ಸ್ವರಾಜ್‌ ಟ್ರ್ಯಾಕ್ಟರ್‌ ಕೂಡ ರೈತನ ಮಿತ್ರ

KannadaprabhaNewsNetwork |  
Published : Aug 12, 2024, 12:47 AM IST
ಹೊನ್ನಾಳಿ ಫೋಟೋ 11ಎಚ್.ಎಲ್.ಐ2.  ತಾಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ಸ್ವರಾಜ್ ಟ್ರ್ಯಾಕ್ಟರ್ ಶೋರೂಂ, ಕನ್ನಿಕಾ ಹಾಗೂ ವಾಸವಿ ಗೋಲ್ಡ್ ಅಕ್ಕಿ ಅನಾವರಣ ಕಾರ್ಯಕ್ರಮವನ್ನು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶೀವಾಚಾರ್ಯಶ್ರೀಗಳು ಉದ್ಘಾಡಿಸಿ ಮಾತನಾಡಿದರು.ಶಾಸಕ ಡಿ.ಜಿ.ಶಾಂತನಗೌಡ, ಇತರರು    ಇದ್ದಾರೆ.     | Kannada Prabha

ಸಾರಾಂಶ

ರೈತನ ಮಿತ್ರ ಎರೇಹುಳುವಿನಂತೆ ಇತ್ತೀಚಿನ ದಿನಗಳಲ್ಲಿ ಸ್ವರಾಜ್ ಟ್ರ್ಯಾಕ್ಟರ್ ಕೂಡ ರೈತನ ಮಿತ್ರವಾಗಿದೆ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶೀವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.

- ಗೊಲ್ಲರಹಳ್ಳಿಯಲ್ಲಿ ಸ್ವರಾಜ್ ಟ್ರ್ಯಾಕ್ಟರ್ ಶೋ ರೂಂ ಉದ್ಘಾಟಿಸಿ ಹಿರೇಕಲ್ಮಠ ಶ್ರೀ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ರೈತನ ಮಿತ್ರ ಎರೇಹುಳುವಿನಂತೆ ಇತ್ತೀಚಿನ ದಿನಗಳಲ್ಲಿ ಸ್ವರಾಜ್ ಟ್ರ್ಯಾಕ್ಟರ್ ಕೂಡ ರೈತನ ಮಿತ್ರವಾಗಿದೆ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶೀವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.

ತಾಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ಭಾನುವಾರ ಸ್ವರಾಜ್ ಟ್ರ್ಯಾಕ್ಟರ್ ಶೋ ರೂಂ, ಕನ್ನಿಕಾ ಹಾಗೂ ವಾಸವಿ ಗೋಲ್ಡ್ ಅಕ್ಕಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವರಾಜ್ ಟ್ರ್ಯಾಕ್ಟರ್‌ ಗಟ್ಟಿಮುಟ್ಟಾದ ನಿರ್ಮಾಣ ಹಾಗೂ ಇಂಧನ ಉಳಿಕೆಯ ದಕ್ಷತೆಗೆ ಹೆಸರಾಗಿದೆ. ಸಣ್ಣ ರೈತರಿಂದ ಹಿಡಿದು ದೊಡ್ಡ ಪ್ರಮಾಣದ ರೈತರವರೆಗೆ ರೈತರ ಅಗತ್ಯತೆಗಳ ಅನುಗುಣವಾಗಿ ಟ್ರ್ಯಾಕ್ಟರ್‌ಗಳಿವೆ. ರೈತರ ವ್ಯವಸಾಯಕ್ಕೆ ಬೆನ್ನೆಲುಬು ಆಗಿರುವ ಸ್ವರಾಜ್ ಟ್ರ್ಯಾಕ್ಟರ್ ಸುಲಭವಾಗಿ ಉಳುಮೆ ಹಾಗೂ ಇನ್ನಿತರ ಕೆಲಸ, ಕಾಮಗಾರಿಗಳಿಗೆ ಬಳಸಿಕೊಳ್ಳಬಹುದು ಎಂದರು.

ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಕಳೆದೆರಡು ವರ್ಷಗಳ ಹಿಂದೆಯೇ ಆಧುನಿಕ ಶೈಲಿಯಲ್ಲಿ ರೈಸ್‌ ಮಿಲ್ ಪ್ರಾರಂಭಿಸಿರುವ ವಿನಾಯಕ ಅವರು ಇದೀಗ ರೈತಮಿತ್ರ ಆಗಿರುವ ಸ್ವರಾಜ್ ಟ್ರ್ಯಾಕ್ಟರ್ ಶೋ ರೂಂ ಪ್ರಾರಂಭಿಸಿದ್ದಾರೆ. ಹೆಚ್ಚು ಲಾಭದ ಬಗ್ಗೆ ಯೋಚಿಸದೇ, ಮೊದಲ ಆದ್ಯತೆಯಾಗಿ ರೈತರಿಗೆ ಬೇಡಿಕೆಗೆ ಅನುಗುಣವಾಗಿ ಟ್ರ್ಯಾಕ್ಟರ್ ನೀಡಬೇಕು. ರೈತರು ಹೆಚ್ಚು ಲಾಭ ಗಳಿಸುವುದಕ್ಕೆ ಮಾಲೀಕ ವಿನಾಯಕ ಕೂಡ ಕಾರಣವಾಗಲಿ ಎಂದು ಆಶಿಸಿದರು.

ಸ್ವರಾಜ್ ಟ್ರ್ಯಾಕ್ಟರ್ ಶೋ ರೂಂ ಮಾಲೀಕ ವಿನಾಯಕ ಮಾತನಾಡಿ, ಸ್ವರಾಜ್ ಯಾವಾಗಲೂ ರೈತರ ಬಗ್ಗೆ ಕಾಳಜಿ ವಹಿಸಿ ಟ್ರ್ಯಾಕ್ಟರ್ ತಯಾರಿಕೆಯಲ್ಲಿ ಮುಂದಿದೆ. ಅದಕ್ಕಾಗಿಯೇ 24*7 ಗ್ರಾಹಕರ ಸೇವೆಗೆ ಸದಾ ಮುಂದಿದೆ. ಈ ಕಾರಣಕ್ಕಾಗಿ ನಾನು ಸ್ವರಾಜ್ ಟ್ರ್ಯಾಕ್ಟರ್ ಶೋ ರೂಂ ಪ್ರಾರಂಭಿಸಿದ್ದೇನೆ. ನಮ್ಮ ಕಾಳಜಿ ಯಾವಾಗಲೂ ರೈತರ ಹಿತವೇ ಆಗಿದೆ ಎಂದರು.

ಸ್ವರಾಜ್ ಟ್ರ್ಯಾಕ್ಟರ್ ಏರಿಯಾ ವ್ಯವಸ್ಥಾಪಕ ಅಮಿತ್ ವರಡಿ, ರೈತ ಮುಖಂಡ ಬಸವರಾಜಪ್ಪ, ಚನ್ನೇಶ್‌ ಕೋರಿ, ಟಿ.ಜಿ.ಮಲ್ಲೇಶಪ್ಪ, ಬೆನಕನಹಳ್ಳಿ ವಿಭಾಗ ವ್ಯವಸ್ಥಾಪಕ ಸುನೀಲ್, ಸಂಗಮೇಶ್ ಹಾಗೂ ಇತರರು ಇದ್ದರು.

- - -

ಕೋಟ್‌ ಹೊನ್ನಾಳಿ ತಾಲೂಕಿನಲ್ಲಿ ಹೊಸದಾಗಿ ಸ್ವರಾಜ್ ಟ್ರ್ಯಾಕ್ಟರ್ ಶೋ ರೂಂ ಆರಂಭಿಸಿರುವ ಮಾಲೀಕ ವಿನಾಯಕ ಮೂಲತಃ ರೈತರ ಜತೆ ಒಡನಾಡಿಯಾಗಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ, ರೈತರ ಸಮಸ್ಯೆ ಅವರಿಗೆ ಈ ಮೊದಲೇ ಗೊತ್ತಿದೆ. ಆದ್ದರಿಂದ ರೈತರಿಗೆ ಬೇಕಾಗಿರುವ ಟ್ರ್ಯಾಕ್ಟರ್ ಕೊಡುತ್ತಾರೆ ಎಂಬ ವಿಶ್ವಾಸ ನಮಗಿದೆ

- ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಹಿರೇಕಲ್ಮಠ

- - - -11ಎಚ್.ಎಲ್.ಐ2:

ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಸ್ವರಾಜ್ ಟ್ರ್ಯಾಕ್ಟರ್ ಶೋ ರೂಂ, ಕನ್ನಿಕಾ ಹಾಗೂ ವಾಸವಿ ಗೋಲ್ಡ್ ಅಕ್ಕಿ ಅನಾವರಣ ಕಾರ್ಯಕ್ರಮವನ್ನು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಉದ್ಘಾಟಿಸಿ ಮಾತನಾಡಿದರು. ಶಾಸಕ ಡಿ.ಜಿ.ಶಾಂತನಗೌಡ ಇನ್ನಿತರ ಗಣ್ಯರು ಇದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ