ಐಗಳಿ: ನಮ್ಮ ಮನಸು ಶುದ್ಧೀಕರಣವಾಗಬೇಕಾದರೇ ಊರಿಗೊಬ್ಬ ಸ್ವಾಮೀಜಿ ಇರಬೇಕು. ನೀರು ಶುದ್ಧಿಯಾಗಬೇಕಾದರೇ ನೀರಿನಲ್ಲಿ ಮೀನುಗಳು ಇರಬೇಕು ಎಂದು ಕುಂದಗೋಳದ ಅಭಿನವ ಬಸವಣ್ಣಜ್ಜರು ನುಡಿದರು.
ಕನ್ನಡಪ್ರಭ ವಾರ್ತೆ ಐಗಳಿ
ನಮ್ಮ ಮನಸು ಶುದ್ಧೀಕರಣವಾಗಬೇಕಾದರೇ ಊರಿಗೊಬ್ಬ ಸ್ವಾಮೀಜಿ ಇರಬೇಕು. ನೀರು ಶುದ್ಧಿಯಾಗಬೇಕಾದರೇ ನೀರಿನಲ್ಲಿ ಮೀನುಗಳು ಇರಬೇಕು ಎಂದು ಕುಂದಗೋಳದ ಅಭಿನವ ಬಸವಣ್ಣಜ್ಜರು ನುಡಿದರು.ಸ್ಥಳೀಯ ಮಾಣಿಕ ಪ್ರಭುದೇವರ ಜಾತ್ರೆಯ ಶಿವಾನುಭವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಶ್ರೀಮಠದ ಉತ್ತರಾಧಿಕಾರಿ ಅಭಿನವ ರಾಚೋಟೇಶ್ವರ ದೇವರಿಗೆ ಶ್ರೀಮಠದ ಹೊಣೆ ಹಾಗೂ ಬೃಹತ್ ಪ್ರಮಾಣದ ಜಾನುವಾರ ಜಾತ್ರೆಯಲ್ಲಿ ಯಾವುದೇ ಕೊರತೆಯಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಜವಾಬ್ದಾರಿ ಹೊತ್ತು ಮಾಡುವ ಕಾರ್ಯ ದೊಡ್ಡದು. ಉತ್ತರ ಕರ್ನಾಟಕದಲ್ಲಿ ಜಾನುವಾರುಗಳ ಅತೀ ದೊಡ್ಡ ಜಾತ್ರೆ ಇದಾಗಿದೆ. ಜಾತ್ರಾ ಕಮಿಟಿಯವರ ಮನಸು ಪರಿಶುದ್ಧವಾಗಿದೆ. ಸಮಾನತೆ ಹಾಗೂ ಭಾವೈಕ್ಯತೆಯ ಕೊಂಡಿ ಗಟ್ಟಿಯಾಗಿದ್ದು, ಜೀವನದಲ್ಲಿ ಇನ್ನೊಬ್ಬರಿಗೆ ಕೆಡಕು ಮಾಡದಂತೆ ಮನಸನ್ನು ಗಟ್ಟಿಮಾಡಿಕೊಳ್ಳಿರಿ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ನೀಡುವ ಮೂಲಕ ಭಾರತದ ಸತ್ ಪ್ರಜೆಯನ್ನಾಗಿ ಮಾಡಿರಿ ಎಂದು ಸಲಹೆ ನೀಡಿದರು.
ಯಕ್ಕಂಚಿಯ ಗುರುಪಾದೇಶ್ವರ ಸ್ವಾಮೀಜಿ ಮಾತನಾಡಿ, ಲಿಂ.ರಾಚೋಟೇಶ್ವರ ಮಹಾಸ್ವಾಮಿಗಳು ನುಡಿದಂತೆ ಕೆಲಸ ಆಗುತ್ತಿತ್ತು. ಅವರ ತಪಸ್ಸಿನ ಬಲದಿಂದ ಅನೇಕ ಪವಾಡಗಳನ್ನು ಮಾಡಿದ್ದಾರೆ. ಉತ್ತರಾಧಿಕಾರಿ ಅಭಿನವ ರಾಚೋಟೇಶ್ವರ ದೇವರು ಇವರಿಗೆ ಮುಂದಿನ ಜಾತ್ರೆಯಲ್ಲಿ ಪಟ್ಟಾಧಿಕಾರಿ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಯಬೇಕು. ನಾಡಿನ ಎಲ್ಲ ಪೂಜ್ಯರನ್ನು ಆಹ್ವಾನಿಸಿ ಒಳ್ಳೆಯ ಕಾರ್ಯ ಮಾಡಿ ಎಂದು ಜಾತ್ರಾ ಕಮಿಟಿಗೆ ತಮ್ಮ ಮನದಾಳ ವ್ಯಕ್ತಪಡಿಸಿದರು.
ಅಭಿನವ ರಾಚೋಟೇಶ್ವರ ದೇವರು, ಮಾತೋಶ್ರೀ ಪ್ರಮೀಳಾ ತಾಯಿ, ಯುವ ನಾಯಕ ಚಿದಾನಂದ ಸವದಿ, ಅಮೋಘ ಖೋಬ್ರಿ ನ್ಯಾಯವಾದಿ, ಎಸ್.ಕೆ.ಬುಟಾಳಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶಕುಂತಲಾ.ಅ.ಪಾಟೀಲ, ಭಾರತ ಬ್ಯಾಂಕ್‌ನ ಅಧ್ಯಕ್ಷ ನೂರಅಹ್ಮದ ಡೊಂಗರಗಾಂವ, ಶಂಕರ ಪೂಜಾರಿ, ಸಿ.ಎಸ್.ನೇಮಗೌಡ, ಗ್ರಾಪಂ ಸದಸ್ಯ ಬಸವರಾಜ ಬಿರಾದಾರ, ಗಣಪತಿ ಜಗದಾಳೆ, ಪಿಡಿಒಗಳಾದ ರಾಜೇಂದ್ರ ಪಾಠಕ, ಭೀರಪ್ಪ ಕಡಗಂಚಿ ಇವರನ್ನು ಜಾತ್ರಾಕಮಿಟಿಯಿಂದ ಸನ್ಮಾನಿಸಲಾಯಿತು. ಆರ್.ಆರ್.ತೆಲಸಂಗ ಸೇರಿದಂತೆ ಅನೇಕರು ಇದ್ದರು. ಶಿಕ್ಷಕ ಕೆ.ಎಸ್.ಬಿಜ್ಜರಗಿ ಸ್ವಾಗತಿಸಿದರು, ಕೆ.ಎಸ್.ಬಿರಾದಾರ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.