ಚಾ.ನಗರದಲ್ಲಿಯೂ ರಂಗಾಯಣ ಸ್ಥಾಪನೆ ಅಗತ್ಯ: ಅಸ್ಗರ್‌

KannadaprabhaNewsNetwork |  
Published : Jun 26, 2026, 01:30 AM IST
ಮಹಮ್ಮದ್ ಅಸ್ಗರ್ | Kannada Prabha

ಸಾರಾಂಶ

ರಾಜ್ಯದ ವಿವಿಧ ಕಡೆ ರಂಗಾಯಣ ಇರುವಂತೆಯೇ ಜಾನಪದ ಕಲೆಗಳ ತವರೂರು ಎನಿಸಿದ ಚಾಮರಾಜನಗರದಲ್ಲೂ ರಂಗಾಯಣ ಸ್ಥಾಪಿಸಬೇಕು ಎಂದು ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್‌ ಒತ್ತಾಯಿಸಿದರು.

ನಗರದ ಡಾ. ರಾಜಕುಮಾರ್‌ ರಂಗಮಂದಿರದಲ್ಲಿ ಕುಂಞ ಅವರ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನದ ವೇಳೆ ಒತ್ತಾಯ

ರಂಗಕಲೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯದ ವಿವಿಧ ಕಡೆ ರಂಗಾಯಣ ಇರುವಂತೆಯೇ ಜಾನಪದ ಕಲೆಗಳ ತವರೂರು ಎನಿಸಿದ ಚಾಮರಾಜನಗರದಲ್ಲೂ ರಂಗಾಯಣ ಸ್ಥಾಪಿಸಬೇಕು ಎಂದು ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್‌ ಒತ್ತಾಯಿಸಿದರು.

ನಗರದ ಡಾ. ರಾಜಕುಮಾರ್‌ ರಂಗಮಂದಿರದಲ್ಲಿ, ರಂಗಾಯಣ ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗವಾಹಿನಿ, ರಾಜ್ಯ ರೈತ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಚೇತನ ಕಲಾವಾಹಿನಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೊಳುವಾರು ಮಹಮ್ಮದ್ ಕುಂಞ ಅವರ ಕಾದಂಬರಿ ಆಧರಿತ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಚಾಮರಾಜನಗರ ಸಾಂಸ್ಕೃತಿಕವಾಗಿ, ಜಾನಪದ ದೃಷ್ಟಿಯಿಂದ ಶ್ರೀಮಂತ ಜಿಲ್ಲೆ. ಇದು ವರನಟ ಡಾ. ರಾಜಕುಮಾರ್‌ ಅವರ ತವರು ಜಿಲ್ಲೆ. ಇಲ್ಲಿ ರಂಗ ಕಲೆಗೆ ಹೆಚ್ಚಿನ ಪ್ರೋತ್ಸಾಹ ದೊರಕಬೇಕಾಗಿದೆ. ಈ ದೃಷ್ಟಿಯಿಂದ ಚಾಮರಾಜನಗರದಲ್ಲೂ ರಂಗಾಯಣ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ರಂಗವಾಹಿನಿ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಮಾತನಾಡಿ, ಸ್ವಾತಂತ್ರ್ಯದ ಓಟ ಅತ್ಯುತ್ತಮ ನಾಟಕವಾಗಿದ್ದು, ಅದನ್ನು ಚಾಮರಾಜನಗರದಲ್ಲೂ ಪ್ರದರ್ಶಿಸುವ ಮೂಲಕ ನಮ್ಮ ರಂಗಾಸಕ್ತರಿಗೂ ನಾಟಕ ತಲುಪಿಸಬೇಕೆಂಬ ಉದ್ದೇಶ ನಮ್ಮದಾಗಿತ್ತು. ನಿರ್ದೇಶಕ ನಟರಾಜ್ ಹೊನ್ನವಳ್ಳಿ ಅವರಿಗೆ ಅಭಿನಂದನೆಗಳು ಎಂದರು.

ರಂಗಕರ್ಮಿ ಕೆ. ವೆಂಕಟರಾಜು, ರೈತ ಮುಖಂಡ ಹೊನ್ನೂರು ಪ್ರಕಾಶ್, ಶಿಕ್ಷಕರ ಸಂಘದ ಸಿ.ಕೆ. ರಾಮಸ್ವಾಮಿ, ಕಲೆ ನಟರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮಂತ್ರಮುಗ್ಧ ಪ್ರೇಕ್ಷಕರು:

ಮೂರೂವರೆ ಗಂಟೆ ಅವಧಿಯ ಸ್ವಾತಂತ್ರದ ಓಟ ನಾಟಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಭಾರತ ಮತ್ತು ಪಾಕಿಸ್ತಾನ ವಿಭಜನೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ಲಾಹೋರ್‌ನಿಂದ ಭಾರತಕ್ಕೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬರುವ ‘ಚಾಂದ್ ಆಲಿ’ ಎದುರಾಗುವ ಹಲವಾರು ತೊಡರುಗಳನ್ನು ಮೆಟ್ಟಿ ಮುತ್ತಾಪ್ಪಾಡಿ ಎಂಬ ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳುವ ಕಥನ ನಾಟಕ ವಸ್ತು.

--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಗರಪೇಟೆ ಗುಡ್ಡದಲ್ಲಿ ಮಣ್ಣು ಗಣಿಗಾರಿಕೆ ನಿಲ್ಲಿಸಿ
ಹಿರೀಕಾಟಿ: ಒತ್ತುವರಿದಾರರಿಗೆ ಜಾಗ ತೆರವು ಮಾಡಲು ಖಡಕ್‌ ಆದೇಶ, 7 ದಿನದ ಗಡುವು