ನದಿ ಸಂರಕ್ಷಣೆಗೆ ನಿರಂತರ ಹೋರಾಟಕ್ಕೆ ಸ್ವರ್ಣವಲ್ಲೀ ಶ್ರೀಗಳ ಕರೆ

KannadaprabhaNewsNetwork |  
Published : Nov 03, 2026, 02:15 AM IST
ಸ್ವರ್ಣವಲ್ಲೀ ಶ್ರೀಗಳು ಗಂಗಾರತಿ ಹಾಗೂ ನದಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ನದಿ ನೀರನ್ನು ಬೇರೆಡೆಗೆ ಕೊಂಡೊಯ್ಯುವ ಯೋಜನೆಗಳ ಕುರಿತು ಆತಂಕ ವ್ಯಕ್ತಪಡಿಸಿದ ಸ್ವರ್ಣವಲ್ಲೀ ಶ್ರೀಗಳು, ನೀರಿಲ್ಲದ ನದಿಯಿಂದ ನೀರನ್ನು ಹೇಗೆ ಒಯ್ಯಲು ಸಾಧ್ಯ? ಸರ್ಕಾರ ನೀರಿಲ್ಲದ ನದಿಗಳಿಂದ ನೀರನ್ನು ಕಿತ್ತುಕೊಳ್ಳಲು ಮುಂದಾಗುವುದು ಸರಿಯಲ್ಲ ಎಂದರು.

ಶಿರಸಿ: ನದಿಗಳ ಸಂರಕ್ಷಣೆ ಹಾಗೂ ಅವುಗಳ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ನದಿ ಪೂಜೆ ಮತ್ತು ಗಂಗಾರತಿ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ತಿಳಿಸಿದರು.ಗಂಗಾಷ್ಟಮಿ ಹಿನ್ನೆಲೆಯಲ್ಲಿ ಸೋಮವಾರ ಶಾಲ್ಮಲಾ ನದಿಯ ದೇವರಹೊಳೆಯಲ್ಲಿ ಗಂಗಾರತಿ ಹಾಗೂ ನದಿ ಪೂಜೆ ನೆರವೇರಿಸಿ, ಬಳಿಕ ದೇವರಹೊಳೆಯ ಭುವನೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಗಂಗಾಷ್ಟಮಿಯಿಂದ ಕನಿಷ್ಠ ಒಂದು ವಾರದವರೆಗೆ ಬೇಡ್ತಿ- ಗಂಗಾವಳಿ ಹಾಗೂ ಅಘನಾಶಿನಿ ನದಿಗಳ ಉಪನದಿಗಳ ದಡಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ನಡೆಸುವ ಅಗತ್ಯವಿದೆ ಎಂದರು.ನದಿ ನೀರನ್ನು ಬೇರೆಡೆಗೆ ಕೊಂಡೊಯ್ಯುವ ಯೋಜನೆಗಳ ಕುರಿತು ಆತಂಕ ವ್ಯಕ್ತಪಡಿಸಿದ ಶ್ರೀಗಳು, ನೀರಿಲ್ಲದ ನದಿಯಿಂದ ನೀರನ್ನು ಹೇಗೆ ಒಯ್ಯಲು ಸಾಧ್ಯ? ಸರ್ಕಾರ ನೀರಿಲ್ಲದ ನದಿಗಳಿಂದ ನೀರನ್ನು ಕಿತ್ತುಕೊಳ್ಳಲು ಮುಂದಾಗುವುದು ಸರಿಯಲ್ಲ ಎಂದರು.ಈ ವೇಳೆ ಬೇಡ್ತಿ- ಅಘನಾಶಿನಿ ಸಂರಕ್ಷಣಾ ಸಮಿತಿಯ ಅನಂತ ಅಶೀಸರ ಅವರು ನದಿ ಸಂರಕ್ಷಣೆಯ ಹೋರಾಟ ಹಾಗೂ ಯಲ್ಲಾಪುರ ರಸ್ತೆ ತಡೆ ಕುರಿತು ಮಾಹಿತಿ ನೀಡಿದರು. ಅನಂತ ಭಟ್ಟ ಹುಳಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಠದ ಮಾಜಿ ಅಧ್ಯಕ್ಷ ವಿ.ಎನ್. ಹೆಗಡೆ, ಭುವನೇಶ್ವರಿ ದೇವಸ್ಥಾನದ ಪ್ರಮುಖ ಡಾ. ಮಧುಕೇಶ್ವರ ಹೆಗಡೆ ಕಲ್ಲಳ್ಳಿ, ಆರ್.ಎಸ್. ಹೆಗಡೆ ಭೈರುಂಬೆ, ಎಂ.ಎಸ್. ಹೆಗಡೆ ಕಿಬ್ನಳ್ಳಿ, ಗುರುಪಾದ ಹೆಗಡೆ, ಗಡೀಕೈ ಮಹಾಬಲೇಶ್ವರ ಹೆಗಡೆ, ಸುರೇಶ ಹಕ್ಕಿಮನೆ, ರತ್ನಾಕರ ಬಾಡಲಕೊಪ್ಪ, ರಾಮಚಂದ್ರ ಹೆಗಡೆ, ವಿನೋದಾ ಭಟ್ಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.ನದಿ ಪೂಜೆಗೆ ಬರಿಗಾಲ ನಡಿಗೆ!ಇದಕ್ಕೂ ಮುನ್ನ ಶಾಲ್ಮಲಾ ನದಿಯ ದಡದಲ್ಲಿರುವ ಶಿಲೆ ಹಾಗೂ ಮಣ್ಣಿನ ಹಾದಿಯಲ್ಲಿ ಶ್ರೀಗಳು ಬರಿಗಾಲಿನಲ್ಲಿ ನಡೆದು ನದಿಯ ಬಳಿಗೆ ತೆರಳಿದರು. ಬಳಿಕ ಈಶ್ವರಲಿಂಗಕ್ಕೆ ಪೂಜೆ ಸಲ್ಲಿಸಿ, ನದಿ ಪೂಜೆ ನೆರವೇರಿಸಿದರು. ಗಂಗಾರತಿ ನಡೆಸಿ, ನದಿಗೆ ಬಾಗಿನ ಅರ್ಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ