ಕೆ ಅಗತ್ಯವಾಗಿದೆ. ವಿವೇಕಾನಂದರ ಜಾಗತಿಕ ಕೊಡುಗೆ ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ಹಿರಿಮೆಯನ್ನು ಇಂಗ್ಲಿಷ್ ಭಾಷೆಯ ಮೂಲಕ ಜಗತ್ತಿಗೆ ಪರಿಚಯಿಸಿದ ವಿವೇಕಾನಂದರು, ಯುವಶಕ್ತಿಯನ್ನು ಜಾಗೃತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಹಾವೇರಿ ವಿವಿ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಯಮ ಬಳೆಸಿಕೊಳ್ಳಬೇಕು. ಸ್ಪಷ್ಟವಾದ ಗುರಿಯನ್ನು ಹೊಂದುವ ಮೂಲಕ ಯಶಸ್ಸನ್ನು ಸಾಧಿಸಬೇಕು ಎಂದರು. ಕಾರ್ಯಕ್ರಮದಲ್ಲಿ ರಾಣಿಬೆನ್ನೂರ ರಾಮಕೃಷ್ಣ ಆಶ್ರಮದ ಸ್ವಾಮೀಜಿ ಪ್ರಕಾಶಾನಂದಜಿ ಮಹಾರಾಜ, ಕಾರ್ಯಕ್ರಮದ ಸಂಯೋಜಕ ಡಾ. ಸಂತೋಷ ಆಲದಕಟ್ಟಿ, ವಿಶ್ವವಿದ್ಯಾಲಯದ ಸಿಬ್ಬಂದಿ, ಉಪನ್ಯಾಸಕರು ಇದ್ದರು. ಹಜ್ಜುಮಾ ನದಾಫ್ ನಿರೂಪಿಸಿದರು. ವಿಜಯಕುಮಾರ ಕೇಲೂರ ವಂದಿಸಿದರು. ಪೂರ್ಣಿಮಾ ಬಾರ್ಕಿ ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರುಕುಲ ಮಾದರಿ ಶಿಕ್ಷಣದ ಅಗತ್ಯ: ನಿವೃತ್ತ ಶಿಕ್ಷಕ ಮಾಸಣಗಿ
ಅಸಮಾನತೆಯ ಬದುಕಿಗೆ ವಿದಾಯ ಹೇಳಿ: ಮಹಾಂತೇಶ ಆರಾಧ್ಯಮಠ