ಪಿಎಂ ವಿಶ್ವಕರ್ಮ ಯೋಜನೆಯಡಿ ಟೈಲರಿಂಗ್‌ ತರಬೇತಿಗೆ ಚಾಲನೆ

KannadaprabhaNewsNetwork | Updated : Feb 07 2024, 03:50 PM IST

ಸಾರಾಂಶ

ಆರ್ಥಿಕ ಸ್ವಾವಲಂಬನೆಗೆ ತರಬೇತಿಗಳು ಅಗತ್ಯ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಸದುಪಯೋಗಪಡಿಸಿಕೊಳ್ಳಿ ಎಂದು ಮಾಜಿ ಶಾಸಕ ಹಾಗೂ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆರ್ಥಿಕ ಸ್ವಾವಲಂಬನೆಗೆ ತರಬೇತಿಗಳು ಅಗತ್ಯ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಸದುಪಯೋಗಪಡಿಸಿಕೊಳ್ಳಿ ಎಂದು ಮಾಜಿ ಶಾಸಕ ಹಾಗೂ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದಲ್ಲಿ ಬಿವಿವಿ ಸಂಘದ ಜನಶಿಕ್ಷಣ ಸಂಸ್ಥೆ ಬಾಗಲಕೋಟೆ ಇವರ ಆಶ್ರಯದಲ್ಲಿ ಸೋಮವಾರ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಟ್ರೈಲರಿಂಗ್ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ 18 ವಿವಿಧ ವೃತ್ತಿಗಳು ಬರುತ್ತವೆ, ಮಹಿಳೆಯರು ಟ್ರೈಲರಿಂಗ್ ತರಬೇತಿ ಜೊತೆಗೆ ಬೇರೆ ಬೇರೆ ಸೌಲಭ್ಯಗಳನ್ನು ಪಡೆದುಕೊಂಡು ಸ್ವಂತ ಉದ್ಯೋಗ ಪ್ರಾರಂಭಿಸಿ ತಮ್ಮ ಆದಾಯ ಹೆಚ್ಚಿಸಿಕೊಂಡು ಸ್ವಂತ ಉದ್ದಿಮೆ ಪ್ರಾರಂಭಿಸಿ ಅನೇಕರಿಗೆ ಉದ್ಯೊಗ ನೀಡುವಂತರಾಗಿರಿ, ಆರ್ಥಿಕ ಸ್ವಾವಲಂಬಿಗಳಾಗಲು ಈ ತರಬೇತಿಗಳು ಅಗತ್ಯವಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಹಾಗೂ ಜನಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಮಹೇಶ ಅಥಣಿ ಮಾತನಾಡಿದರು. ಸಂಘದ ಸದಸ್ಯರಾದ ಎಸ್.ಕೆ. ಶಾಬಾದಿ, ಎಸ್.ಆರ್. ಮನಹಳ್ಳಿ, ಬಿ.ಎಸ್. ಅಂಗಡಿ, ವೀರಣ್ಣ ಕಿರಗಿ, ಶರಣಬಸವ ಹುನ್ನೂರ, ನಾಗರತ್ನಾ ಟಿ.ಎಂ, ವೇದಿಕೆ ಮೇಲೆ ಉಪಸ್ಥಿತರಿದ್ದರು. ಬಿ.ಕೆ. ಕೋರಿ ಕಾರ್ಯಕ್ರಮ ನೀರೂಪಿಸಿದರು, ಎ.ಎಸ್. ಗೌಡರ ಸ್ವಾಗತಿಸಿದರು. ಎಸ್.ಜಿ. ಕಬ್ಬಿಣ ವಂದಿಸಿದರು.

Share this article