ತರೀಕೆರೆ ಪೊಲೀಸರಿಂದ 24 ಘಂಟೆಯೊಳಗೆ ₹8.76 ಲಕ್ಷ ಮೌಲ್ಯದ ಚಿನ್ನಾಭರಣ, ₹8.90 ಲಕ್ಷ ನಗದು ವಶ
ಮನೆ ಮೇಲ್ಚಾವಣಿಗೆ ಹಾಕಿದ್ದ ಶೀಟನ್ನು ತೆಗೆದು ಒಳಗೆ ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಸಿದ ತರೀಕೆರೆ ಪೊಲೀಸರು ಆತನಿಂದ ₹8.76 ಲಕ್ಷ ಮೌಲ್ಯದ ಚಿನ್ನಾಭರಣ, ₹8.90 ಲಕ್ಷ ನಗದು ವಶ ಪಡಿಸಿಕೊಂಡಿದ್ದಾರೆ.
ಕೋಡಿಕ್ಯಾಂಪ್ ನಿವಾಸಿ ಸಯ್ಯದ್ ಸಾಧಿಕ್ ಬಂಧಿತ ಆರೋಪಿ.ಪಟ್ಟಣದ ಕೋಡಿಕ್ಯಾಂಪ್ ನ 9ನೇ ಕ್ರಾಸ್ ನಿವಾಸಿ ತವಕ್ಕಲ್ ಮುಸ್ತಾನ್ ಅವರ ಮನೆಗೆ ಶನಿವಾರ ಸಂಜೆ 4.30 - 8 ಗಂಟೆ ಸಮಯದಲ್ಲಿ ನುಗ್ಗಿದ್ದ ಸಯ್ಯದ್ ಸಾಧಿಕ್ ಮನೆಯಲ್ಲಿದ್ದ 73.5 ಗ್ರಾಂ ತೂಕದ ಚಿನ್ನಾಭರಣ ಹಾಗೂ ₹ 8,90,000 ನಗದು ಕಳ್ಳತನ ಮಾಡಿದ್ದನು. ಮನೆಯಲ್ಲಿ ಕಳ್ಳತನ ನಡೆಸಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ತವಕ್ಕಲ್ ಮಸ್ತಾನ್ ನೀಡಿದ ದೂರಿನ ಮೆರೆಗೆ ದೂರು ದಾಖಲಿಸಿಕೊಂಡು ಪ್ರಕರಣ ಭೇಧಿಸಿದ್ದಾರೆ.
ಆರೋಪಿಯಿಂದ ₹8.76 ಲಕ್ಷ ಮೌಲ್ಯದ ಚಿನ್ನಾಭರಣ, ₹8.90 ಲಕ್ಷ ನಗದು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.ಈ ವಿಶೇಷ ಕಾರ್ಯಾಚರಣೆ ಪೋಲೀಸ್ ಅಧೀಕ್ಷಕರು ವಿಕ್ರಮ್ ಅಮಟೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯ ಕುಮಾರ್, ಡಿವೈಎಸ್.ಪಿ. ಪರಶುರಾಮಪ್ಪ ಮಾರ್ಗದರ್ಶನದಲ್ಲಿ ತರೀಕೆರೆ ಠಾಣೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ, ಪಿಎಸ್.ಐ ನಾಗೇಂದ್ರ ನಾಯ್ಕ್, ಮಂಜುನಾಥ್ ಮನ್ನಂಗಿ , ದೇವೇಂದ್ರ ರಾಥೋಡ್, ಎಎಸ್.ಐ ರವಿ, ಎಚ್.ಸಿ. ಪ್ರಕಾಶ್, ಸಿಬ್ಬಂದಿ ರುದ್ರೇಶ್, ರಿಯಾಜ್, ಧನಂಜಯಸ್ವಾಮಿ, ಮಧು, ಕಾಂತರಾಜು, ರಾಜೇಶ ಹಾಗೂ ಎ.ಎಚ್.ಸಿ. ಶ್ರೀನಿವಾಸ ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಯಶಸ್ವಿ ಕಾರ್ಯಾಚರಣೆಗೆ ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕರು ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.-
23ಕೆಟಿಆರ್.ಕೆ. 1ಃತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ನಿವಾಸಿ ತವಕ್ಕಲ್ ಮುಸ್ತಾನ್ ಎಂಬುವರ ಮನೆಯಲ್ಲಿ ಕಳುವಾಗಿದ್ದ 73.5 ಗ್ರಾಂ ತೂಕದ ಚಿನ್ನಾಭರಣ ಹಾಗೂ ₹8.90 ಲಕ್ಷ ನಗದು ಪತ್ತೆ ಮಾಡಿದ ತರೀಕೆರೆ ಪೊಲೀಸರ ತಂಡ.