)
- ಹಾಸ್ಟೆಲ್ ಮಕ್ಕಳಿಗೆ ಪ್ರವೇಶ, ಊಟ, ವಸತಿಗೆ ತೊಂದರೆ ಆಗದಿರಲಿ: ಸಚಿವ - - -
ದಾವಣಗೆರೆ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಪದೇಪದೇ ದುರಸ್ಥಿತಿಗೊಳಗಾಗುತ್ತಿದ್ದು, ಕಳಪೆ ಗುಣಮಟ್ಟದ ಪರಿಕರಗಳನ್ನು ಅಳವಡಿಸಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ. ಇಂತಹ ಪರಿಕರಗಳ ಗುಣಮಟ್ಟದ ಬಗ್ಗೆ ಲ್ಯಾಬ್‌ನಲ್ಲಿ ಪರೀಕ್ಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೂಚಿಸಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ 791 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಅನೇಕ ಕಡೆ ಖಾಸಗಿಯವರಿಗೆ ನಿರ್ವಹಣೆಗಾಗಿ ಗುತ್ತಿಗೆಗೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಇಂತಹ ದೂರು ಮರುಕಳಿಸಬಾರದು ಎಂದರು.ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಶುದ್ಧ ನೀರಿನ ಘಟಕಗಳು ಪದೇಪದೇ ಹಾಳಾಗುತ್ತಿವೆ. ಹೀಗೆ ದುರಸ್ತಿಗೆ ಬಂದಾಗ ಕಳಪೆ ಪರಿಕರ ಅಳವಡಿಸಿದ್ದರಿಂದಲೇ ಪದೇಪದೇ ಹಾಳಾಗಿ, ಜನರಿಗೆ ತೊಂದರೆ ಆಗುತ್ತಿದೆ ಎಂದರು. ಆಗ ಸಚಿವ ಎಸ್ಸೆಸ್ಸೆಂ, ಚನ್ನಗಿರಿ ತಾಲೂಕಿನಲ್ಲಿ ಉತ್ತಮವಾಗಿದ್ದು, ಅದಕ್ಕಾಗಿ ಈಗ ನಿರ್ವಹಿಸುತ್ತಿರುವ ಏಜೆನ್ಸಿ ಅಳವಡಿಸಿದ ಪರಿಕರಿಗಳ ಬಗ್ಗೆ ಲ್ಯಾಬ್‌ನಲ್ಲಿ ಪರೀಕ್ಷಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ಹಾಸ್ಟೆಲ್ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ಅನೇಕ ಶಿಫಾರಸಿನೊಂದಿಗೆ ಆಗಮಿಸುತ್ತಿದ್ದು, ಯಾವುದೇ ಅರ್ಹ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶದಿಂದ ವಂಚಿತವಾಗದಂತೆ ಬಿಸಿಎಂ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಶಿಶು ಮತ್ತು ತಾಯಿ ಮರಣ ಪ್ರಮಾಣ ಶೂನ್ಯಕ್ಕೆ ತಗ್ಗಿಸಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲಿ. ನಿಮ್ಮ ನಿರ್ಲಕ್ಷ್ಯವಾದಾಗ ತಾಯಿ, ಮಗುವಿನ ಮರಣ ಪ್ರಕರಣ ನಡೆಯುತ್ತವೆ. ಯಾವುದೇ ಕಾರಣಕ್ಕೂ ತಾಯಿ, ಮಗು ಸಾವಿನ ಪ್ರಕರಣಗಳು ಆಗಬಾರದು ಎಂದು ಹೇಳಿದರು.
- - -
- ಬಸವರಾಜ ವಿ. ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ.
- ಡಿ.ಜಿ.ಶಾಂತನಗೌಡ, ಶಾಸಕ, ಹೊನ್ನಾಳಿ ಕ್ಷೇತ್ರ.
- ಜಿ.ಎಂ.ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.
(ಟಾಪ್ ಕೋಟ್) ದಾವಣಗೆರೆ ಜಿಲ್ಲಾಸ್ಪತ್ರೆ, ಬಳಿ ಬೀದಿನಾಯಿಗಳು ಮತ್ತು ಹಂದಿಗಳು ಹೆಚ್ಚಾಗಿವೆ. ದಾವಣಗೆರೆಯ ವಿದ್ಯಾರ್ಥಿ ಭವನದಿಂದ ಚನ್ನಗಿರಿ ರಸ್ತೆಯ ಉದ್ದಕ್ಕೂ, ನಗರದ ವಿವಿಧೆಡೆ ಮಾಂಸದ ಅಂಗಡಿಗಳು, ಹೋಟೆಲ್‌ಗಳ ಬಳಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಮಹಿಳೆಯರು, ಮಕ್ಕಳು ಓಡಾಡುವುದು ಕಷ್ಟವಾಗಿದೆ. ನಾಯಿಗಳು, ಹಂದಿಗಳ ಹಾವಳಿ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. - ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ, ದಾವಣಗೆರೆ ಕ್ಷೇತ್ರ.
- - -