ಕನ್ನಡಪ್ರಭ ವಾರ್ತೆ ರಾಯಚೂರು
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಶಕಗಳ ಹಿಂದೆ ಯುಪಿಎ ಸರ್ಕಾರ ರೂಪಿಸಿದ ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಸಂಪೂರ್ಣವಾಗಿ ಮುಗಿಸುವ ದುರುದ್ದೇಶದಿಂದಲೆಯೇ ಅನಗತ್ಯ, ಅಸಾಧ್ಯತೆ ನಿಯಮಗಳನ್ನು ರೂಪಿಸಿ ಬಿವಿ ಜಿರಾಮ್ ಜಿ ಕಾಯ್ದೆಯನ್ನು ಮಾಡಿದ್ದು ಇದು ಕೇಂದ್ರದ ಮತ್ತೊಂದು ಅಕ್ರಮ ಯೋಜನೆಯಾಗಿದೆ. ಹೆಸರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವ, ಉದ್ಯೋಗ ಕಸಿದುಕೊಳ್ಳುವುದು, ಪಂಚಾಯ್ತಿಯ ಅಧಿಕಾರವನ್ನು ಕಿತ್ತುಕೊಳ್ಳುವುದು ಸೇರಿ ಹಲವಾರು ಅನ್ಯಾಯಗಳನ್ನು ಮಾಡಿದೆ ಎಂದು ದೂರಿದರು.
ಕೇಂದ್ರ ಸರ್ಕಾರವು ಉಗ್ರ ಪ್ರಮಾಣದ ಬಲಪಂಥೀಯ ಧೋರಣೆಗಳನ್ನು ಅನುಸರಿಸುತ್ತಿದೆ, ಖಾಸಗಿ ಕಂಪನಿಗಳಿಗೆ ಸಾವಿರಾರು ಕೋಟಿ ಸಬ್ಸಿಡಿ ಘೋಷಣೆ ಮಾಡಿರುವ ಕೇಂದ್ರವು ನೋಟ್ ಬಂದಿ, ಮನಿ ಲ್ಯಾಂಡರಿಂಗ್, ಡಿಪಿಡಿಐ ಕಾಯ್ದೆ, ಆರ್‌ಟಿಐ ಪಾರದರ್ಶಕತೆಗೆ ಧಕ್ಕೆ ತರುವಂತಹ ಕ್ರಮಗಳು ನಿಜಕ್ಕೂ ಖಂಡನೀಯ ವಿಷಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ರವಿ ಬೋಸರಾಜು, ಮೊಹಮ್ಮದ ಶಾಲಂ, ಜಯಣ್ಣ,ಕೆ.ಶಾಂತಪ್ಪ ಇದ್ದರು.