ತಹಸೀಲ್ದಾರ್‌ ನಿಂದನೆ: ಕ್ರಮಕ್ಕೆ ಆಗ್ರಹಿಸಿ ದೂರು

KannadaprabhaNewsNetwork |  
Published : Jan 18, 2026, 03:15 AM IST
ದೂಋು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಾಯಬಾಗ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ತಹಸೀಲ್ದಾರ್‌ಗೆ ಆಕ್ಷೇಪಿತ ಪದ ಬಳಸಿ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್‌ ಮಹಾದೇವ ಸನಮುರಿ ಹಾಗೂ ಸರ್ಕಾರಿ ನೌಕರರ ಸಂಘದಿಂದ ಶುಕ್ರವಾರ ಸಿಪಿಐ ಎಮ್.ಎಮ್.ಡಪ್ಪಿನ ಅವರಿಗೆ ದೂರು ನೀಡಲಾಯಿತು.

ಕನ್ನಡಪ್ರಭ ವಾರ್ತೆ ರಾಯಬಾಗ

ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ತಹಸೀಲ್ದಾರ್‌ಗೆ ಆಕ್ಷೇಪಿತ ಪದ ಬಳಸಿ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್‌ ಮಹಾದೇವ ಸನಮುರಿ ಹಾಗೂ ಸರ್ಕಾರಿ ನೌಕರರ ಸಂಘದಿಂದ ಶುಕ್ರವಾರ ಸಿಪಿಐ ಎಮ್.ಎಮ್.ಡಪ್ಪಿನ ಅವರಿಗೆ ದೂರು ನೀಡಲಾಯಿತು.

ಸರ್ಕಾರಿ ನೌಕರರ ಸಂಘದ ಸದಸ್ಯರು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಕನ್ನಡ ಮತ್ತು ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ತಹಸೀಲ್ದಾರ್‌ ಅವರಿಗೆ ಬೆಂಬಲಿಗೆ ಪಟ್ಟಣದ ಮಿನಿ ವಿಧಾನಸೌಧದಿಂದ ಪೊಲೀಸ್‌ ಠಾಣೆವರೆಗೆ ಮೌನ ಪಾದಯಾತ್ರೆ ಮೂಲಕ ತೆರಳಿ ತಹಸೀಲ್ದಾರ್‌ ಅವರಿಗೆ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.ಘಟನೆಯ ಹಿನ್ನಲೆ

ಜ.12 ರಂದು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ರೈತ ಸಂಘ ಪ್ರತಿಭಟನೆ ಮಾಡುತ್ತಿದ್ದಾಗ, ಸಂಘದ ಮನವಿಯನ್ನು ಸ್ವೀಕರಿಸಲು ತಹಸೀಲ್ದಾರ್‌ ಪ್ರತಿನಿಧಿಯಾಗಿ ಹಿರಿಯ ಶಿರಸ್ತೇದಾರ ಪಿ.ಎಸ್.ಮಂಗಸೂಳಿ ಅವರು ಪಟ್ಟಣದ ಝೆಂಡಾ ಕಟ್ಟೆಯ ಪ್ರತಿಭಟನೆ ಸ್ಥಳಕ್ಕೆ ಮನವಿ ಪತ್ರ ಸ್ವೀಕರಿಸಲು ಹೋಗಿದ್ದರು. ಈ ವೇಳೆ ರೈತ ಸಂಘದ ಸದಸ್ಯ ಎಂದು ಬಿಂಬಿಸಿಕೊಂಡ ಖಾಸಗಿ ವ್ಯಕ್ತಿ ತಹಸೀಲ್ದಾರ್‌ ಅವರಿಗೆ ಆಕ್ಷೇಪಿತ ಪದ ಬಳಸಿ ಅವಮಾನಿಸಿದ್ದಾನೆ. ಇದರಿಂದ ತಹಸೀಲ್ದಾರ್‌ಗೆ ಮತ್ತು ಕಂದಾಯ ಇಲಾಖೆಗೆ ಅಗೌರವ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಶುಕ್ರವಾರ ಸರ್ಕಾರಿ ನೌಕರರ ಸಂಘದ ಸದಸ್ಯರು, ಕಂದಾಯ ಇಲಾಖೆ ಸಿಬ್ಬಂದಿ, ವ್ಯಕ್ತಿ ಮತ್ತು ಆತನಿಗೆ ಪ್ರಚೋದನೆ ನೀಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದರು.ತಹಸೀಲ್ದಾರ್‌ ಮಹಾದೇವ ಸನಮುರಿ, ಉಪ ತಹಸೀಲ್ದಾರ ಡಿ.ಎಸ್.ಜಮಾದಾರ, ತಾಪಂ ಇಒ ಡಾ.ಸುರೇಶ ಕದ್ದು, ತಾ.ಆರೋಗ್ಯಾಧಿಕಾರಿ ಡಾ.ಎಸ್.ಎಂ.ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಚಂದರಗಿ, ಅರಣ್ಯಾಧಾರಿಕಾಗಳಾದ ಉಮೇಶ ಪ್ರಧಾನಿ, ಶಿವಕುಮಾರ.ಡಿ, ಸಿಡಿಪಿಒ ಭಾರತಿ ಕಾಂಬಳೆ, ವಿಶ್ವನಾಥ ಹಾರೂಗೇರಿ, ಸುರೇಶ ಮೇಖಳಿ, ಸಂಗಮೇಶ ನ್ಯಾಮಗೌಡರ, ರಾಜೇಂದ್ರ ಡಬ್ಬಗೋಳ, ಮಲ್ಲಿಕಜಾನ ಕೊರಬು, ವಿನಾಯಕ ಭಾಟೆ, ನಂದಕುಮಾರ ಪಾಟೀಲ, ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳು, ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಕನ್ನಡ ಮತ್ತು ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಡಳಿತ ಸಂಧಾನ ಸಭೆ ವಿಫಲ; ನಾಳೆ ಮಹಾಲಿಂಗಪುರ ಬಂದ್
ಟೀಮ್ ಒನ್ ಟಚ್ ಚಾಂಪಿಯನ್