ರಾಮನಗರ: ಕ್ರೀಡಾಪಟುಗಳು ಟೇಕ್ವಾಂಡೋ ಕ್ರೀಡೆ ಅಭ್ಯಾಸದಲ್ಲಿ ಸಾಕಷ್ಟು ಸಮಯ ವ್ಯರ್ಥ ಮಾಡಿದರೂ ಅದು ಇತರೆ ಕ್ರೀಡೆಗಳಿಗೆ ಸಹಕಾರಿಯಾಗಲಿದೆ. ಆದ್ದರಿಂದ ಕ್ರೀಡಾ ಪಟುಗಳು ಇತರೆ ಕ್ರೀಡೆಗಳ ಕಡೆಯೂ ಗಮನ ಹರಿಸುವುದರ ಜೊತೆಗೆ ವಿದ್ಯಾಭ್ಯಾಸದ ಕಡೆಗೂ ಹೆಚ್ಚಿನ ಒತ್ತು ನೀಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ಹೇಳಿದರು.
ಇಂತಹ ಕ್ರೀಡೆಗಳಿಂದ ಕ್ರೀಡಾಪಟುಗಳು ದುರಭ್ಯಾಸಗಳಿಂದ ದೂರವಿಬಹುದು. ರಾಜ್ಯ ಸರ್ಕಾರ ಸಹಾ ಕ್ರೀಡೆಗಳಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದು ಪದಕ ಗಳಿಸಿದ ಕ್ರೀಡಾಪಟುಗಳಿಗೆ ಶೇ. 4ರಷ್ಟು ಮೀಸಲಾತಿ ನೀಡುತ್ತಿದೆ. ಕ್ರೀಡಾಪಟುಗಳಲ್ಲಿ ಹೆಚ್ಚಿನ ಕ್ರೀಡಾಭ್ಯಾಸಕ್ಕಾಗಿ ನಗರದಲ್ಲಿ ಯಾವುದೇ ಸ್ಥಳವಿಲ್ಲವಾದ್ದರಿಂದ ನಗರಸಭಾ ಪೌರಾಯುಕ್ತರಲ್ಲಿ ಸಂಘದ ವತಿಯಿಂದ ಉಚಿತ ಸ್ಥಳಾವಕಾಶ ದೊರಕಿಸುವಂತೆ ಮನವಿ ಮಾಡಲಾಗುವುದು ಎಂದು ಸತೀಶ್ ತಿಳಿಸಿದರು.
ರಾಮನಗರ ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ನೀಲಕಂಠಯ್ಯ ಮಾತನಾಡಿ, ಏಷ್ಯಾ ಮತ್ತು ಒಲಂಪಿಕ್ಸ್ ನಂತಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕ್ರೀಡೆಗಳಲ್ಲಿ ಟೇಕ್ವಾಂಡೋ ಪ್ರಾಶಸ್ತ್ರ ನೀಡುವಂತಾಗಬೇಕು. ಆಗ ಮಾತ್ರ ಟೆಕ್ವಾಂಡೋ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತವು ಟೇಂಕ್ವಾಡೋ ಕ್ರೀಡೆಯಲ್ಲಿ ಪ್ರಶ್ನೆಗಳಿಸುವ ಕಾಲ ದೂರವಿಲ್ಲ. ಕ್ರೀಡಾಪಟುಗಳು ತಮ್ಮ ಕ್ರೀಡಾಭ್ಯಾಸದ ಜೊತೆ ಒದಿನ ಕಡೆಗೂ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.ಮುಖಂಡ ಬೈರೇಗೌಡ ಮಾತನಾಡಿ, ಟೆಕ್ವಾಂಡೋ ಕ್ರೀಡೆಯಲ್ಲಿ ರಾಮನಗರದ ಕ್ರೀಡಾಪಟುಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತಿರುವುದು ಶ್ಲಾಘನೀಯ. ಮಕ್ಕಳಲ್ಲಿರುವ ಇಂತಹ ಕ್ರೀಡೆಗಳಿಗೆ ಪೋಷಕರು ಪ್ರೋತ್ಸಾಹಿಸಬೇಕು. ಪ್ರಸ್ತುತದಲ್ಲಿ ರಾಮನಗರ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಕ್ರೀಡಾಪಟುಗಳಿಗೆ ಆಧ್ಯಾಸಿಸಲು ಸ್ಥಳವಕಾಶ ನೀಡಿರುವುದಕ್ಕೆ ಕಾಲೇಜಿನ ಆಡಳಿತ ಮಂಡಳಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಜಹೀರ್ ಹಸನ್, ಪರ್ಷ ಡೆವಲಪರ್ಸ್ ಮಾಲೀಕರಾದ ಹರ್ಷ ಅವರು ಮಾತನಾಡಿದರು. ರಾಮನಗರ ಜಿಲ್ಲಾ ಟೇಕ್ವಾಂಡೋ ಸಂಸ್ಥೆ ಅಧ್ಯಕ್ಷರಾದ ಕೃಷ್ಣಮೂರ್ತಿ, ಕಾರ್ಯದರ್ಶಿ ಮತ್ತು ವ್ಯವಸ್ಥಾಪಕರಾದ ಎಂ.ಗೋವಿಂದಾ ಉಪಸ್ಥಿತರಿದ್ದರು.11ಕೆಆರ್ ಎಂಎನ್ 6.ಜೆಪಿಜಿ
ಪದಕ ವಿಜೇತ ಕ್ರೀಡಾಪಟುಗಳಿಗೆ ಪದಕ ವಿತರಣೆ ಮಾಡಿ ಸನ್ಮಾನಿಸಲಾಯಿತು.