ಪುಟ 3ಕ್ಕೆ ಆ್ಯಂಕರ್... ಸ್ವಾಮೀಜಿ ಕೇಸ್‌ ಕೋರ್ಟ್‌ನಲ್ಲಿದೆ, ಹಸ್ತಕ್ಷೇಪ ಮಾಡಲ್ಲ

KannadaprabhaNewsNetwork |  
Published : Apr 11, 2026, 04:00 AM IST
ಕಕಕಕಕ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸ್ವಾಮೀಜಿ ಕೇಸ್ ಕೋರ್ಟ್‌ನಲ್ಲಿದೆ. ಅದು ಏನೇನಿದೆ ಎಂಬ ಸತ್ಯ ಬಯಲಾಗಲಿ. ಅದರಲ್ಲಿ ನಾವೇನು ಹಸ್ತಕ್ಷೇಪ ಮಾಡಲ್ಲ. ಅದು ಏನೇನಿದೆ ಕ್ಲಿಯರ್‌ ಆಗಿ ತನಿಖೆಯಾಗಲಿ. ಯಾರು ತಪ್ಪಿತಸ್ಥರಿದ್ದಾರೆ ಅವರಿಗೆ ಶಿಕ್ಷೆ ಆಗಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸ್ವಾಮೀಜಿ ಕೇಸ್ ಕೋರ್ಟ್‌ನಲ್ಲಿದೆ. ಅದು ಏನೇನಿದೆ ಎಂಬ ಸತ್ಯ ಬಯಲಾಗಲಿ. ಅದರಲ್ಲಿ ನಾವೇನು ಹಸ್ತಕ್ಷೇಪ ಮಾಡಲ್ಲ. ಅದು ಏನೇನಿದೆ ಕ್ಲಿಯರ್‌ ಆಗಿ ತನಿಖೆಯಾಗಲಿ. ಯಾರು ತಪ್ಪಿತಸ್ಥರಿದ್ದಾರೆ ಅವರಿಗೆ ಶಿಕ್ಷೆ ಆಗಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

ಕೂಡಲಸಂಗಮ ಪೀಠದ ಮಾಜಿ ಸ್ವಾಮೀಜಿ ಬಸವಜಯ ಮೃತ್ಯುಂಜಯ ಶ್ರೀ ವಿರುದ್ಧ ದೂರು ದಾಖಲಾದ ವಿಚಾರದ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರಿಗೂ ಬೆಂಬಲ ಕೊಡಲ್ಲ. ಯಾರಿಗೂ ವಿರೋಧ ಮಾಡಲ್ಲ. ಸ್ವಾಮೀಜಿ ಏನೇನಾಗಿದೆ ಎಂದು ದೂರಲ್ಲಿ ಹೇಳಿದ್ದಾರೆ. ಒಮ್ಮೆ ಇಮೇಜ್ ಕ್ಲಿಯರ್‌ ಆಗಿ ಜನರ ಮುಂದೆ ಹೊರಬರಲಿ. ಅವರ ಮೇಲೆ ಇರುವ ಕಪ್ಪ ಚುಕ್ಕೆ ಹೋಗಲಿ ಎಂದು ಆಶಿಸಿದರು.2ಎ ಮೀಸಲಾತಿ ಹೋರಾಟಕ್ಕೆ ಧುಮಕಿದ್ದೇ ಇದಕ್ಕೆ ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದೆಲ್ಲ ನಡೆಯೋದೆ ರಾಜಕಾರಣದಲ್ಲಿ. ಇವರೆಲ್ಲಿ ಕೆಲ ಕಳ್ಳರು ಶಾರ್ಟ್ ದಾರಿಯಲ್ಲಿ ಹೋಗಲು ಪ್ರಯತ್ನ ಪಡುತ್ತಾರೆ. ಅದಕ್ಕೆ ಇಂತಹ ಸಿಡಿ ಮಾಡೋದು ನಡೆದಿದೆ. ಈಗ ಎಐ ಬಂದ ಮೇಲೆ ಏನು ಬೇಕಾದರೂ ಮಾಡಬಹುದಾಗಿದೆ ಎಂದರು.

ಸ್ವಾಮೀಜಿ ಮೇಲೆ ದೂರು ದಾಖಲಿಸಿದವರು ನಾಪತ್ತೆ ವಿಚಾರವಾಗಿ ಮಾತನಾಡಿದ ಅವರು, ಅಂದರೆ ಅವರ ದೂರು ಫೇಕ್ ಇರಬೇಕು. ಯಾರು ನೀವು ದೂರು ದಾಖಲಿಸಿದ್ದಿರಿ ಧೈರ್ಯವಾಗಿ ಮುಂದೆ ಬನ್ನಿ. ಇದು ಬಹಳ ದಿನಗಳ ಸುದ್ದಿ ಇತ್ತು. ಮೊದಲು ಇದು ₹11 ಕೋಟಿಗೆ ಬೇಡಿಕೆ ಇತ್ತು. ನಂತರ ₹3 ಕೋಟಿಗೆ ಬಂದಿದೆ. ಇದು ಬೆಂಗಳೂರಿನಲ್ಲಿ ಒಂದು ಜಾಲ ಇದೆ. ಎ ಟೀಮ್ ಮತ್ತು ಬಿ ಟೀಮ್ ಅಂತಾ. ಎ ಟೀಮ್ ಕಾಂಗ್ರೆಸ್‌ನಲ್ಲಿದೆ, ಬಿ ಟೀಮ್ ಬಿಜೆಪಿಯಲ್ಲಿದೆ. ಮತ್ತೆ ಅವರಿಬ್ಬರೂ ಕರ್ನಾಟಕದಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಅವರದೇ ಕಂಪ್ಯೂಟರ್ ಸೆಕ್ಷನ್‌ಗಳಿವೆ. ತಮ್ಮ ವಿರುದ್ಧ ಯಾರು ಆಗ್ತಾರೆ, ಅವರ ಸಿಡಿ ಮಾಡೋದು, ಟೆಕ್ನಾಲಜಿ ಬಳಸಿ ಕೃತಕ ಧ್ವನಿ ಮಾಡುತ್ತಾರೆ ಎಂದರು.

ಹುಬ್ಬಳ್ಳಿಯ ಲವ್ ಜಿಹಾದ್ ಕೇಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಲವ್ ಜಿಹಾದ್ ಹಿಂದೆ ಕಾಂಗ್ರೆಸ್‌ನವರಿದ್ದಾರೆ. ಕಾಂಗ್ರೆಸ್ ಮುಖಂಡರ ಸಪೋರ್ಟ್ ಇದೆ ಅವರಿಗೆ. ಅವರೆಲ್ಲ ಇಂತಹವರ ಹಿಂದೆ ಇದ್ದಾರೆ ಅಂತಾನೇ ಅವರ ಮನೆಗೆ ಹೊಡೆಯಲು ಹೋಗುತ್ತಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರ
ತ್ಯಾಜ್ಯ ವಿಲೇವಾರಿ ಘಟಕ ತೆರವಿಗೆ ಆಗ್ರಹ