ಮರ, ಗಿಡ, ಪರಿಸರದ ಸಂರಕ್ಷಣೆ ನಮ್ಮೆಲ್ಲರ ಜವಾಬ್ಧಾರಿ: ಪ್ರೊ.ಧರ್ಮ

KannadaprabhaNewsNetwork |  
Published : Sep 25, 2026, 02:45 AM IST
ಅಧ್ಯಕ್ಷ | Kannada Prabha

ಸಾರಾಂಶ

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಕ್ಯಾಂಪಸ್ ನಲ್ಲಿರುವ ಸಸ್ಯೋದ್ಯಾನಗಳ ಸಂರಕ್ಷಣೆಯ ಉದ್ದೇಶದಿಂದ ಮಂಗಳೂರು ವಿವಿ ಹಾಗೂ ಮಂಗಳೂರಿನ ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ನಡುವೆ ನಡೆದ ಒಪ್ಪಂದಕ್ಕೆ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹಾಗೂ ಸ್ವಸ್ತಿಕ ಬ್ಯುಸಿನೆಸ್ ಸ್ಕೂಲ್ ನ ಅಧ್ಯಕ್ಷರಾದ ಡಾ.ರಾಘವೇಂದ್ರ ಹೊಳ್ಳ ಅವರು ಸಹಿ

ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಕ್ಯಾಂಪಸ್ ನಲ್ಲಿರುವ ಸಸ್ಯೋದ್ಯಾನಗಳ ಸಂರಕ್ಷಣೆಯ ಉದ್ದೇಶದಿಂದ ಮಂಗಳೂರು ವಿವಿ ಹಾಗೂ ಮಂಗಳೂರಿನ ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ನಡುವೆ ನಡೆದ ಒಪ್ಪಂದಕ್ಕೆ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹಾಗೂ ಸ್ವಸ್ತಿಕ ಬ್ಯುಸಿನೆಸ್ ಸ್ಕೂಲ್ ನ ಅಧ್ಯಕ್ಷರಾದ ಡಾ.ರಾಘವೇಂದ್ರ ಹೊಳ್ಳ ಅವರು ಸಹಿ ಹಾಕಿದರು.ಈ ಸಂದರ್ಭ ಮಾತನಾಡಿದ ಕುಲಪತಿ ಪ್ರೊ.ಪಿ.ಎಲ್. ಧರ್ಮ ಅವರು, ಮರ, ಗಿಡ, ಪರಿಸರದ ಸಂರಕ್ಷಣೆ ನಮ್ಮೆಲ್ಲರ ಜವಬ್ಧಾರಿಯಾಗಿದೆ. ಮುಖ್ಯವಾಗಿ ಭೂಮಿಯ, ಪರಿಸರದ ಆರಾಧಕರಾಗಿರುವ ನಾವು ಮುಂದಿನ ಪೀಳಿಗೆಗೂ ಈ ಪ್ರಕೃತಿ ಉಳಿಸಿ ಬೆಳೆಸಿ ಕೊಡುಗೆ ನೀಡಬೇಕಾಗಿದೆ. ಸ್ವಸ್ತಿಕ ಶಿಕ್ಷಣ ಸಂಸ್ಥೆಯವರು ಕ್ಯಾಂಪಸ್ ನಲ್ಲಿರುವ ಎರಡು ಸಸ್ಯೊದ್ಯಾನಗಳ ಸಂರಕ್ಷಣೆಗಾಗಿ ಸಾಮಾಜಿಕ ಕಳಕಳಿಯೊಂದಿಗೆ ಪಣತೊಟ್ಟಿರುವುದು ಮಾದರಿಯಾಗಿದೆ ಎಂದರು.ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ನ ಅಧ್ಯಕ್ಷ ಡಾ.ರಾಘವೇಂದ್ರ ಹೊಳ್ಳ ಅವರು ಮಾತನಾಡಿ,‌ ಮರ,ಗಿಡ, ಪ್ರಕೃತಿ‌ ಇದ್ದರೆ ಮಾತ್ರ ನಮ್ಮ ಬದುಕು. ಮುಖ್ಯವಾಗಿ ವಿದ್ಯಾರ್ಥಿ ಸಮುದಾಯದಲ್ಲಿ ಪರಿಸರ ಕಾಳಜಿ ಬೆಳೆಯಬೇಕು ಎಂದರು.‌

ವಿವಿ ಪರೀಕ್ಷಾಂಗ ಕುಲಸಚಿವರಾದ ಪ್ರೊ.ದೇವೇಂದ್ರಪ್ಪ, ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಪ್ರೊ.ರಾಜು ಕೃಷ್ಣ ಚಲ್ಲನ್ನವರ್, ಪ್ರಾಧ್ಯಾಪಕರಾದ ಡಾ.ಯು.ರಮೇಶ್, ಸ್ವಸ್ತಿಕ‌ ಕಾಲೇಜಿನ ಉಪಪ್ರಾಂಶುಪಾಲೆ ಡಾ.ವಿದ್ಯಾಲಕ್ಷ್ಮೀ , ಇಂಜಿನಿಯರಿಂಗ್ ವಿಭಾಗದ ಬಸವಣ್ಣಪ್ಪ, ಹರೀಶ್ ಪೂಜಾರಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಟರ್ ಮೆಟ್ರೋ ಯೋಜನೆಗೆ ವೇಗ: ೧೧ ನಿಲ್ದಾಣಗಳು ಅಂತಿಮ
ಕಿಲ್ಲೆ ಮೈದಾನ ಸಾರ್ವಜನಿಕ ಗಣೇಶೋತ್ಸವ ಶೋಭಾಯಾತ್ರೆ