ಟೇಬಲ್‌ ಟೆನ್ನಿಸ್‌: ಧಾರವಾಡ ಕೆಇ ಬೋರ್ಡ್‌ ಪ್ರಥಮ

KannadaprabhaNewsNetwork |  
Published : Aug 21, 2024, 12:43 AM IST
20ಡಿಡಬ್ಲೂಡಿ8ಕಾಸ್ಮಸ್‌ ಕ್ಲಬ್‌ನ ಟೇಬಲ್‌ ಟೆನ್ನಿಸ್‌ ಮೈದಾನದಲ್ಲಿ ಶಿಕ್ಷಣ ಇಲಾಖೆಯು ಶಾಂತಿ ಸದನ ಪ್ರೌಢಶಾಲೆಯ ಸಂಘಟನೆಯಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಟೇಬಲ್‌ ಟೆನ್ನಿಸ್‌ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.  | Kannada Prabha

ಸಾರಾಂಶ

ಪಾಠದಷ್ಟೇ ಮುಖ್ಯವಾಗಿ ಆಟಗಳು ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಠ್ಯೇತರ ಚಟುವಟಿಕೆಗಳಲ್ಲಿ ಯುವಜನತೆ ಭಾಗವಹಿಸುವುದರಿಂದ ಹೊರ ಜಗತ್ತಿನ ಪರಿಚಯವೂ ಆಗುತ್ತದೆ.

ಧಾರವಾಡ:

ಇಲ್ಲಿಯ ಕಾಸ್ಮಸ್‌ ಕ್ಲಬ್‌ ಟೇಬಲ್‌ ಟೆನ್ನಿಸ್‌ ಮೈದಾನದಲ್ಲಿ ಶಿಕ್ಷಣ ಇಲಾಖೆಯು ಶಾಂತಿ ಸದನ ಪ್ರೌಢಶಾಲೆಯ ಸಂಘಟನೆಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಟೇಬಲ್‌ ಟೆನ್ನಿಸ್‌ ಪಂದ್ಯಾವಳಿ ಯಶಸ್ವಿಯಾಗಿ ನಡೆದವು.

17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಧಾರವಾಡದ ಕೆ.ಇ. ಬೋರ್ಡ್‌ ಪ್ರೌಢಶಾಲೆ ಪ್ರಥಮ, ಹುಬ್ಬಳ್ಳಿ ಶಹರದ ಡಾನ್‌ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ, 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಹುಬ್ಬಳ್ಳಿ ನವನಗರ ರೋಟರಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಹುಬ್ಬಳ್ಳಿಯ ಎನ್‌.ಕೆ. ಠಕ್ಕರ್‌ ಶಾಲೆ ದ್ವಿತೀಯ ಸ್ಥಾನ ಪಡೆದವು.

ಹಾಗೆಯೇ, 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಹುಬ್ಬಳ್ಳಿಯ ಡಾನ್‌ ಬಾಸ್ಕೋ ಶಾಲೆ ಪ್ರಥಮ, ಹುಬ್ಬಳ್ಳಿಯ ಎಂಐಇಎಸ್‌ ಲಯನ್‌ ಶಾಲೆಯ ದ್ವಿತೀಯ, 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ವಿದ್ಯಾನಗರ ಎಂ.ಆರ್‌. ಸಾಕ್ರೆ ಶಾಲೆ ಪ್ರಥಮ ಹಾಗೂ ನವನಗರ ರೋಟರಿ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಪಡೆದವು.

ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದ ಕಾಸ್ಮಸ್‌ ಕ್ಲಬ್‌ ಅಧ್ಯಕ್ಷ ನಿತೀಶ ಟಗರಪುರ, ಪಾಠದಷ್ಟೇ ಮುಖ್ಯವಾಗಿ ಆಟಗಳು ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಠ್ಯೇತರ ಚಟುವಟಿಕೆಗಳಲ್ಲಿ ಯುವಜನತೆ ಭಾಗವಹಿಸುವುದರಿಂದ ಹೊರ ಜಗತ್ತಿನ ಪರಿಚಯವೂ ಆಗುತ್ತದೆ ಎಂದರು.

ಪಂದ್ಯಾವಳಿ ಅವಕಾಶ ಮಾಡಿಕೊಟ್ಟ ಕಾಸ್ಮಸ್‌ ಕ್ಲಬ್‌ ಆಡಳಿತ ಮಂಡಳಿಗೆ ಶಿಕ್ಷಣ ಇಲಾಖೆ ಪರವಾಗಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವಿಷ್ಣು ಹೆಬ್ಬಾರ ಕೃತಜ್ಞತೆ ಸಲ್ಲಿಸಿದರು. ಬಿಇಒ ಅಶೋಕ ಸಿಂಧಗಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶಶಿಕಾಂತ ಬಸಾಪೂರ, ಶಿಕ್ಷಕ ಬಸವರಾಜ ಪಟ್ಟಣದವರ, ಕಾಸ್ಮಸ್‌ ಕ್ಲಬ್‌ ವ್ಯವಸ್ಥಾಪಕ ರಾಜೇಂದ್ರ ಪಾಟೀಲ, ಶೇಖರ ಪಾಟೀಲ, ನೀಲಪ್ಪ ಬೋವೇರೆ ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ