ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಹಾನ್‌ ಚೇತನ

KannadaprabhaNewsNetwork |  
Published : Aug 17, 2026, 01:15 AM IST
 | Kannada Prabha

ಸಾರಾಂಶ

ಹೊರಪೇಟೆ ಕರಿಬಸವೇಶ್ವರಸ್ವಾಮಿ ಮಠದಲ್ಲಿ ಲಿಂಗೈಕ್ಯ ಜಗದ್ಗುರು ಶ್ರೀ ಚನ್ನಬಸವ ರಾಜೇಂದ್ರ ಸ್ವಾಮಿಗಳವರ ಮಾಸಿಕ ಪುಣ್ಯ ಸಂಸ್ಮರಣೋತ್ಸವ

ಕನ್ನಡಪ್ರಭ ವಾರ್ತೆ, ತುಮಕೂರು

ಸ್ವಾಮೀಜಿಗಳು ಕೇವಲ ಪೂಜೆಗೆ ಸೀಮಿತವಾಗದೆ ಸಮಾಜ ಸುಧಾರಣೆಗೆ ಕೈ ಜೋಡಿಸಬೇಕು ಎಂಬುದನ್ನು ಅಕ್ಷರಶಃ ಆಚರಣೆ ತಂದು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ತಮ್ಮದೇ ಕೊಡುಗೆ ನೀಡಿದ ಲಿಂ. ಚನ್ನಬಸವ ಶ್ರೀಗಳು ಮಹಾನ್‌ ಚೇತನ ಶಕ್ತಿಯಾಗಿ ಸದಾ ಸ್ಮರಣೀಯರಾಗಿದ್ದಾರೆ ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜು ಹೇಳಿದರು.

ಭಾನುವಾರ ನಗರದ ಹೊರಪೇಟೆ ಕರಿಬಸವೇಶ್ವರಸ್ವಾಮಿ ಮಠದಲ್ಲಿ ಲಿಂಗೈಕ್ಯ ಜಗದ್ಗುರು ಶ್ರೀ ಚನ್ನಬಸವ ರಾಜೇಂದ್ರ ಸ್ವಾಮಿಗಳವರ ಮಾಸಿಕ ಪುಣ್ಯ ಸಂಸ್ಮರಣೋತ್ಸವದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಲಿಂಗೈಕ್ಯ ಚನ್ನಬಸವ ರಾಜೇಂದ್ರ ಸ್ವಾಮೀಜಿಗಳು ಮಠದ ಪರಂಪರೆ, ಧಾರ್ಮಿಕ ಆಚರಣೆಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದರು. ಸಾಮಾಜಿಕ ಪರಿವರ್ತನೆಗಾಗಿ ಜನಜಾಗೃತಿ ಮೂಡಿಸುತ್ತಿದ್ದರು. ಕಷ್ಟವೆಂದು ಬಂದವರಿಗೆ ಸಾಂತ್ವನ ಹೇಳಿ ಸಹಾಯ ಮಾಡುತ್ತಿದ್ದರು. 99 ವರ್ಷ ಕಾಲ ಬಾಳಿದ್ದ ಸ್ವಾಮೀಜಿಗಳು ಮಠದ ಆಸ್ತಿಯನ್ನು ರಕ್ಷಣೆ ಮಾಡಿ, ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿ ತಾವೇ ಸಮಾಜದ ಆಸ್ತಿಯಾಗಿದ್ದರು. ಅವರ ಪರಂಪರೆಯನ್ನು ಅವರ ಉತ್ತರಾಧಿಕಾರಿಗಳು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಮತ್ತಿತರ ಗಣ್ಯರು ಭಾಗವಹಿಸಿ ಪೂಜ್ಯರಿಗೆ ಭಕ್ತಿ ನಮನ ಸಲ್ಲಿಸಿದರು.

ಕರಿಬಸವೇಶ್ವರಸ್ವಾಮಿ ಮಠದ ಉತ್ತರಾಧಿಕಾರಿ ಡಾ. ಕರಿಬಸವರಾಜೇಂದ್ರ ಸ್ವಾಮೀಜಿ ಮಾತನಾಡಿ, ಜಗದ್ಗುರು ಚನ್ನಬಸವ ರಾಜೇಂದ್ರ ಸ್ವಾಮೀಜಿಗಳು ಕೇವಲ ಧರ್ಮ ಜಾಗೃತಿ ಮಾಡದೆ ಸಮಾಜದ ಪಿಡುಗುಗಳ ನಿವಾರಣೆಗೆ ಪ್ರಯತ್ನ ಮಾಡಿದ್ದರು. ಮದ್ಯ ವ್ಯಸನಿಗಳ ಮನವೊಲಿಸಿ ಅವರು ಕುಡಿತದಿಂದ, ದುಶ್ಚಟಗಳಿಂದ ದೂರವಾಗಲು ಕಾರಣರಾಗಿದ್ದಾರೆ. ಇಂತಹ ಅನೇಕ ಸಮಾಜ ಸುಧಾರಣಾ ಕಾರ್ಯಗಳನ್ನು ಪೂಜ್ಯವರು ಮಾಡಿ ಎಲ್ಲಾ ಮಠಾಧೀಶರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು. ಮಠದ ಉತ್ತರಾಧಿಕಾರಿಯಾಗಿರುವ ತಾವು, ಹಿರಿಯ ಜಗದ್ಗುರುಗಳು ಆಚರಿಸಿಕೊಂಡು ಬರುತ್ತಿದ್ದ ವಿವಿಧ ಆಚರಣೆಗಳು, ಅನುಸರಿಸುತ್ತಿದ್ದ ಕಾರ್ಯಗಳನ್ನು ತಾವು ಚಾಚೂ ತಪ್ಪದೆ ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.

ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರಸ್ವಾಮೀಜಿಯವರು ಮಾಸಿಕ ಪುಣ್ಯ ಸಂಸ್ಮರಣೋತ್ಸವದ ದಿವ್ಯ ಸಾನಿಧ್ಯವಹಿಸುವರು. ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿ ಕಲ್ಯಾಣಸ್ವಾಮಿ ಮಠದ ಕಲ್ಯಾಣ ಸ್ವಾಮೀಜಿ ಪ್ರಾಸ್ತಾವಿಕ ನುಡಿ ನುಡಿದರು. ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ, ಹೆಬ್ಬೂರು ರಾಮೇನಹಳ್ಳಿ ಮಠದ ಶಿವಪಂಚಾಕ್ಷರಿ ಸ್ವಾಮೀಜಿ, ಮಾಕನಹಳ್ಳಿ ಜಂಗಮ ಮಠದ ಗಂಗಾಧರ ಸ್ವಾಮೀಜಿ, ವನಕಲ್ಲು ಮಲ್ಲೇಶ್ವರ ಮಠದ ಬಸವರಮಾನಂದ ಸ್ವಾಮೀಜಿ, ವಿಜಯಪುರದ ಮಹದೇವ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ನವಗ್ರಹ ಲಕ್ಷ್ಮೀದೇವಸ್ಥಾನದ ನಾಗೇಂದ್ರ ಸ್ವಾಮೀಜಿ ಅವರು ಚನ್ನಬಸವ ರಾಜೇಂದ್ರ ಸ್ವಾಮೀಜಿಗೆ ನುಡಿ ನಮನ ಸಲ್ಲಿಸಿದರು.

ನಗರ ವೀರಶೈವ ಸಮಾಜಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎನ್. ಬಸವಯ್ಯ, ಯುವ ಮುಖಂಡ ಅರಕೆರೆ ರವೀಶ್, ಮುಖಂಡರಾದ ಟಿ.ಸಿ. ದಯಾನಂದ್, ಟಿ.ಸಿ. ಬಸವರಾಜು, ಮನು ಹರಳೂರು, ಪ್ರತಾಪ್ ಮಲ್ಲಣ್ಣ, ಅನುಸೂಯಮ್ಮ, ಟಿ.ಎಸ್. ಗಟ್ಟಿ, ಫೋಟೋ ರೇಣುಕಾಪ್ರಸಾದ್, ಅನಿಲ್‌ಕುಮಾರ್ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಿಡ್ಲ್‌ ಕೆಳಗೆ.. ಸ್ರೀ ಮಠದ ಬಹುದಿನಗಳ ಬೇಡಿಕೆಗೆ ಸ್ಪಂದನೆ: ಆರ್‌ ಕೆ ಪಾಟೀಲ್‌
ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ: ಸ್ವಾಮೀಜಿ